ಹಾವೇರಿ: ಕೊರೊನಾ ಮೂರನೇ ಅಲೆ ಬರೋ ಸಾಧ್ಯತೆ ಇದೆ. ರಾಜಕಾರಣ ಮಾಡೋ ಸಮಯ ಇದಲ್ಲ. ರಾಜಕಾರಣಕ್ಕೆ ಪ್ರತ್ಯೇಕ ಸಮಯ ಮೀಸಲಿಡೋಣ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಹಾವೇರಿ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷ ವಿರೋಧಿ, ಅನುಪಯುಕ್ತ ಹೇಳಿಕೆ ನೀಡಿದರೆ ಕಠಿಣ ಕ್ರಮ ಕೈಗೊಳ್ಳೋದಾಗಿ ಅರುಣ್ ಸಿಂಗ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: WTCಫೈನಲ್ ಭಾರತ ಗೆದ್ದರೆ ಬೆತ್ತಲಾಗುವೆ – ಪೂನಂ ಪಾಂಡೆ
ಹಿರೇಕೆರೂರು ಪಟ್ಟಣದಲ್ಲಿ 5 ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಸಂತೆ ಮೈದಾನಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಾಯಿತು.#Hirekerur | @BSYBJP | @BJP4Karnataka | @DDChandanaNews | @KarnatakaVarthe pic.twitter.com/e86jdOqaFp
— Kourava B.C.Patil (@bcpatilkourava) June 21, 2021
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಸಿಎಂ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥರ ಆರೋಪಗಳು ಆಧಾರದ ರಹಿತ ಆರೋಪಗಳಾಗಿವೆ. ಇದೊಂದು ಬೇಸ್ ಲೆಸ್ ಹೇಳಿಕೆಯಾಗಿದೆ. ಆರೋಪ ಮಾಡೋರಿಗೆ ಬೇರೆ ಕೆಲಸವಿಲ್ಲ, ಆರೋಪ ಮಾಡ್ತಿದ್ದಾರೆ. ಶ್ರೀರಾಮನ ದೇವಸ್ಥಾನ ಕಟ್ಟಬೇಕು ಎಂಬುದು ಬಿಜೆಪಿಯವರ ಅಜೆಂಡಾದಲ್ಲಿದೆ. ರಾಮ ಮಂದಿರದ ಹಣವನ್ನ ಬಳಕೆ ಮಾಡಿಕೊಳ್ಳುವ ಪರಿಸ್ಥಿತಿ ಬಿಜೆಪಿಗೆ ಬಂದಿಲ್ಲ. ಪಿಎಂ ಕೇರ್ಸ್ ಲೆಕ್ಕವನ್ನ ಜನರು ಕೇಳಿದರೆ ನೀಡುತ್ತೇವೆ. ಕಾಂಗ್ರೆಸ್ನವರಿಗೆ ಇದರ ಲೆಕ್ಕ ಕೊಡೋ ಅಗತ್ಯವಿಲ್ಲ. ಆರೋಪ ಮಾಡೋದು ಬಿಟ್ರೆ ಬೇರೇನೂ ಗೊತ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.
ಲಸಿಕೆ ಸಂಪೂರ್ಣ ಸುರಕ್ಷಿತ ಹಾಗೂ ಸೋಂಕಿನ ವಿರುದ್ಧ ಹೋರಾಡಲು ಸಮರ್ಥವಾಗಿದ್ದು 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರು ತಪ್ಪದೇ ಲಸಿಕೆ ಪಡೆಯಲು ವಿನಂತಿಸಿಕೊಳ್ಳುತ್ತೇನೆ.
• ಲಸಿಕೆ ಹಾಕಿಸಿಕೊಳ್ಳಿ, ಸುರಕ್ಷಿತವಾಗಿರಿ!
✓ ಲಸಿಕೆಗಳು ಸುರಕ್ಷಿತ, ಲಸಿಕೆ ಬಗ್ಗೆ ವದಂತಿಗಳಿಗೆ ಲಕ್ಷ್ಯ ಕೊಡಬೇಡಿ.
2/
— Kourava B.C.Patil (@bcpatilkourava) June 21, 2021