ಬೆಂಗಳೂರು: ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಎರಡೂ ಖಾತೆ ಯಾರಿಗೆ ಬೇಕಾದರೂ ಕೊಡಲಿ. ಆದರೆ ಒಬ್ಬರಿಗೆ ಕೊಡಿ ಅನ್ನೋದು ನನ್ನ ಮನವಿ. ನಾನು ಈ ಬಗ್ಗೆ ಜಾಸ್ತಿ ಕಾಮೆಂಟ್ ಮಾಡಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ಖಾತೆ ಹಂಚಿಕೆಯ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಒಬ್ಬರಿಗೆ ಕೊಡಲಿ. ಈ ಬಗ್ಗೆ ಸಿಎಂ ಭೇಟಿ ಮಾಡಿ ಮನವಿ ಮಾಡ್ತೀನಿ. ವ್ಯಾಕ್ಸಿನ್ ನೀಡುತ್ತಿರುವ ಈ ಸಂದರ್ಭದಲ್ಲಿ ಎರಡು ಖಾತೆಯನ್ನು ಬೇರೆ ಮಾಡುವುದು ಸರಿಯಲ್ಲ. ಈಗ ವ್ಯಾಕ್ಸಿನ್ ಉಸ್ತುವಾರಿ ಯಾರು ಅಂದರೆ ಆ ಪ್ರೆಶ್ನೆಗೆ ನನ್ನ ಬಳಿ ಉತ್ತರ ಇಲ್ಲ ಎಂದು ಹೇಳಿದ್ದಾರೆ.
Advertisement
Advertisement
ವೈಯಕ್ತಿಕ ಆಸೆ ಆಕಾಂಕ್ಷೆಗಿಂತ ರಾಜ್ಯದ ಹಿತಾಸಕ್ತಿ ಮುಖ್ಯ. ನಾನು ಅಶೋಕ್ ಜೊತೆ ಯಾವಾಗಲೂ ಮಾತಾಡಿಲ್ಲ. ನನಗೆ ಕರೆನು ಮಾಡಿಲ್ಲ. ನನ್ನ ಜೊತೆ ಬೊಮ್ಮಾಯಿ ಕರೆ ಮಾಡಿ ಮಾತಾಡಿದರು. ನಾನು ರಾಜಕೀಯವಾಗಿ ಸೆಲ್ಫ್ ಸೂಸೈಡ್ ಅಟೆಮ್ಟ್ ಮಾಡಿ ಬಂದವನು. ಎಂತಹ ಪರಿಸ್ಥಿತಿಯಲ್ಲಿ ರಿಸ್ಕ್ ತಗೆದುಕೊಂಡು ಬಂದಿದ್ದೇವೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.
Advertisement
ಗೋಪಾಲಯ್ಯ ಅವರು ಬಹಳ ಕ್ರೀಯಾಶೀಲವಾಗಿ ಕೆಲಸ ಮಾಡಿದ್ದಾರೆ. ನಾರಾಯಣ ಗೌಡ ಹಾಗೂ ಎಂಟಿಬಿ ನಾಗರಾಜ್ ಎಲ್ಲಾ ಅವರ ನೋವುಗಳನ್ನು ಹೇಳಿಕೊಂಡಿದ್ದಾರೆ. ಪಕ್ಷದ ಕುರಿತಾಗಿ ತಪ್ಪು ಸಂದೇಶ ರವಾನೆಯಾಗಬಾರದು. ವೈಯಕ್ತಿಕ ಆಸೆ ಆಕಾಂಕ್ಷೆಗಳಿಗಿಂತ ಮುಖ್ಯವಾಗಿ ರಾಜ್ಯದ ಹಿತ ದೃಷ್ಟಿ ಮುಖ್ಯವಾಗಿದೆ. ರಾಜಕೀಯ ವಿಶೇಷ ಘಟನಾವಳಿ ನಡೆಯುವ ಮೂಲಕ ಸರ್ಕಾರ ರಚನೆಯಾಗಿರುವುದು ತಿಳಿದಿದೆ. ಆ ಸಮಯದಲ್ಲಿ ಕೊಟ್ಟಿರುವ ಮಾತನನ್ನು ಪಾಲಿಸಬೇಕಾಗಿದೆ ಎಂದು ತಿಳಿಸಿದ್ದಾರೆ.