– ಐವರು ಪತ್ನಿಯರಿರೋದನ್ನು ತಿಳಿದು ಒಪ್ಪದ ಪತ್ನಿ
ಗಾಂಧಿನಗರ: ತನ್ನ ಪತಿಗಿರುವ ಅಕ್ರಮ ಸಂಬಂಧ ತಿಳಿದ ಪತ್ನಿ ಆತನ ಜೊತೆ ಸೆಕ್ಸ್ ಗೆ ಒಪ್ಪಲಿಲ್ಲ. ಹೀಗಾಗಿ ಪತಿ 7 ನೇ ಮದುವೆಯಾಗಲು ರೆಡಿಯಾದ ವಿಚಿತ್ರ ಘಟನೆಯೊಂದು ಗುಜರಾತ್ ನ ಸೂರತ್ ನಲ್ಲಿ ನಡೆದಿದೆ.
ಹೌದು. ಪತ್ನಿಗಿಂತ ಪತಿ ಅಯ್ಯುಬ್ ಡೆಗಿಯ 21 ವರ್ಷದ ದೊಡ್ಡವನಾಗಿದ್ದಾನೆ. ತನ್ನ ಪತಿಗೆ ಈಗಾಗಲೇ ಐವರು ಪತ್ನಿಯರು ಇರುವುದನ್ನು ಮನಗಂಡ ಪತ್ನಿ, ಆತನ ಜೊತೆಗೆ ಲೈಂಗಿಕ ಸಂಬಂಧ ಹೊಂದಲು ನಿರಾಕರಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಪತಿ ಇದೀಗ 7 ನೇ ಮದುವೆಗೆ ಸಜ್ಜಾಗಿದ್ದಾನೆ.
ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಂದ ಡೆಗಿಯಾ ಹುಡುಗಿಯ ಹುಡುಕಾಟದಲ್ಲಿದ್ದಾನೆ. ಈತ ಕಲ್ಪೇತಾ ಮೂಲದ ರೈತನಾಗಿದ್ದು, ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಆರನೇ ಮದುವೆಯಾಗಿದ್ದನು. ಆದರೆ ಈಗಾಗಲೇ 5 ಮಂದಿ ಪತ್ನಿಯರು ಇರುವುದನ್ನು ತಿಳಿದ ಪತ್ನಿ ಅಂದಿನಿಂದ ಈತನ ಜೊಎತೆಗ ಲೈಂಗಿಕ ಸಂಬಂಧ ಹೊಂದರಲಿಲ್ಲ.
ನನ್ನೊಂದಿಗೆ ಸಂಬಂಧ ಉಳಿಸಿಕೊಳ್ಳಬಲ್ಲ ಹೆಂಡ್ತಿ ಬೇಕು!
ಮಹಿಳೆ ಪತಿ ಜೊತೆ ಲೈಂಗಿಕ ಸಂಪರ್ಕ ಹೊಂದಲು ನಿರಾಕರಿಸಿದ್ದರಿಂದ ದಂಪತಿ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಬೇರ್ಪಟ್ಟರು. 63 ವರ್ಷದ ವ್ಯಕ್ತಿ ಜೊತೆ ಆಕೆ ಸೆಕ್ಸ್ ಮಾಡಲು ನಿರಾಕರಿಸಿದಳು. ಅಲ್ಲದೆ ತನಗೆ ಸೋಂಕು ಇದೆ ಎಂದು ಹೇಳಿದ್ದಾಳೆ. ನನಗೆ ಎದೆನೋವು, ಸಕ್ಕರೆ ಕಾಯಿಲೆ ಹಾಗೀ ಇತರೆ ಕಾಯಿಲೆಗಳಿವೆ. ಹೀಗಾಗಿ ನನ್ನ ಜೊತೆ ಸಂಬಂಧ ಉಳಿಸಿಕೊಳ್ಳಬಲ್ಲ ಹೆಂಡತಿ ಬೇಕು ಎಂದು ವ್ಯಕ್ತಿ ಹೇಳಿದ್ದಾನೆ.
ವಿಧವೆಯಾಗಿದ್ದರಿಂದ ನಿನ್ನನ್ನು ನೋಡಿಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದನು. ಹೀಗಾಗಿ ನಾನು ಆತನ ಮಾತು ನಂಬಿ ಆತನೊಂದಿಗೆ ಬದಕಲು ತೀರ್ಮಾನಿಸಿದೆ. ಅಲ್ಲದೆ ಆತ ತನಗೆ ಮನೆಯೊಂದಿಗೆ 2 ಲಕ್ಷ ರೂ.ಗಳ ಆಭರಣವನ್ನು ನೀಡುವುದಾಗಿ ಭರವಸೆ ನೀಡಿದ್ದಾನೆ ಎಂದು ಮಹಿಳೆ ತಿಳಿಸಿದ್ದಾಳೆ. ಆದರೆ ಇದುವರೆಗೆ ವ್ಯಕ್ತಿ ನೀಡಿರುವ ಭರವಸೆಗಳನ್ನು ಈಡೇರಿಸಿಲ್ಲ ಎಂಬುದಾಗಿ ವರದಿಯಾಗಿದೆ.
ಆರನೇ ಪತ್ನಿಯನ್ನು ಮದುವೆಯಾದ ಬಳಿಕ ಅನುಮಾನಗೊಂಡ ಆಕೆ, ತನ್ನ ಪತಿಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಳು. ಈ ವೇಳೆ ಆತ ಈಗಾಗಲೇ ಐವರನ್ನು ಮದುವೆಯಾಗಿರುವುದಾಗಿ ಆಕೆಗೆ ಗಮನಕ್ಕೆ ಬಂದಿದೆ. ಆದರೆ ಈ ಬಗ್ಗೆ ಪತಿಯನ್ನು ಕೇಳಿದಾಗ ಆತ ಈ ಹಿಂದಿನ ಮದುವೆ ಬಗ್ಗೆ ಏನೂ ಹೇಳುತ್ತಿರಲಿಲ್ಲ.
ಇತ್ತ ಆರನೆ ಪತ್ನಿಯಿಂದ ದೂರವಾದ ತಕ್ಷಣವೇ ಡೇಗಿಯಾ, ಮತ್ತೊಬ್ಬಳ ಜೊತೆ ಜೀವನ ನಡೆಸಲು ಆರಂಭಿಸಿದ್ದಾನೆ. ಮಹಿಳೆಯರ ಜೊತೆ ಕೆಲವು ತಿಂಗಳ ಕಾಲ ಸಂಬಂಧ ಹೊಂದಿ ನಂತರ ಆವರಿಂದ ದೂರವಾಗಿದ್ದಾನೆ. ಸದ್ಯ ಮಹಿಳೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.