– ಚರಿತ್ರಿಯಾ ಮುದ್ದು ಮಾತಿಗೆ ನೆಟ್ಟಿಗರು ಫಿದಾ
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರು ತನ್ನ ಮಗಳು ಮುದ್ದು ಮುದ್ದಾಗಿ ಮಾತನಾಡಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆ ವಿಡಿಯೋ ಸದ್ಯ ವೈರಲ್ ಆಗಿದೆ.
ಗಣೇಶ್ ಅವರು ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇರುತ್ತಾರೆ. ತಮ್ಮ ಸಿನಿಮಾ ವಿಚಾರಗಳ ಜೊತೆ ತಮ್ಮ ಮಕ್ಕಳ ವಿಡಿಯೋ ಮತ್ತು ಫೋಟೋಗಳನ್ನು ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಮಿನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈಗ ಮಗಳು ಆಮ್ಲೆಟ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದು, ಗಣೇಶ್ ಮಗಳ ಮುದ್ದು ಮಾತಿಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.
ಆಮ್ಲೆಟ್ ಮಾಡೋದು ಹೇಗೆ ?
Very simple……
ಯುಟ್ಯೂಬ್ ಪ್ರಭಾವ…????#cherrytheberry #talent #girlpower pic.twitter.com/5MrJgDRozS
— Ganesh (@Official_Ganesh) November 23, 2020
ವಿಡಿಯೋದಲ್ಲಿ ಏನಿದೆ
ಗಣೇಶ್ ಹಂಚಿಕೊಂಡಿರುವ ವಿಡಿಯೋದಲ್ಲಿ ಮಗಳು ಚರಿತ್ರಿಯಾ ಗಣೇಶ್ ಅವರು ಆಮ್ಲೆಟ್ ಮಾಡುತ್ತಿದ್ದಾರೆ. ಈ ವೇಳೆ ವಿಡಿಯೋ ಮಾಡುತ್ತಾ ಅಲ್ಲಿಗೆ ಬಂದ ಗಣೇಶ್ ಅವರು ಮಗಳೇ ಏನ್ ಮಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾರೆ. ಆಗ ಚರಿತ್ರಿಯಾ ಇಂಗ್ಲಿಷಿನಲ್ಲಿ ಆಮ್ಲೆಟ್ ಮಾಡುವ ವಿಧಾವನ್ನು ವಿವರಿಸುತ್ತಾರೆ. ಈ ವೇಳೆ ಹತ್ತಿರ ಬಂದ ಗಣೇಶ್ ಮಗಳೇ ಏನ್ ಮಾಡುತ್ತಿದ್ದೀಯಾ ಸರಿಯಾಗಿ ಹೇಳು ಅಂದಾಗ ಕನ್ನಡದಲ್ಲಿ ಆಮ್ಲೆಟ್ ಮಾಡುವ ವಿಧಾನವನ್ನು ಹೇಳಿಕೊಡುತ್ತಾರೆ.
ಈ ವಿಡಿಯೋದಲ್ಲಿ ಚಿರಿತ್ರಿಯಾ ಮುದ್ದು ಮುದ್ದಾಗಿ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಮಾತನಾಡಿರುವುದು ಗಣೇಶ್ ಅಭಿಮಾನಿಗಳ ಹೃದಯ ಕದ್ದಿದೆ. ಜೊತೆಗೆ ಕೆಲ ನಟ ನಟಿಯರು ಕೂಡ ಈ ವಿಡಿಯೋ ನೋಡಿ ಕಮೆಂಟ್ ಮಾಡಿದ್ದಾರೆ. ಮೊದಲಿಗೆ ಕಮೆಂಟ್ ಮಾಡಿರುವ ನಟಿ ಅಮೂಲ್ಯ ಅವರು ಚೆರ್ರಿ ಎಂದು ಬರೆದುಕೊಂಡರೆ, ಪ್ರಜ್ವಲ್ ದೇವರಾಜ್ ಅವರು ಕಮೆಂಟ್ ಮಾಡಿ ಸೋ ಕ್ಯೂಟ್ ಎಂದಿದ್ದಾರೆ. ಜೊತೆಗೆ ಆರ್.ಜೆ ನೇತ್ರಾ ಮತ್ತು ರ್ಯಾಪಿಡ್ ರಶ್ಮಿ ಕೂಡ ಕಮೆಂಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಮಗ ಸೇಬು ಹಿಡಿದುಕೊಂಡಿರುವ ಫೋಟೋ ಹಂಚಿಕೊಂಡಿದ್ದ ಗಣೇಶ್ ಅವರು, ಟಿವಿ ಪೇಪರ್ ನೋಡಿ. ಏನೋ ಪ್ಲ್ಯಾನು ಮಾಡಿ. ಕೇಳಿದ ಒಂದು ಸೇಬು, ತಿನೋಕೆ ಅನ್ಕೊಂಡ್ರೆ ಕೊಟ್ಟ ಕೊರೊನಾ ಜವಾಬು. ಎಲ್ಲರೂ ಕೊರೊನಾದಿಂದ ಓಡಿದರೆ, ವಿಹಾನ್ ಕೊರೊನಾವನ್ನೆ ಸೃಷ್ಠಿಸುತ್ತಿದ್ದಾನೆ. ನನಗೆ ನಿಜವಾಗಲೂ ಆಶ್ಚರ್ಯವಾಯಿತು ಎಂದು ಬರೆದುಕೊಂಡಿದ್ದರು. ಸದ್ಯ ಗಣೇಶ್ ಅವರ ಗಾಳಿಪಟ-2 ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಜೊತೆಗೆ ತ್ರಿಬಲ್ ರೈಡಿಂಗ್ ಸಿನಿಮಾದ ಶೂಟಿಂಗ್ ಆರಂಭವಾಗಿದೆ.
ಟಿವಿ ಪೇಪರ್ ನೋಡಿ…
ಏನೋ ಪ್ಲ್ಯಾನು ಮಾಡಿ????
ಕೇಳಿದ ಒಂದು ಸೇಬು
ತಿನೋಕ್ ಅನ್ಕೊಂಡ್ರೆ
ಕೊಟ್ಟ ಕರೋನಾ ಜವಾಬು????????
ಎಲ್ಲರೂ ಕರೋನಾ ಇಂದ ಓಡಿದರೆ,,
ವಿಹಾನ್ ಕರೋನವನ್ನೆ ಸೃಷ್ಠಿಸುತ್ತಿದ್ದಾನೆ..????
ನನಗೆ ನಿಜವಾಗಲು ಆಶ್ಚರ್ಯವಾಯಿತು.#funnyfellow#staysafe #stayhealthy pic.twitter.com/YOVyXWnFdr
— Ganesh (@Official_Ganesh) November 20, 2020