ನೆಲಮಂಗಲ : ಮಹಾಮಾರಿ ಕೋವಿಡ್ 19ರ ಎರಡನೇ ಅಲೆ ಸಂದರ್ಭದಲ್ಲಿ ಆನ್ ಲೈನ್ ಆಕ್ಸಿಜನ್ ದೋಖಾ ನಡೆದ ಘಟನೆಯೊಂದು ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ಸಿಜನ್ ಖರೀದಿಸುವ ಮುನ್ನ ಎಚ್ಚರವಾಗಿರಿ. ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಕೋವಿಡ್ ರೋಗಿಗಳು ಆಕ್ಸಿಜನ್ ಬೇಕಾಗುವುದು ಸಾಮಾನ್ಯವಾಗಿದೆ. ಆದರೆ ಕೋವಿಡ್ ರೋಗಿಗೆ ಅಕ್ಸಿಜನ್ ಬೇಕು ಎಂದಾಗ ಈ ಅನ್ ಲೈನ್ ದೋಖ ಬೆಳಕಿಗೆ ಬಂದಿದೆ. ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಘಟನೆ ನಡೆದಿದೆ.
ಆಕ್ಸಿಜನ್‍ಗಾಗಿ ಫೋನ್ಪೇ ಮುಖಾಂತರ 13 ಸಾವಿರ ರೂಪಾಯಿ ಹಣವನ್ನು ವ್ಯಕ್ತಿಯೊಬ್ಬರು ಕಳಿಸಿದ್ದಾರೆ. ನಂತರ ಹಣವೂ ಇಲ್ಲಾ ಅಕ್ಸಿಜನ್ ಸಹ ಇಲ್ಲದ ಪರಿಸ್ಥಿತಿ ಎದುರಾಗಿದೆ. ಒಂದು ಅಕ್ಸಿಜನ್ ಸೀಲಿಂಡರ್‍ಗೆ 25 ಸಾವಿರ ಕೇಳಿದ ಆನ್‍ಲೈನ್ ವ್ಯಕ್ತಿ ಮೋಸ ಮಾಡಿದ್ದಾನೆ.
ರೋಗಿ ರಮೇಶ್ ಎಂಬುವವರನ್ನ ಕೆಲ ದಿನದ ಹಿಂದೆ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಸಮಸ್ಯೆ ಉಂಟಾದಾಗ ಈ ಘಟನೆ ಬೆಳಕಿಗೆ ಬಂದಿದೆ. ನಂತರ ಆ ರೋಗಿ ನೆಲಮಂಗಲ ಸೇರಿದಂತೆ ಬೆಂಗಳೂರಿನ ಕೆಲವು ಆಸ್ಪತ್ರೆಗೆ ದಾಖಲಿಸಲು ಅಲೆದಾಡುತ್ತಿದ್ದರು. ಆದರೆ, ಆಕ್ಸಿಜನ್, ಬೆಡ್ ಯಾವುದೇ ಸಿಗದೇ ಸೋಂಕಿತ ವ್ಯಕ್ತಿ ನರಳಿ ನರಳಿ ಸಾವನ್ನಪ್ಪಿದ್ದಾರೆ. ಈ ಕುರಿತಾಗಿ ರೋಗಿಯ ಸಂಬಂಧಿ ನೆಲಮಂಗಲ ಟೌನ್ ಪೊಲೀಸರ ಮೊರೆ ಹೋಗಿದ್ದಾರೆ.