ಯಾದಗಿರಿ: ಆರೋಪಗಳ ಹಿನ್ನೆಲೆ ಇರುವ ಉದ್ಯಮಿ ಮಗಳ ಹುಟ್ಟುಹಬ್ಬಕ್ಕೆ ಬೆಲೆ ಬಾಲು ಗಿಫ್ಟ್ ಕೊಟ್ಟು ಶಹಪುರ ತಹಶೀಲ್ದಾರ ಮೆಹಬೂಬಿ ಈಗ ಸುದ್ದಿಯಲ್ಲಿದ್ದಾರೆ. ಅಪರಾಧ ಹಿನ್ನೆಲೆ ಇರುವ ಉದ್ಯಮಿ ಮಗಳಿಗೆ ಸಾರ್ವಜನಿಕವಾಗಿ ಶಹಪುರ ತಹಶೀಲ್ದಾgರ್ ಮೆಹಬೂಬಿ ಮತ್ತು ಪತಿ ಚಿನ್ನದ ಸರ ಉಡುಗೊರೆಯನ್ನು ನೀಡಿದ್ದಾರೆ.
ಇನ್ನೂ ತಹಶೀಲ್ದಾರ್ ಮೆಹಬೂಬಿ ಅವರ ಪತಿ ಕೂಡ ಹಿರಿಯ ಸರ್ಕಾರಿ ಅಧಿಕಾರಿಯಾಗಿದ್ದು, ಬೆಲೆ ಬಾಳುವ ಉಡುಗೊರೆ ನೀಡುವ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಶಹಪುರ ತಹಶೀಲ್ದಾರರ ಬೆಲೆ ಬಾಳುವ ಗಿಫ್ಟ್ ವಿಚಾರ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ. ಶಹಪುರ ತಾಲೂಕಿನ ಚಾಮನಾಳ ಗ್ರಾಮದ ಉದ್ಯಮಿ ಮಲಿಕ್ ಎಂಬವರ ಮಗಳ ಬರ್ತ್ ಡೇ ಪಾರ್ಟಿ, ಜನವರಿ 03 ರಂದು ಶಹಪುರ ಸಮೀಪದ ಬಿ.ಗುಡಿಯಲ್ಲಿರುವ ಅವರ ಮನೆಯಲ್ಲಿ ನಡೆದಿತ್ತು. ಸರ್ಕಾರದ ಅಕ್ಕಿ ಅಕ್ರಮವಾಗಿ ಮಾರಾಟ ಮತ್ತು ಅಕ್ರಮ ಮದ್ಯ ಮಾರಾಟ, ಜೂಜಾಟದ ಆರೋಪಗಳು ಉದ್ಯಮಿ ಮಲಿಕ್ ಮೇಲಿದೆ.
Advertisement
ಬರ್ತ್ ಡೇ ಪಾರ್ಟಿಯಲ್ಲಿ ತಹಶೀಲ್ದಾರ್ ಮಾತ್ರವಲ್ಲದೇ ಪೊಲೀಸ್ ಇಲಾಖೆ ಅಧಿಕಾರಿಗಳು ಸಹ ಭಾಗಿಯಾಗಿ ದುಬಾರಿ ಮೊತ್ತದ ಉಡುಗೊರೆ ನೀಡಿದ್ದಾರೆ ಎನ್ನಲಾಗುತ್ತಿದೆ. ಆರೋಪಗಳ ಹಿನ್ನೆಲೆ ಇರುವ ಉದ್ಯಮಿ ಜೊತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೂ ಮತ್ತು ಶಹಪುರ ತಹಶಿಲ್ದಾರರ ಮೆಹಬೂಬಿಗೂ ಏನು ಕೆಲಸ? ಜನರ ಕೆಲಸ ಮಾಡಲು ಸಮಯ ಇಲ್ಲ ಎನ್ನುವ ತಹಶೀಲ್ದಾರರಿಗೆ ಪಾರ್ಟಿ ಮಾಡಲು ಸಮಯ ಹೇಗೆ ಸಿಗುತ್ತೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
Advertisement
ಕಾರ್ಯಕ್ರಮದಲ್ಲಿ ಕೊರೊನಾದ ಯಾವುದೇ ನಿಯಮಗಳು ಪಾಲನೆ ಆಗಿಲ್ಲ, ತಾಲೂಕಿನಲ್ಲಿ ಕೊರೊನಾ ನಿಯಮಗಳನ್ನು ಸಮರ್ಪಕವಾಗಿ ಜಾರಿ ಮಾಡಬೇಕಾದ ಸ್ವತಃ ತಹಶೀಲ್ದಾರ್ ಅವರೇ ಮಾಸ್ಕ್ ಧರಿಸಿಲ್ಲ. ಇದು ಸಾರ್ವಜನಿಕ ಅಸಮಾಧಾನಕ್ಕೆ ಸಹ ಕಾರಣವಾಗಿದೆ. ಅಲ್ಲದೆ ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಅಂತ ಜನ ಆಗ್ರಹಿಸುತ್ತಿದ್ದಾರೆ.