ಧಾರವಾಡ: ಕೊರೊನಾ ಸಂಬಂಧ ಜಾರಿ ಮಾಡಲಾಗಿರುವ ಲಾಕ್‍ಡೌನ್ ಇರದಿದ್ದರೆ ಮದುವೆಗಳು, ಸಭೆ, ಸಮಾರಂಭಗಳು, ವಿವಿಧ ಸ್ಪರ್ಧೆಗಳು, ಸಮ್ಮರ್ ಕ್ಯಾಂಪ್‍ಗಳು ನಡೆಯಬೇಕಿತ್ತು. ಆದರೆ ಲಾಕ್‍ಡೌನ್ ಆಗಿರುವುದರಿಂದ ಎಲ್ಲವೂ ಈಗಾಗಲೇ ರದ್ದುಗೊಂಡಿವೆ. ಲಾಕ್‍ಡೌನ್ ಮಧ್ಯೆ ಧಾರವಾಡದಲ್ಲಿ ಸ್ಪರ್ಧೆಯೊಂದು ನಡೆದಿದೆ.
ಧಾರವಾಡ ನಗರದ ಸುದಿಶಾ ಇವೆಂಟ್ಸ್ ವತಿಯಿಂದ ಯುವತಿಯರಿಗಾಗಿ ಮೆಹಂದಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆ ಆನ್‍ಲೈನ್ ಮೂಲಕ ನಡೆದಿದೆ. ಈ ಕಾಂಪಿಟೇಶನ್‍ನಲ್ಲಿ ಸುಮಾರು 30ಕ್ಕೂ ಹೆಚ್ಚು ಯುವತಿಯರು ಪಾಲ್ಗೊಂಡಿದ್ದು, ಎಲ್ಲರ ಗಮನ ಸೆಳೆಯುವಂತೆ ಕೈ ಮೇಲೆ ಮೆಹಂದಿ ಹಾಕಿಸಿಕೊಂಡಿದ್ದರು.
Advertisement
Advertisement
ಸುದಿಶಾ ಇವೆಂಟ್ಸ್ ಬೇಸಿಗೆ ಸಂದರ್ಭದಲ್ಲಿ ಮನರಂಜನೆಗಾಗಿ ಆನ್‍ಲೈನ್ ಮೂಲಕ ಇಂತಹದೊಂದು ಸ್ಪರ್ಧೆ ನಡೆಸಿದೆ. ಸ್ಪರ್ಧೆಯಲ್ಲಿ ಪಾಲ್ಗೊಂಡ ಕೆಲವರನ್ನು ಆಯ್ಕೆ ಮಾಡಿ ಅವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ನೀಡಿದೆ.
Advertisement
ದಿವ್ಯಾ ಕಟ್ಟಿಮನಿ, ವಿದ್ಯಾಶ್ರೀ ನವೀನ್, ನಿಖಿತಾ ಶಿರೂರು, ಅಮೃತಾ ದೊಡ್ಡಮನಿ, ಬಿಂದು ಪ್ರಭು, ಶಶಿರೇಖಾ ರಾಗಿ, ಗೀತಾ ಕದಂ ಪ್ರಶಸ್ತಿಗಳನ್ನು ಬಾಚಿಕೊಂಡರು. ಸುದಿಶಾ ಇವೆಂಟ್ಸ್ ನ ರಾಘವೇಂದ್ರ ಕುಂದಗೋಳ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದರು.