– ದುಬೆ, ವಿರಾಟ್ ಉತ್ತಮ ಜೊತೆಯಾಟ
– ಶೂನ್ಯಕ್ಕೆ ಔಟ್ ಆದ ವಿಲಿಯರ್ಸ್
ದುಬೈ: ಇಂದು ಐಪಿಎಲ್-2020ಯ 25ನೇ ಮ್ಯಾಚಿನಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 170 ರನ್‍ಗಳ ಗುರಿಯನ್ನು ನೀಡಿದೆ.
ವಿರಾಟ್ ಸ್ಫೋಟಕ ಆಟ
ಮೊದಲ 11 ಓವರಿಗೆ 67 ರನ್ ಗಳಸಿ ಮೂರು ವಿಕೆಟ್ ಕಳೆದುಕೊಂಡು ಸಂಕಟಕ್ಕೆ ಸಿಲುಕಿದ್ದ ಆರ್‌ಸಿಬಿ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ನೆರವಾದರು. 52 ಬಾಲಿನಲ್ಲಿ ನಾಲ್ಕು ಸಿಕ್ಸ್ ಮತ್ತು ನಾಲ್ಕು ಬೌಂಡರಿಗಳ ಸಮೇತ ಕೊಹ್ಲಿ ಬರೋಬ್ಬರಿ 90 ರನ್‍ಗಳಿಸಿದರು. ಜೊತೆಗೆ ದುಬೆ ಕೊಹ್ಲಿ ಜೊತೆಗೂಡಿ 33 ಬಾಲಿನಲ್ಲಿ 75 ರನ್‍ಗಳ ಜೊತೆಯಾಟವಾಡಿದರು.
Advertisement
WATCH – Kohli's 'Edgy' SIX
How did that travel for a six? How did an edge go for a maximum? Find out here.https://t.co/plRA5dcfBW #Dream11IPL
— IndianPremierLeague (@IPL) October 10, 2020
Advertisement
ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ಬಂದ ಬೆಂಗಳೂರು ತಂಡ ಆರಂಭಕರಾದ ದೇವದತ್ ಪಡಿಕ್ಕಲ್ ಮತ್ತು ಫಿಂಚ್ ಅವರು ಮಂದಗತಿಯ ಬ್ಯಾಟಿಂಗ್‍ಗೆ ಮುಂದಾದರು. ಆದರೆ 2ನೇ ಓವರ್ ಐದನೇ ಬಾಲಿನಲ್ಲಿ ಫಿಂಚ್, ದೀಪಕ್ ಚಹರ್ ಅವರಿಗೆ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ನಂತರ ನಾಯಕ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ನಿಧಾನವಾಗಿ ತಂಡಕ್ಕೆ ರನ್ ಸೇರಿಸಿದರು. ಹೀಗಾಗಿ ಆರು ಓವರ್ ಮುಕ್ತಾಯಕ್ಕೆ ಆರ್‌ಸಿಬಿ ಒಂದು ವಿಕೆಟ್ ಕಳೆದುಕೊಂಡು 36 ರನ್ ಸೇರಿಸಿತು.
Advertisement
50-run partnership comes up between @Sundarwashi5 & @imVkohli.
Live – https://t.co/uvoAQpsvDX #Dream11IPL pic.twitter.com/40dhheOsuq
— IndianPremierLeague (@IPL) October 10, 2020
Advertisement
ನಂತರ ಸ್ಫೋಟಕ ಬ್ಯಾಟಿಂಗ್ ಮುಂದಾದ ವಿರಾಟ್ ದೇವದತ್ ಪಡಿಕ್ಕಲ್ ಜೋಡಿ 41 ಬಾಲಿಗೆ ಅರ್ಧಶತಕದ ಜೊತೆಯಾಟವಾಡಿತು. ಈ ಮೂಲಕ 10 ಓವರ್ ಮುಕ್ತಾಯಕ್ಕೆ ಆರ್‌ಸಿಬಿ ಒಂದು ವಿಕೆಟ್ ಕಳೆದುಕೊಂಡು 65 ರನ್ ಹೊಡೆಯಿತು. ಆದರೆ 10ನೇ ಓವರ್ ಎರಡನೇ ಬಾಲಿನಲ್ಲಿ 34 ಬಾಲಿಗೆ 33 ರನ್ ಸಿಡಿಸಿದ್ದ ಇನ್ ಫಾರ್ಮ್ ಆಟಗಾರ ದೇವದತ್ ಪಡಿಕ್ಕಲ್ ಅವರು ಶಾರ್ದುಲ್ ಠಾಕೂರ್ ಅವರ ಬೌಲಿಂಗ್‍ಗೆ ಔಟ್ ಆದರು. ನಂತರ ಬಂದ ಎಬಿ ಡಿವಿಲಿಯರ್ಸ್ ಅವರು ಶೂನ್ಯಕ್ಕೆ ಔಟ್ ಆಗಿ ನಿರಾಸೆ ಮೂಡಿಸಿದರು.
FIFTY!
Virat Kohli brings up his half-century with a nice boundary.
Live – https://t.co/uvoAQpsvDX #Dream11IPL pic.twitter.com/wkHjne7uVv
— IndianPremierLeague (@IPL) October 10, 2020
ಇದಾದ ನಂತರ ಒಂದು ಸಿಕ್ಸರ್ ಸಿಡಿಸಿ ಅಬ್ಬರಿಸುವ ಸೂಚನೆ ನೀಡಿದ್ದ ವಾಷಿಂಗ್ಟನ್ ಸುಂದರ್ ಅವರು 10 ರನ್ ಗಳಸಿ ವಿಕೆಟ್ ಕೀಪರಿಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಈ ಮೂಲಕ ಬೆಂಗಳೂರು ತಂಡ 15 ಓವರ್ ಮುಕ್ತಾಯಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು 95 ರನ್ ಪೇರಿಸಿತು. ಇದೇ ವೇಳೆ ವಿರಾಟ್ ಕೊಹ್ಲಿ ಅವರು 39 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ಈ ಫಿಫ್ಟಿಯ ಮೂಲಕ ಐಪಿಎಲ್‍ನಲ್ಲಿ ತನ್ನ 39ನೇ ಅರ್ಧಶತಕ ದಾಖಲಿಸಿದರು.
Another one falls! Curran gets this one to shape away, it takes the edge, and #RCB are four down.
Live – https://t.co/uvoAQpsvDX #Dream11IPL pic.twitter.com/8Orb86cBUV
— IndianPremierLeague (@IPL) October 10, 2020
ಅರ್ಧಶತಕದ ನಂತರ ಅಬ್ಬರದ ಬ್ಯಾಟಿಂಗ್ ಮುಂದಾದ ವಿರಾಟ್ ಕೊಹ್ಲಿ ಅವರು, 18ನೇ ಒಂದೇ ಓವರಿನಲ್ಲಿ 24 ರನ್ ಸಿಡಿಸಿ ಮಿಂಚಿದರು. ಜೊತೆಗೆ ಕೊಹ್ಲಿ ಮತ್ತು ದುಬೆ ಉತ್ತಮ ಜೊತೆಯಾಟವಾಡಿ 25 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ಜೊತೆಗೆ ಕೊನೆಯವರೆಗೂ ಔಟ್ ಆಗದೇ ತಂಡವನ್ನು 160 ಗಡಿ ದಾಟಿಸಿದರು.