ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದ 20 ಲಕ್ಷ ಕೋಟಿ ರೂಪಾಯಿ ಮೊತ್ತದ ವಿಶೇಷ ಪ್ಯಾಕೇಜ್‍ಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇವತ್ತು ಅನುಮೋದನೆ ನೀಡಿದೆ.
ಪ್ರಧಾನಿ ನಿವಾಸದಲ್ಲಿ ನಡೆದ ಸಂಪುಟ ಸಭೆಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ರೈತರು, ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗೋ ಪ್ಯಾಕೇಜ್‍ಗೆ ಒಪ್ಪಿಗೆ ನೀಡಲಾಯಿತು. ರೈತರು ಉತ್ಪನ್ನಗಳನ್ನು ಅವರ ಇಚ್ಛಿತ ಸ್ಥಳಗಳಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಡುವ ಎಂಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮಧ್ಯೆ, ಎಲ್‍ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 11 ರೂಪಾಯಿ ಹೆಚ್ಚಾಗಿದೆ.
Advertisement
To provide impetus to the Atmanirbhar Bharat campaign, we have not only changed the definition of MSMEs sector, but have also approved several proposals to revive it. This will benefit the small and medium scale industries, as well as create huge employment opportunities: PM Modi https://t.co/5iIxce3Gah
— ANI (@ANI) June 1, 2020
Advertisement
ಯಾವುದಕ್ಕೆ ಸಮ್ಮತಿ:
– ಸಣ್ಣ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಸಾಲ
– ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಂಕಷ್ಟ ನಿಧಿಗೆ 40 ಸಾವಿರ ಕೋಟಿ ರೂ.
– ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಷೇರು ಮಾರುಕಟ್ಟೆ ಪ್ರವೇಶಿಸುವ ಸಲುವಾಗಿ 50 ಸಾವಿರ ಕೋಟಿ ರೂ.
– ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ರೂಪಾಯಿ ಸಾಲ
– ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಸ್ಥಾಪನೆ
– 3 ಲಕ್ಷ ರೂಪಾಯಿವರೆಗಿನ ಬೆಳೆ ಸಾಲದ ಮೇಲಿನ ಬಡ್ಡಿ ವಿನಾಯ್ತಿ ಅವಧಿ ಆಗಸ್ಟ್ 31ರವರೆಗೆ ವಿಸ್ತರಣೆ
– 14 ಮುಂಗಾರು ಬೆಳೆಗಳ ಮೇಲಿನ ಬೆಂಬಲ ಬೆಲೆ ಶೇಕಡಾ 50-80ರ ನಡುವೆ ಹೆಚ್ಚಳ
– ರೈತರು ತಾವು ಬಯಸಿದ ಸ್ಥಳಗಳಲ್ಲಿ ಉತ್ಪನ್ನ ಮಾರಲು ಎಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ
Advertisement
As this Government enters its second year, the Cabinet took important decisions that will have a transformative impact on the MSME sector, our hardworking farmers and street vendors. Today’s decisions will ensure a better quality of life for them. https://t.co/5QtQL2djtT
— Narendra Modi (@narendramodi) June 1, 2020
Advertisement