ಶಾರ್ಜಾ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆಲ್‍ರೌಂಡರ್ ಕೃನಾಲ್ ಪಾಂಡ್ಯ ಅಪರೂಪದ ದಾಖಲೆ ಬರೆದಿದ್ದಾರೆ.
ಮುಂಬೈ ಇನ್ನಿಂಗ್ಸ್ ನ ಅಂತ್ಯದಲ್ಲಿ ಕೇವಲ 4 ಎಸೆತಗಳನಷ್ಟೇ ಎದುರಿಸಿದ ಕೃನಾಲ್, 500ರ ಸ್ಟ್ರೈಕ್ ರೇಟ್‍ನೊಂದಿಗೆ 20 ರನ್ ಸಿಡಿಸಿದ್ದಾರೆ. ಐಪಿಎಲ್‍ನಲ್ಲಿ ಕನಿಷ್ಠ 10 ರನ್ ಗಳಿಸಿದ ಆಟಗಾರರಲ್ಲಿ 500 ಸ್ಟ್ರೈಕ್ ರೇಟ್ ಹೊಂದಿರುವ ಮೊದಲ ಆಟಗಾರ ಎಂಬ ಇತಿಹಾಸ ಬರೆದಿದ್ದಾರೆ.
Advertisement
Advertisement
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡದ ಪರ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ ಅಂತಿಮ ಓವರಿನ 2ನೇ ಎಸೆತದಲ್ಲಿ ಔಟಾಗಿದ್ದರು. ಆ ಬಳಿಕ ಕ್ರಿಸ್‍ಗೆ ಬಂದ ಕೃನಾಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಸಿದ್ಧಾರ್ಥ್ ಕೌಲ್ ಓವರಿನ ಮೂರನೇ ಎಸೆತವನ್ನು ಸಿಕ್ಸರ್ ಸಿಡಿಸಿದ ಕೃನಾಲ್, ಮುಂದಿನ 2 ಎಸೆತಗಳಲ್ಲಿ 2 ಬೌಂಡರಿ ಸಿಡಿದ್ದರು. ಅಂತಿಮ ಎಸೆತವನ್ನು ಸಿಕ್ಸರ್ ಸಿಡಿಸುವ ಮೂಲಕ 4 ಎಸೆತಗಳಲ್ಲಿ 20 ರನ್ ಗಳಿಸಿ ದಾಖಲೆ ಬರೆದಿದ್ದಾರೆ. ಕೃನಾಲ್ ಸ್ಫೋಟಕ ಬ್ಯಾಟಿಂಗ್‍ನಿಂದ ಮುಂಬೈ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತ್ತು.
Advertisement
Advertisement
ಮುಂಬೈ ಪರ ಮಾಧ್ಯಮ ಕ್ರಮಾಂಕದಲ್ಲಿ ಎದುರಾಳಿ ಬೌಲರ್ ಗಳ ಬೆವರು ಹರಿಸಿದ ಪೋರ್ಲಾಡ್, ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಅಂತಿಮ 5 ಓವರ್ ಗಳಲ್ಲಿ 61 ರನ್ ಗಳಿಸಿದ್ದರು. ಆ ಬಳಿಕ ಭಾರೀ ರನ್ ಮೊತ್ತವನ್ನು ಬೆನ್ನಟ್ಟಿದ್ದ ಹೈದರಾಬಾದ್ ತಂಡ ವಿಕೆಟ್ ಕಳೆದುಕೊಂಡು ನಿಗದಿತ 20 ಓವರ್ ಗಳಲ್ಲಿ 174 ರನ್ ಗಳಿಸಲಷ್ಟೇ ಶಕ್ತವಾಯಿತು. 34 ರನ್ ಗಳ ಗೆಲುವು ಪಡೆದ ಮುಂಬೈ ತಂಡ ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಿದೆ.
Krunal Pandya 20* (4) pic.twitter.com/OHDSoz1V29
— Mumbai Indians (@mipaltan) October 4, 2020