ಕೊಪ್ಪಳ: ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಆಫ್ರಿಕಾ ಯುವಕರ ಗಲಾಟೆಯ ಮಧ್ಯೆ ಆಫ್ರಿಕಾದಲ್ಲಿ ಕನ್ನಡಿಗನೊಬ್ಬ ಸಂಕಷ್ಟಕ್ಕೆ ಒಳಗಾಗಿದ್ದಾನೆ. ಉದ್ಯೋಗ ಅರಸಿ ವಿದೇಶಕ್ಕೆ ಹೋಗಿರುವ ಕನ್ನಡಿಗ, ತಾಯ್ನಾಡಿಗೆ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದಾನೆ.
ಕೊಪ್ಪಳ ಜಿಲ್ಲೆ ಗಂಗಾವತಿಯ ಮೆಹಬೂಬ್ ಸಾಬ್ ಆಫ್ರಿಕಾ ಖಂಡದ ಲೈಬಿರಿಯಾ ದೇಶದಲ್ಲಿ ತೊಂದರೆಗೆ ಒಳಗಾಗಿದ್ದಾರೆ. ಹೈಡ್ರಾಲಿಕ್ ಮೆಕಾನಿಕ್ ಆಗಿರುವ ಮೆಹಬೂಬ್, ಕಳೆದ 4 ತಿಂಗಳ ಹಿಂದೆಯಷ್ಟೇ ಗಂಗಾವತಿಯಿಂದ ಮುಂಬೈ ಮೂಲಕ ಲೈಬಿರಿಯಾಕ್ಕೆ ಹೋಗಿದ್ದಾರೆ. ಅಲ್ಲಿನ ಜಿವಿಎಲ್ – ಸೆನೋ ಎಂಬ ಕಂಪನಿ ಈತನಿಗೆ ಜೆಸಿಬಿ, ಲೋಡರ್, ಹಿಟಾಚಿಗಳ ಮೇಲುಸ್ತುವಾರಿ ನೋಡಿಕೊಳ್ಳುವ ಕೆಲಸಕ್ಕಾಗಿ ನೇಮಕ ಮಾಡಿಕೊಂಡಿದೆ.
Advertisement
Advertisement
ಮೆಹಬೂಬ್ ಸಾಬ್‍ಗೆ ಕೆಲಸ ನೀಡಿರುವ ಕಂಪನಿಯೇ ವೀಸಾ ನೀಡಿ, ವಿಮಾನದ ಖರ್ಚು ನೋಡಿಕೊಂಡು ತಮ್ಮ ದೇಶಕ್ಕೆ ಕರೆಸಿಕೊಂಡಿದ್ದಾರೆ. ಕಳೆದ 4 ತಿಂಗಳಿನಿಂದ ರಜೆಯನ್ನು ನೀಡದೇ ಕೆಲಸ ಮಾಡಿಸಿಕೊಂಡಿದ್ದರೂ ವೇತನ ನೀಡಿಲ್ಲ. ಅಷ್ಟೇ ಅಲ್ಲದೇ ಗುಡ್ಡಗಾಡು ಪ್ರದೇಶದಲ್ಲಿ ಕೆಲಸಕ್ಕೆ ಕಳುಹಿಸುತ್ತಿದ್ದಾರೆ. ಸರಿಯಾಗಿ ಊಟ- ನೀರು ನೀಡುತ್ತಿಲ್ಲ ಎಂದು ಸಂಕಷ್ಟಕ್ಕೆ ಒಳಗಾಗಿರುವ ಮೆಹಬೂಬ್ ಅವರು ಆಡಿಯೋ ಮೂಲಕ ತಮ್ಮ ನೋವು ತೋಡಿಕೊಂಡಿದ್ದಾರೆ. ಮೆಹಬೂಬ್ ಸಾಮಾಜಿಕ ಜಾಲತಾಣದ ಮೂಲಕ, ಕನ್ನಡಿಗರೇ ಸ್ಥಾಪಿಸಿರುವ ಏಮ್ ಇಂಡಿಯಾ ಫೋರಂ ಸಂಸ್ಥೆಗೆ ಸಂಪರ್ಕ ಮಾಡಿದ್ದಾರೆ. ಕೂಡಲೇ ನೆರವಿಗೆ ಮುಂದಾಗಿರುವ ಸಂಸ್ಥೆ, ಈಗಾಗಲೇ ಲೈಬೀರಿಯಾ ದೇಶದ ಭಾರತೀಯ ರಾಯಭಾರಿ ಕಚೇರಿ ಸಂಪರ್ಕಿದೆ. ಲೈಬೀರಿಯಾದಲ್ಲಿನ ಭಾರತೀಯ ಅಧಿಕಾರಿ ಉಪಜೀತ್ ಸಿಂಗ್ ಸಚ್ಚದೇವ್‍ರಿಗೆ ಮಾಹಿತಿಯನ್ನು ನೀಡಿದ್ದಾರೆ.
Advertisement
Advertisement
ಮುಖ್ಯಮಂತ್ರಿಗಳಿಗೂ ಪತ್ರ: ಆಫ್ರಿಕಾದಲ್ಲಿ ಗಂಗಾವತಿಯ ಯುವಕ ಸಿಲುಕಿಕೊಂಡಿರುವ ಕುರಿತು ಆಫ್ರಿಕಾದಲ್ಲಿ ಕನ್ನಡಿಗರು ಸ್ಥಾಪನೆ ಮಾಡಿಕೊಂಡಿರುವ ಏಮ್ ಇಂಡಿಯಾ ಸಂಸ್ಥೆಯು ಗಂಗಾವತಿಯ ಯುವಕನನ್ನು ಸಂಕಷ್ಟದಿಂದ ಪಾರು ಮಾಡಲು ಭಾರತೀಯ ರಾಯಭಾರಿ ಕಚೇರಿಗೆ ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿಯನ್ನು ಮಾಡಿಕೊಂಡು ಪತ್ರ ರವಾನೆ ಮಾಡಿದೆ. ಇದನ್ನೂ ಓದಿ:ನನಗೆ ಪರೀಕ್ಷೆ ಮಾಡಬೇಕು ಅಂತ ಯಾವುದೇ ಹಠ, ಪ್ರತಿಷ್ಠೆ ಇರಲಿಲ್ಲ: ಸುರೇಶ್ ಕುಮಾರ್