– ಶಿಕ್ಷಕರನ್ನು ಮೆಚ್ಚಿಸಲು ನೋಡೋ ವಿದ್ಯಾರ್ಥಿಯಂತೆ
ವಾರ್ಷಿಂಗ್ಟನ್: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ರಾಜಕೀಯ ಅನುಭವ ಹಾಗೂ ಜೀವನದ ಕೆಲ ಸ್ಮರಣೀಯ ನೆನಪುಗಳನ್ನು ‘ಎ ಪ್ರಾಮಿಸ್ಡ್ ಲ್ಯಾಂಡ್’ ಪುಸ್ತಕದ ರೂಪದಲ್ಲಿ ಹೊರ ತರುತ್ತಿದ್ದು, ನವೆಂಬರ್ 17 ರಂದು ಪುಸ್ತಕ ಬಿಡುಗಡೆಯಾಗಲಿದೆ.
ಪುಸ್ತಕದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕುರಿತು ಒಬಾಮಾ ಆಸಕ್ತಿಕರ ಹೇಳಿಕೆಗಳನ್ನು ನೀಡಿದ್ದಾಗಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
Advertisement
Advertisement
ರಾಹುಲ್ ಗಾಂಧಿಯಲ್ಲಿ ಭಯವೆಂಬ ತಿಳಿಯದ ಗುಣವಿದೆ. ತರಗತಿಯಲ್ಲಿ ಶಿಕ್ಷಕರನ್ನು ಮೆಚ್ಚಿಸುವ ವಿದ್ಯಾರ್ಥಿಯಂತೆ ಅತುರವಾಗಿರುತ್ತಾರೆ. ಆದರೆ ಒಂದು ವಿಷಯದ ಕುರಿತು ಆಳವಾಗಿ ಕಲಿತುಕೊಳ್ಳಬೇಕೆಂಬ ಉತ್ಸಾಹ ಮತ್ತು ಅಭಿರುಚಿಯ ಕೊರತೆ ಇದೆ ಎಂದು ಒಬಾಮಾ ಬರೆದುಕೊಂಡಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
Advertisement
ಒಟ್ಟಾರೆ 768 ಪುಟಗಳ ಈ ಪುಸ್ತಕದಲ್ಲಿ ಒಬಾಮಾ ತಮ್ಮ ಬಾಲ್ಯದ ಘಟನೆಗಳು, ನೆನಪು, ರಾಜಕೀಯ ಬದುಕು, 2008ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಗೆಲುವು ಹೀಗೆ ಅನೇಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಆಫ್ರಿಕನ್ ಅಮೆರಿಕನ್ ಎಂಬ ಇತಿಹಾಸ ಸೃಷ್ಟಿ ಮಾಡಿರೋ ಒಬಾಮಾ, 2010 ಮತ್ತು 2015 ರಲ್ಲಿ ಭಾರತದ ಪ್ರವಾಸ ಕೈಗೊಂಡಿದ್ದರು. 2009ರ ಜನವರಿಯಿಂದ 2017ರ ಜನವರಿವರೆಗೂ 2 ಅವಧಿಯಲ್ಲಿ ಅಮೆರಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ರು. ಉಳಿದಂತೆ 2017 ರಲ್ಲಿ ಭಾರತಕ್ಕೆ ಒಬಾಮಾ ಆಗಮಿಸಿದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು.