– ನಿಮ್ಮ ನಕಲಿ ತಂತ್ರವನ್ನು ಜನ ಅರ್ಥ ಮಾಡಿಕೊಂಡಿದ್ದಾರೆ
ಬೆಂಗಳೂರು: ಸುಮಲತಾ ಅವರ ಡೀಲ್ ಆಡಿಯೋ ಇದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ನಿಜಕ್ಕೂ ಹಾಸ್ಯಾಸ್ಪದ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಪ್ರತಿಮಾತು ಯಾವ ಮಟ್ಟಕ್ಕೆ ಇಳಿದು ಮಾತನಾಡುತ್ತಿದ್ದಾರೆ ಅನ್ನೋದು ಅವರಿಗೆ ಗೊತ್ತಿಲ್ಲ ಅನ್ನಿಸುತ್ತದೆ. ಅವರ ಆಡಿಯೋ ಬಾಂಬ್ ವೀಡಿಯೋ ಬಾಂಬ್ ಏನೇ ಇದ್ದರು ಕುಮಾರಸ್ವಾಮಿ ಬಿಡುಗಡೆ ಮಾಡಲಿ. ಚುನಾವಣೆವರೆಗೆ ಯಾಕೆ ಕಾಯುತ್ತಿರಾ? ಈಗ ಬಿಡುಗಡೆ ಮಾಡಿ. ಅವರಿಗೆ ಆಡಿಯೋ, ವಿಡಿಯೋ, ಫೋನ್ ಟ್ಯಾಪಿಂಗ್ ಅವರ ಅಭ್ಯಾಸವಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹೆಣ್ಣಿನ ಬಗ್ಗೆ ಹೇಗೆ ಮಾತಾಡ್ಬೇಕು ಅಂತ ಮಾಜಿ ಸಿಎಂ ಅರ್ಥ ಮಾಡಿಕೊಳ್ಳಬೇಕು: ಸುಮಲತಾ ಕಿಡಿ
ಫೋನ್ ಟ್ಯಾಪಿಂಗ್ ಬಗ್ಗೆ ಸಿಬಿಐ ತನಿಖೆ ನಡೆಯುತ್ತಿದೆ. ಅದನ್ನ ಮುಚ್ಚಿ ಹಾಕೋಕೆ ಹೀಗೆಲ್ಲಾ ಆರೋಪ ಮಾಡುತ್ತಾರೆ. ಅವರ ತಪ್ಪನ್ನ ತಿಳಿದುಕೊಂಡು ಕ್ಷಮೆ ಕೇಳುವುದು ಒಳ್ಳೆಯದು. ನಾನು ಅಂತಲ್ಲ ಹೆಣ್ಣು ಮಕ್ಕಳ ಬಗ್ಗೆ ಮಾತನಾಡುವಾಗ ಹಿಂದೆ ಹೆಣ್ಣು ಮಗಳಿಗೆ ಎಲ್ಲಿ ಮಲಗಿದ್ದೆ ಅಂತ ಕೇಳಿದ್ದರು. ವೀಡಿಯೋ ಬಾಂಬ್ ಆಡಿಯೋ ಬಾಂಬ್ ಏನೇ ಇರಲಿ. ನ್ಯೂಕ್ಲಿಯರ್ ಬಾಂಬ್ ಜನ ಹಾಕುತ್ತಾರೆ. ನಾನು ಯಾವತ್ತು ಅಕ್ರಮ ಗಣಿಗಾರಿಕೆಗೆ ಕುಮಾರಸ್ವಾಮಿ ಮೇಲೆ ಆರೋಪ ಮಾಡಿಲ್ಲ. ನನ್ನ ಜನರಲ್ ಹೇಳಿಕೆಯನ್ನ ವೈಯುಕ್ತಿಕವಾಗಿ ತಗೆದುಕೊಳ್ತಾರೆ ಯಾಕೆ…? ಈ ಫಸ್ಟರೇಷನ್ ಯಾಕೆ? ಮೈ ಶುಗರ್ ಬಗ್ಗೆ ಇವರು ಸಿಎಂ ಆದಾಗ ಏನು ಮಾಡಿದರು. ಮೈನಿಂಗ್ ವಿಚಾರ, ಹಾಲಿನ ವಿಚಾರ ಯಾವುದು ಪ್ರಶ್ನೆ ಮಾಡುವ ಹಾಗಿಲ್ಲ ಭ್ರಷ್ಟಾಚಾರದ ವಿರುದ್ಧ ಮಾತನಾಡಬಾರದು ಇವರ ಪ್ರಕಾರ. ಇವರ ಉದ್ದೇಶ ಏನು…? ಎಂದು ಪ್ರಶ್ನಿಸಿದ್ದಾರೆ.
ಜನ ನನಗೆ ಬುದ್ಧಿ ಕಲಿಸಿದರೆ ನಾನು ಅರ್ಥ ಮಾಡ್ಕೋತಿನಿ. ಆದರೆ ಲೋಕಸಭೆ ಚುನಾವಣೆಯಲ್ಲಿ ಜನ ಕಲಿಸಿದ ಬುದ್ದಿ ಇವರು ಅರ್ಥ ಮಾಡಿಕೊಂಡಿಲ್ಲ. ಖಂಡಿತ ಇದು ಲೋಕಸಭೆಯ ಚುನಾವಣೆಯ ಜಿದ್ದಾಗಿದೆ. ಎರಡು ವರ್ಷ ಆದರು ಅವರು ಅದನ್ನು ಮರೆತಿಲ್ಲ. ಬರೀ ಸುಳ್ಳು ಅವರದು. ಚುನಾವಣೆಯಲ್ಲಿ ಮೂರು ನಕಲಿ ಸುಮಲತಾ ಹಾಕಿದಾಗ ನಿಮ್ಮ ನಿಮ್ಮ ನಕಲಿ ತಂತ್ರವನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ನೀವಯ ನಿಮ್ಮ ಕೈಯಾರೆ ನಿಮ್ಮ ಪಕ್ಷವನ್ನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.