ತುಮಕೂರು: ನನಗೆ ದಯವಿಟ್ಟು ವಿದ್ಯುತ್ ಸೌಲಭ್ಯ ಒದಗಿಸಿ ಕೊಡಿ ಎಂದು ಪುಟ್ಟ ಬಾಲಕಿಯೊಬ್ಬಳು ಅಧಿಕಾರಿಗಳ ಬಳಿ ಅಂಗಲಾಚುತ್ತಿರುವ ದಯನೀಯ ಪ್ರಕರಣ ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಬೆಳಕಿಗೆ ಬಂದಿದೆ.
Advertisement
ಮಹಾಮಾರಿ ಕೊರೊನಾದಿಂದಾಗಿ ಶಾಲೆಗಳು ಇನ್ನೂ ತೆರೆದಿಲ್ಲ. ಪರಿಣಾಮ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕ್ಲಾಸ್ ನಡೀತಿದೆ. ಈ ಆನ್‍ಲೈನ್ ಕ್ಲಾಸ್‍ಗೆ ಮುಖ್ಯವಾಗಿ ಬೇಕಾಗಿರೋದು ಲಾಪ್‍ಟಾಪ್, ಟ್ಯಾಬ್ ಅಥವಾ ಮೊಬೈಲ್. ಇವೆಲ್ಲವು ಕೆಲಸ ಮಾಡಬೇಕಾದರೆ ಬಹುಮುಖ್ಯವಾಗಿ ಕರೆಂಟ್ ಬೇಕೇಬೇಕಾಗುತ್ತದೆ. ಆದರೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಬಿದರೆಗುಡಿಯ ನಿವಾಸಿ ವಾಣಿ ಜಿ ಎಂಬ ಬಾಲಕಿಯ ಗುಡಿಸಲಿಗೆ ವಿದ್ಯುತ್ ಸಂಪರ್ಕ ಇಲ್ಲವೇ ಇಲ್ಲ. ಪರಿಣಾಮ ಈ ಬಾಲಕಿ ಆನ್ ಲೈನ್ ಕ್ಲಾಸ್ ನಿಂದ ವಂಚಿತಳಾಗುತಿದ್ದಾಳೆ.
Advertisement
Advertisement
ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿ ಓದುವ ಈ ಬಾಲಕಿಗೆ ದಿನಾಲೂ ಆನ್‍ಲೈನ್ ಕ್ಲಾಸ್ ನಡೀತಿದೆ. ತಂದೆಯ ಮೊಬೈಲಲ್ಲಿ ಸದ್ಯ ಆನ್‍ಲೈನ್ ಕ್ಲಾಸ್ ವೀಕ್ಷಣೆ ಮಾಡುತ್ತಾಳೆ. ವಿಪರ್ಯಾಸ ಅಂದರೆ ಈ ಬಾಲಕಿ ಮನೆಗೆ ವಿದ್ಯುತ್ ಸಂಪರ್ಕ ಇಲ್ಲ. ಹಾಗಾಗಿ ಮೊಬೈಲ್ ಚಾರ್ಜನ್ನು ಬೇರೆಯವರ ಮನೆಯಲ್ಲಿ ಹಾಕಬೇಕಾಗಿದೆ. ಮೊಬೈಲ್‍ಗೆ ಚಾರ್ಜ್ ಇಲ್ಲದೇ ಹಲವು ಬಾರಿ ಆನ್‍ಲೈನ್ ಕ್ಲಾಸಿನಿಂದ ಬಾಲಕಿ ವಾಣಿ ವಂಚಿತಳಾಗಿದ್ದಾಳೆ.
Advertisement
ಚಂದನ ವಾಹಿನಿಯಲ್ಲಿ ಕೂಡ ಪಾಠ ಬರುತ್ತಿದೆ. ಈ ಪಾಠ ನೋಡೋಣ ಅಂದರೆ ಟಿ.ವಿ ಇಲ್ಲಾ. ಒಂದು ವೇಳೆ ಸಾಲ ಮಾಡಿ ಟಿ.ವಿ. ತಂದರೂ ಕರೆಂಟ್ ಇಲ್ಲವೇ ಇಲ್ಲ. ಕಳೆದ 15 ವರ್ಷದಿಂದ ಬಾಲಕಿ ತಂದೆ ಗೌತಮ್ ಬಿದಿರೆಗುಡಿಗೆ ಬಂದು ವಾಸ ಇದ್ರು. ಬಟ್ಟೆ ವ್ಯಾಪಾರಿಯಾದ ಇವರು ತೀರಾ ಬಡವರು. ಮನೆಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ತಾನು ವಾಸವಿರುವ ಗುಡಿಸಲಿಗೆ ವಿದ್ಯುತ್ ಸೌಲಭ್ಯ ಒದಗಿಸುವಂತೆ ಬಾಲಕಿ ವಾಣಿ ಈಗಾಗಲೇ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದಾಳೆ.
ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮನವಿ ಮಾಡಿದ್ದಾಳೆ. ಮಕ್ಕಳ ಗ್ರಾಮ ಸಭೆಯ ಮಕ್ಕಳ ಧ್ವನಿ ಪೆಟ್ಟಿಗೆ ಹಾಗೂ ಬದುಕು ಸಂಸ್ಥೆಗೂ ತನ್ನ ಮನವಿ ಸಲ್ಲಿಸಿದ್ದಾಳೆ. ಆದರೆ ಇದುವರೆಗೆ ಯಾರೊಬ್ಬರೂ ಬಾಲಕಿಯ ಮನವಿಗೆ ಸ್ಪಂದಿಸಿಲ್ಲ. ಗುಡಿಸಲು ಇರುವ ಜಾಗದ ವಿವಾದ ಹಾಗೂ ಗುಡಿಸಲಿಗೆ ವಿದ್ಯುತ್ ಸಂಪರ್ಕ ಕೊಡಲು ಕೆಲವು ತಾಂತ್ರಿಕ ಅಡ್ಡಿ ಇದೆ. ಹಾಗಾಗಿ ಕೊಟ್ಟಿಲ್ಲ ಎನ್ನಲಾಗಿದೆ. ತಿಪಟೂರು ತಾಲೂಕ್ ಪಂಚಾಯತ್ ಕಾರ್ಯನಿರ್ವಾಕಾಧಿಕಾರಿ ಸುದರ್ಶನ್ ಶಿಘ್ರ ಸಮಸ್ಯೆ ಪರಿಹರಿಸುವುದಾಗಿ ಭರವಸೆ ಕೊಟ್ಟಿದ್ದಾರೆ.
ಮನೆಗೆ ವಿದ್ಯುತ್ ಸಂಪರ್ಕ ಇಲ್ಲದೇ ಆನ್ ಲೈನ್ ತರಗತಿಯಿಂದ ವಂಚಿತರಾಗೋದು ಕೇವಲ ಬಾಲಕಿ ವಾಣಿ ಮಾತ್ರ ಅಲ್ಲ. ಇಂಥಹ ಹಲವು ವಿದ್ಯಾರ್ಥಿಗಳು ಇದ್ದಾರೆ. ಆದರೆ ಸರ್ಕಾರ ಆಲ್ ಲೈನ್ ಕ್ಲಾಸಿಗೆ ಇರುವ ವಿದ್ಯುತ್ ಸಂಪರ್ಕದಂತಹ ಮೂಲ ಸಮಸ್ಯೆಯನ್ನು ಗುರುತಿಸಿ ಪರಿಹರಿಸಬೇಕಾಗಿದೆ. ಆ ಮೂಲಕ ಬಡ ವಿದ್ಯಾರ್ಥಿಗಳ ಬದುಕಿಗೆ ದಾರಿ ದೀಪ ಆಗಬೇಕಾಗಿದೆ.