– ಪೆನ್ಸಿಲ್‍ನಿಂದ ಇರಿದು, ಕಚ್ಚಿ, ಮನಬಂದಂತೆ ಹಲ್ಲೆ
– ಬಾಲಕಿಯ ತಂಗಿಯಿಂದ ಮಕ್ಕಳ ಸಹಾಯವಾಣಿಗೆ ದೂರು
– ತಾಯಿಯ ವಿರುದ್ಧ ಪ್ರಕರಣ ದಾಖಲು
ಮುಂಬೈ: ಆನ್‍ಲೈನ್ ತರಗತಿ ವೇಳೆ ಸರಿಯಾಗಿ ಗಮನ ಹರಿಸಿಲ್ಲ, ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿಲ್ಲ ಎಂದು ಕೋಪಗೊಂಡ ತಾಯಿ ತನ್ನ ಮಗಳಿಗೆ ಪೆನ್ಸಿಲ್‍ನಿಂದ ಇರಿದು ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಪೆನ್ಸಿಲ್‍ನಿಂದ ತನ್ನ 12 ವರ್ಷದ ಮಗಳ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಸ್ಯಾಂಟಾಕ್ರಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆನ್‍ಲೈನ್ ತರಗತಿ ವೇಳೆ ಗಮನಹರಿಸಿಲ್ಲ ಹಾಗೂ ಶಿಕ್ಷಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿಲ್ಲ ಎಂಬ ಉದ್ದೇಶದಿಂದ ತಾಯಿ ಮಗಳ ಮೇಲೆ ಹಲ್ಲೆ ಮಾಡಿದ್ದಾಳೆ.
Advertisement
Advertisement
ಬುಧವಾರ 6ನೇ ತರಗತಿ ವಿದ್ಯಾರ್ಥಿನಿ ಆನ್‍ಲೈನ್ ತರಗತಿಗೆ ಹಾಜರಾದ ವೇಳೆ ಘಟನೆ ನಡೆದಿದೆ. ಶಿಕ್ಷಕರು ಕೇಳಿದ ಪ್ರಶ್ನೆಗೆ ಮಗಳು ಉತ್ತರಿಸದಿರುವುದನ್ನು ಕಂಡು ತಾಯಿಗೆ ಕೋಪ ಬಂದಿದ್ದು, ಬಳಿಕ ಹರಿತವಾದ ಪೆನ್ಸಿಲ್‍ನಿಂದ ಬಾಲಕಿಯ ಬೆನ್ನಿಗೆ ಬಲವಾಗಿ ಇರಿದಿದ್ದಾಳೆ. ಅಲ್ಲದೆ ಹಲವು ಬಾರಿ ಅವಳನ್ನು ಕಚ್ಚಿ, ಹೊಡೆದು ಹಲ್ಲೆ ಮಾಡಿದ್ದಾಳೆ. ಇಡೀ ಘಟನೆಗೆ ಬಾಲಕಿ ತಂಗಿ ಸಾಕ್ಷಿಯಾಗಿದ್ದು, ಇದರಿಂದ ಬೇಸತ್ತು, ಹೆದರಿ ನಂತರ ಬಾಲಕಿಯ ತಂಗಿಯೇ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿದ್ದಾಳೆ.
Advertisement
Advertisement
ದೂರು ಆಧರಿಸಿ ಇಬ್ಬರು ಎನ್‍ಜಿಒ ಪ್ರತಿನಿಧಿಗಳು ಬಾಲಕಿಯ ಮನೆಗೆ ಆಗಮಿಸಿದ್ದು, ಈ ವೇಳೆ ತಾಯಿಗೆ ತಿಳಿ ಹೇಳಲು ಯತ್ನಿಸಿದ್ದಾರೆ. ಆದರೆ ತಾಯಿ ಇದಾವುದನ್ನೂ ಕೇಳಿಲ್ಲ. ಏನೂ ಹೇಳಿದರೂ ಒಪ್ಪಿಲ್ಲ. ಹೀಗಾಗಿ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯನ್ನು ಈ ವರೆಗೆ ಬಂಧಿಸಲಾಗಿಲ್ಲ.