ಬೆಂಗಳೂರು: ಆಟೋ ಕನಿಷ್ಠ ದರವನ್ನು 30 ರೂ.ಗೆ ಏರಿಕೆ ಮಾಡುವಂತೆ ಆಟೋ ಚಾಲಕರ ಸಂಘಟನೆಗಳಿಂದ ಸರ್ಕಾರಕ್ಕೆ ಮನವಿ ಮಾಡಿದೆ.
ದಿನೇ ದಿನೇ ಆಟೋ ಗ್ಯಾಸ್ ದರ ಏರಿಕೆಯಾಗುತ್ತಿರುವ ಹಿನ್ನೆಲೆ ಆಟೋ ಚಾಲಕರು ಆಕ್ರೋಶಗೊಂಡಿದ್ದಾರೆ. ಕೊರೊನಾದಿಂದ ಜೀವನ ನಡೆಸಲು ಕಷ್ಟಕರವಾಗಿರುವ ಸಮಯದಲ್ಲಿ ಆಟೋ ಗ್ಯಾಸ್ ದರ ಏರಿಕೆಯಾಗುತ್ತಿರುವುದರಿಂದ ಆಟೋ ಚಾಲಕರಿಗೆ ನಷ್ಟವಾಗಿದೆ ಎಂದು ಆಟೋ ಚಾಲಕರ ಸಂಘಟನೆಗಳು ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
Advertisement
ಪ್ರತಿ ಲೀಟರ್ ಆಟೋ ಗ್ಯಾಸ್ ದರ 56 ರೂಪಾಯಿಗೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 5.50 ರೂಪಾಯಿ ಏರಿಕೆಯಾಗಿದೆ. ಆಟೋ ಪ್ರಯಾಣದ ಕನಿಷ್ಠ ದರವನ್ನು ಏರಿಕೆ ಮಾಡುವಂತೆ ಆಟೋ ಚಾಲಕರ ಸಂಘಟನೆ ಸರ್ಕಾರಕ್ಕೆ ಮನವಿ ಮಾಡಿದೆ.
Advertisement
Advertisement
ಆಟೋ ಕನಿಷ್ಠ ದರ 25 ರೂಪಾಯಿಯಿಂದ 30 ರೂಪಾಯಿಗೆ ಏರಿಕೆ ಮಾಡುವಂತೆ ಆಟೋ ಸಂಘಟನೆಗಳು ಬೇಡಿಕೆ ಮಾಡಿಕೊಂಡಿದೆ. ಕಳೆದ ಒಂಬತ್ತು ವರ್ಷಗಳ ಹಿಂದೆ ಆಟೋ ಕನಿಷ್ಠ ಮೀಟರ್ ದರ ಏರಿಕೆಯಾಗಿತ್ತು. ಪ್ರತಿ ಮೂರು ವರ್ಷಕ್ಕೊಮ್ಮೆ ಆಟೋ ಮಿನಿಮಮ್ ದರ ಏರಿಕೆ ಮಾಡುವ ಅವಕಾಶವಿದ್ದು, ಸಾರಿಗೆ ಇಲಾಖೆ ಏರಿಕೆಗೆ ಅವಕಾಶ ನೀಡಿಲ್ಲವೆಂದು ಆದರ್ಶ ಆಟೋ ಚಾಲಕರ ಸಂಘಟನೆಯ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.
ಎಲ್‍ಪಿಜಿ ದರ ಏರಿಕೆ ಆದಾ ಹಿನ್ನೆಲೆಯಲ್ಲಿ ಆಟೋ ಮಿನಿಮಲ್ ದರವನ್ನು 30 ರೂಪಾಯಿಗೆ ಏರಿಕೆ ಮಾಡಲು ಅವಕಾಶ ನೀಡುವಂತೆ ಜೊತೆಗೆ ಪ್ರತಿ ಕಿಲೋಮೀಟರ್ ಗೆ 16 ರೂಪಾಯಿ ದರ ನಿಗದಿ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಆಗಸ್ಟ್ 10 ರಂದು ದೇಶಾದ್ಯಂತ ವಿದ್ಯುತ್ ನೌಕರರ ಮುಷ್ಕರ