– ಪ್ರಾಣಿ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾದ ಬೆತ್ತಲೆ ಸುಂದರಿ
ಬಾಲಿ: ಆನೆ ಮೇಲೆ ಬೆತ್ತಲೆ ಮಲಗಿ ಫೋಟೋಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ಹುಚ್ಚಾಟ ಮೆರೆದ ಮಾಡೆಲ್ ಅಲೆಸ್ಯ ಕಾಫೆಲ್ನಿಕೋವಾ ಇದೀಗ ಪ್ರಾಣಿಪ್ರೀಯರ ಟೀಕೆಗೆ ಗುರಿಯಾಗಿದ್ದಾಳೆ.
ರಷ್ಯಾ ಮೂಲದ ಮಾಡೆಲ್ ಅಲೆಸ್ಯ ಕಾಫೆಲ್ನಿಕೋವಾ ಇತ್ತೀಚಿಗೆ ಇಂಡೋನೇಷ್ಯಾದಲ್ಲಿ ಅಳಿವಂಚಿನಲ್ಲಿರುವ ಸುಮ್ರಾತ್‍ನ್ ಆನೆ ಮೇಲೆ ಬೆತ್ತಲಾಗಿ ಮಲಗಿ ಛಾಯಚಿತ್ರ ತೆಗೆಸಿಕೊಂಡಿದ್ದಳು. ವಿಭಿನ್ನ ಅವತಾರಗಳಲ್ಲಿ ಫೋಟೋ ತೆಗೆಸಿಕೊಂಡು ಅದರ ಸಣ್ಣ ವಿಡಿಯೋ ತುಣುಕೊಂದನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದರು. ಇದನ್ನು ಗಮನಿಸಿದ ಅಭಿಮಾನಿಗಳು ಅಲೆಸ್ಯಳಾ ಮಂಗಾಟಕ್ಕೆ ಕಿಡಿಕಾರಿದ್ದಾರೆ.
View this post on Instagram
ಅಲೆಸ್ಯ ಇನ್‍ಸ್ಟಾಗ್ರಾಂ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಇತ್ತ ಪ್ರಾಣಿದಯಾ ಸಂಘ ಮತ್ತು ಪ್ರಾಣಿ ಪ್ರೇಮಿಗಳು ಆಕೆಯ ವಿರುದ್ಧ ಕೆಂಡಕಾರಿದ್ದಾರೆ. ಕೂಡಲೇ ಎಚ್ಚೆತ್ತ ಅಲೆಸ್ಯಾ ತನ್ನ ಇನ್‍ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದ ವಿಡಿಯೋ ತುಣುಕನ್ನು ಡಿಲೀಟ್ ಮಾಡಿ ಈ ಕುರಿತು ಸ್ಪಷ್ಟನೆ ಕೊಟ್ಟಿದ್ದಾಳೆ.
ಆನೆಯೊಂದನ್ನು ಸ್ನಾನ ಮಾಡಿಸುವ ಫೋಟೋವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ನಾನು ಪಾಣಿ ಪ್ರೇಮಿಯಾಗಿದ್ದು, ಈ ಹಿಂದೆ ಹಲವು ಪ್ರಾಣಿಗಳ ಸಂರಕ್ಷಣೆಗಾಗಿ ಸಹಾಯ ಮಾಡಿದ್ದೇನೆ. ಪ್ರಾಣಿಗಳ ಬಗ್ಗೆ ತುಂಬಾ ಪ್ರೀತಿ ಇರುವ ಕಾರಣದಿಂದಾಗಿ ಈ ರೀತಿ ನಡೆದುಕೊಂಡಿರುವುದಾಗಿ ಬರೆದುಕೊಂಡಿದ್ದಾಳೆ.