– ಅರ್ಧಶತಕ ಸಿಡಿಸಿ ಮಿಂಚಿದ ಕನ್ನಡಿಗ
– ಮೊದಲ 3 ಓವರ್ ಕೇವಲ 6 ರನ್
ದುಬೈ: ಇಂದು ನಡೆಯುತ್ತಿರುವ ಐಪಿಎಲ್-2020ಯ 26ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್‍ರೈಸರ್ಸ್ ಹೈದರಾಬಾದ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 159 ರನ್‍ಗಳ ಗುರಿ ನೀಡಿದೆ.
ರಾಯಲ್ಸ್ ಬೌಲಿಂಗ್ ದಾಳಿ
ಮೊದಲ ಓವರಿನಿಂದಲೇ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ ಗಳು ಹೈದರಾಬಾದ್ ತಂಡದ ಆಟಗಾರರ ಮೇಲೆ ಸವಾರಿ ಮಾಡಿದರು. ಪವರ್ ಪ್ಲೇನಲ್ಲಿ ಹೈದರಾಬಾದ್ ತಂಡದ ಬ್ಯಾಟ್ಸ್ ಮ್ಯಾನ್‍ಗಳು ರನ್ ಕದಿಯುವಲ್ಲಿ ಕಷ್ಟಪಟ್ಟರು. ನಾಲ್ಕು ಓವರ್ ಬೌಲ್ ಮಾಡಿದ ಜೋಫ್ರಾ ಆರ್ಚರ್ ಒಂದು ವಿಕೆಟ್ ಪಡೆದು ಕೇವಲ 25 ರನ್ ನೀಡಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಜಯದೇವ್ ಉನಾದ್ಕಟ್ ಅವರು ನಾಲ್ಕು ಓವರಿನಲ್ಲಿ ಒಂದು ವಿಕೆಟ್ ಕಿತ್ತು 31 ರನ್ ನೀಡಿದರು.
Advertisement
Another breakthrough for the @rajasthanroyals. Unadkat strikes and Pandey has to depart.#SRH 123/3 after 18 overs. How many more will they add to their tally?#Dream11IPL pic.twitter.com/5CvZUlDGIF
— IndianPremierLeague (@IPL) October 11, 2020
Advertisement
ಇನ್ನಿಂಗ್ಸ್‍ನ ಆರಂಭದಿಂದಲೇ ರಾಜಸ್ಥಾನ್ ರಾಯಲ್ಸ್ ಬೌಲರ್ಸ್ ಗಳು ಬಿಗುವಿನ ಬೌಲಿಂಗ್ ದಾಳಿ ಮಾಡಿದರು. ಪವರ್ ಪ್ಲೇ ಹಂತದಲ್ಲೇ ಮೊದಲ ಮೂರು ಓವರಿಗೆ ಕೇವಲ ಆರು ರನ್ ಬಿಟ್ಟುಕೊಟ್ಟರು. ಇದಾದ ನಂತರ ನಾಲ್ಕನೇ ಓವರ್ ನಾಲ್ಕನೇ ಬಾಲಿನಲ್ಲಿ ಜಾನಿ ಬೈರ್‌ಸ್ಟೋವ್ ಅವರು 16 ರನ್ ಸಿಡಿಸಿ ಸಂಜು ಸ್ಯಾಮ್ಸನ್ ಅವರು ಹಿಡಿದ ಸೂಪರ್ ಕ್ಯಾಚಿಗೆ ಬಲಿಯಾದರು. ನಂತರ ಜೊತೆಯಾದ ಡೇವಿಡ್ ವಾರ್ನರ್ ಮತ್ತು ಮನೀಶ್ ಪಾಂಡೆ ತಾಳ್ಮೆಯ ಆಟಕ್ಕೆ ಮುಂದಾದರು.
Advertisement
FIFTY!@im_manishpandey brings up his 17th IPL half-century off 40 deliveries
Live – https://t.co/uaylR8mH7g #Dream11IPL pic.twitter.com/NieY13mDIu
— IndianPremierLeague (@IPL) October 11, 2020
Advertisement
ಮಂದಗತಿಯಿಂದ ಇನ್ನಿಂಗ್ಸ್ ಆರಂಭಿಸಿದ ಸನ್‍ರೈಸರ್ಸ್ ಹೈದರಾಬಾದ್ 7ನೇ ಓವರ್ ಮುಕ್ತಾಯದ ವೇಳಗೆ 38 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿತು. ಈ ವೇಳೆ ಉತ್ತಮ ಜೊತೆಯಾಟವಾಡಿದ ವಾರ್ನರ್ ಮತ್ತು ಮನೀಶ್ ಪಾಂಡೆ ಜೊಡಿ 37 ಬಾಲಿಗೆ ಅರ್ಧಶತಕದ ಜೊತೆಯಾಟವಾಡಿತು. ಆರಂಭದಿಂದ ಉತ್ತಮವಾಗಿ ಆಡಿಕೊಂಡು ಬಂದ ನಾಯಕ ವಾರ್ನರ್ ಅವರು 38 ಬಾಲಿಗೆ 48 ರನ್ ಸಿಡಿಸಿ ಜೋಫ್ರಾ ಆರ್ಚರ್ ಅವರಿಗೆ ಕ್ಲೀನ್ ಬೌಲ್ಡ್ ಆದರು.
WATCH – Catch Brilliance: Sensational Sanju
A bouncer from Kartik Tyagi, pulled away by Jonny Bairstow and caught brilliantly by @IamSanjuSamson. What a catch!https://t.co/tW2llEO3xf #Dream11IPL
— IndianPremierLeague (@IPL) October 11, 2020
ಜಾನಿ ಬೈರ್‌ಸ್ಟೋವ್ ಔಟ್ ಆದ ನಂತರ ಕಣಕ್ಕಿಳಿದು ಉತ್ತಮವಾಗಿ ಬ್ಯಾಟ್ ಬೀಸಿದ ಮನೀಶ್ ಪಾಂಡೆ 40 ಬಾಲಿನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ನಂತರ 17ನೇ ಓವರ್ ನಾಲ್ಕನೇ ಬಾಲಿನಲ್ಲಿ 44 ಬಾಲಿಗೆ 54 ರನ್ ಸಿಡಿಸಿ ಆಡುತ್ತಿದ್ದ ಮನೀಶ್ ಪಾಂಡೆ ಅವರು ಜಯದೇವ್ ಉನಾದ್ಕಟ್ ಅವರು ಬೌಲಿಂಗ್‍ನಲ್ಲಿ ಕ್ಯಾಚ್ ಕೊಟ್ಟ ಔಟ್ ಆಗಿ ಪೆವಿಲಿಯನ್ ಸೇರಿದರು. ನಂತರ ಕೊನೆಯ ಬಾಲಿನಲ್ಲಿ ಪ್ರಿಯಮ್ ಗರ್ಗ್ ಅವರು ರನೌಟ್ ಆದರು.