– 2,23,846 ಕೋಟಿ ರೂ. ಅನುದಾನ ಪ್ರಕಟ
ನವದೆಹಲಿ: ಕೊರೊನಾ ಮಹಾಮಾರಿ ಕಾಲಿಟ್ಟಿದ್ದೇ ಇಟ್ಟಿದ್ದು, ಆರೋಗ್ಯದ ಮಹತ್ವ ಇಡೀ ಜಗತ್ತಿಗೆ ಗೊತ್ತಾಗಿದೆ. ಹೀಗಾಗಿ ಇವತ್ತಿನ ಬಜೆಟ್‍ನಲ್ಲೂ ನಿರ್ಮಲಾ ಸೀತಾರಾಮನ್ ಆರೋಗ್ಯ ಕ್ಷೇತ್ತಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.
ನಿರೀಕ್ಷೆಯಂತೆ ಆರೋಗ್ಯ ಸೇವೆಗಳ ಮೇಲಿನ ಅನುದಾನವನ್ನು ದೊಡ್ಡಮಟ್ಟದಲ್ಲಿ ಹೆಚ್ಚಿಸಿದ್ದಾರೆ. ಆರೋಗ್ಯ ವಲಯಕ್ಕೆ 2,23,846 ಕೋಟಿ ಮೀಸಲಿಟ್ಟಿದ್ದಾರೆ. ಕಳೆದ ವರ್ಷದ ಬಜೆಟ್‌ನಲ್ಲಿ 94,452 ಕೋಟಿ ಅನುದಾನ ಹಂಚಿಕೆಯಾಗಿತ್ತು. ಕಳೆದ ವರ್ಷದ ಬಜೆಟ್‌ಗೆ ಹೋಲಿಸಿದರೆ ಶೇ.137ರಷ್ಟು ಹೆಚ್ಚಳವಾಗಿದೆ.
Advertisement
Advertisement
ಆರೋಗ್ಯವಲಯಕ್ಕೆ ಸಿಕ್ಕಿದ್ದು ಏನು?
* ಪ್ರಧಾನಿ ಆತ್ಮನಿರ್ಭರ್ ಸ್ವಸ್ಥ ಭಾರತ ಯೋಜನೆ’ ಘೋಷಿಸಿ 64,184 ಕೋಟಿ ಅನುದಾನ.
* ಇದರಿಂದ 28ಸಾವಿರ ಆರೋಗ್ಯ ಕೇಂದ್ರಗಳಿಗೆ ಅನುಕೂಲ
* 11 ರಾಜ್ಯಗಳಲ್ಲಿ 17 ಸಾವಿರ ಗ್ರಾಮೀಣ ಆರೋಗ್ಯ ಕೇಂದ್ರಗಳ ಸ್ಥಾಪನೆ
* 602 ಜಿಲ್ಲೆಗಳಲ್ಲಿಯೂ ಕ್ರಿಟಿಕಲ್ ಹೆಲ್ತ್ ಕೇರ್ ಹಾಸ್ಪಿಟಲ್
Advertisement
Advertisement
* ಅಪೌಷ್ಠಿಕತೆ ನಿವಾರಣೆಗಾಗಿ 112 ಜಿಲ್ಲೆಗಳಲ್ಲಿ ಮಿಷನ್ ಪೋಷಣ್ 2.0 ಜಾರಿ
* ನ್ಯುಮೋನಿಯಾ ತಡೆಗೆ ದೇಶಾದ್ಯಂತ ದೇಸೀ ವ್ಯಾಕ್ಸಿನ್ (ಈಗ 5 ರಾಜ್ಯಗಳಿಗೆ ಸೀಮಿತವಾಗಿದೆ)
* 5 ಹೊಸ ರೋಗ ನಿಯಂತ್ರಣ ಕೇಂದ್ರಗಳ ನಿರ್ಮಾಣ
* 15 ತುರ್ತು ಶಸ್ತ್ರ ಚಿಕಿತ್ಸಾ ಕೇಂದ್ರಗಳ ಸ್ಥಾಪನೆ
* 4 ಪ್ರಾದೇಶಿಕ ವೈರಲ್ ಲ್ಯಾಬ್‍ಗಳ ಸ್ಥಾಪನೆ
* 20 ಮಹಾನಗರಗಳಲ್ಲಿ ಯೋಗ ನಿಯಂತ್ರಣ ಕೇಂದ್ರ ಸ್ಥಾಪನೆ
* 32 ವಿಮಾನ ನಿಲ್ದಾಣಗಳಲ್ಲಿ, 11 ಬಂದರುಗಳಲ್ಲಿ ಆರೋಗ್ಯ ಕೇಂದ್ರ
* 50 ತುರ್ತು ಆಪರೇಷನ್ ಕೇಂದ್ರ, 2 ಮೊಬೈಲ್ ಆಸ್ಪತ್ರೆ ಸ್ಥಾಪನೆ
* ರೋಗ ತಡೆಗಟ್ಟುವಿಕೆ, ರೋಗ ನಿವಾರಕ, ಯೋಗಕ್ಷೇಮ ಅಂತ 3 ವಿಭಾಗಗಳಾಗಿ ವಿಂಗಡಣೆ