ಆರ್ಥಿಕ ಚೇತರಿಕೆಗೆ ಕೇಂದ್ರಕ್ಕೆ ಮೂರು ಟಿಪ್ಸ್ ನೀಡಿದ ಮಾಜಿ ಪಿಎಂ ಮನಮೋಹನ್ ಸಿಂಗ್

Public TV
1 Min Read
Manmohan Singh A

ನವದೆಹಲಿ: ದೇಶದ ಅರ್ಥವ್ಯವಸ್ಥೆಯ ಚೇತರಿಕೆಗಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೇಂದ್ರ ಸರ್ಕಾರಕ್ಕೆ ಮೂರು ಸಲಹೆಗಳನ್ನು ನೀಡಿದ್ದಾರೆ.

ಮಾಹಾಮಾರಿ ಕೊರೊನಾ ವೈರಸ್ ದಾಳಿಯಿಂದ ದೇಶದ ಅರ್ಥವ್ಯವಸ್ಥೆ ಕುಸಿಯುತ್ತಿದೆ. ಕೊರೊನಾ ಆಗಮನಕ್ಕೂ ಮುನ್ನವೇ ದೇಶದದ ಆಟೋ ತಂತ್ರಜ್ಞಾನ, ಟೆಲಿಕಾಮ್, ಎನ್‍ಬಿಎಫ್‍ಸಿ ಅಂತಹ ವಲಯಗಳು ಆರ್ಥಿಕ ಸಂಕಷ್ಟದಲ್ಲಿದ್ದವು. ಗಾಯದ ಮೇಲೆ ಬರೆ ಎಂಬಂತೆ ಕೊರೊನಾ ವಕ್ಕರಿಸಿತು. ಮಹಾಮಾರಿಯಿಂದಾಗಿ ಅನೇಕ ಆರ್ಥಿಕ ವಲಯಗಳ ನಷ್ಟ ಅನುಭವಿಸುತ್ತಿದ್ರೆ, ಎಷ್ಟೋ ಜನ ನಿರುದ್ಯೋಗಿಗಳಾಗಿದ್ದಾರೆ. ಕೇಂದ್ರ ಸರ್ಕಾರ ಆರ್ಥಿಕ ಸುಧಾರಣೆಗಾಗಿ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದು, ಜನರ ಆರ್ಥಿಕ ಮಟ್ಟ ಸುಧಾರಣೆಗೆ ಹಲವು ಯೋಜನೆಗಳನ್ನು ಪ್ರಕಟಿಸಿದೆ. ಆದ್ರೆ ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಆರ್ಥಿಕ ಸುಧಾರಣೆಗಾಗಿ ಮೂರು ಮಹತ್ವದ ನಿರ್ಧಾರ ಕೈಗೊಳ್ಳಬೇಕಿದ ಎಂದಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ನೀತಿಗಳು 14 ಕೋಟಿ ಜನರಿಗೆ ನಿರುದ್ಯೋಗ ನೀಡಿವೆ: ರಾಹುಲ್ ಗಾಂಧಿ

Nirmala sitharaman

ಆರ್ಥಿಕ ಚೇತರಿಕೆಗೆ ತ್ರಿ ಸೂತ್ರ:
1. ಸರ್ಕಾರ ಮೊದಲು ದೇಶದ ಜನರಿಗೆ ಆರ್ಥಿಕ ಭದ್ರತೆ ನೀಡಬೇಕು. ಅವರ ಜೀವನೋಪಯಕ್ಕಾಗಿ ನೇರ ನಗದು ವರ್ಗಾವಣೆ ಮಾಡಬೇಕು. ಹಾಗೆ ಜನರ ಖರ್ಚು ಮಾಡುವ ಸಾಮಾಥ್ರ್ಯವನ್ನು ಹೆಚ್ಚಿಸಲು ಸರ್ಕಾರ ಮುಂದಾಗಬೇಕು.

2. ಕ್ರೆಡಿಟ್ ಗ್ಯಾರೆಂಟಿ ಕಾರ್ಯಕ್ರಮಗಳ ಮೂಲಕ ಹೊಸ ವ್ಯವಹಾರಗಳಿಗೆ ಸರ್ಕಾರ ನೆರವಾಗಬೇಕು. ಹೊಸ ವ್ಯವಹಾರಗಳಿಂದ ಉದ್ಯೋಗ ಸೃಷ್ಟಿಯಾಗುತ್ತದೆ.

3. ಸಾಂಸ್ಥಿಕ ಸ್ವಾಯತತ್ತೆಯ ಸಹಾಯದ ಮೂಲಕ ಹಣಕಾಸಿನ ವಲಯವನ್ನು ಸುಧಾರಿಸಬೇಕಿದೆ. ಸದ್ಯದ ಪರಿಸ್ಥಿತಿಯನ್ನು ಆರ್ಥಿಕ ಬಿಕ್ಕಟ್ಟು ಎಂದು ಹೇಳಲಾರೆ, ಆದ್ರೆ ಇದೊಂದು ದೇಶದಲ್ಲಿ ದೀರ್ಘ ಸಮಯದವರೆಗೆ ದೇಶದಲ್ಲಿರುವ ಆರ್ಥಿಕ ಸಮಸ್ಯೆ ಎಂದು ಮನಮೋಹನ್ ಸಿಂಗ್ ವ್ಯಾಖ್ಯಾನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *