– ಜಾಲಿರೈಡ್ ಹೋಗುತ್ತಿದ್ದರು
– ಆಟೋ ಚಾಲಕನಿಗೆ ಪರವಾನಿಗೆ ಇಲ್ಲ
ಮುಂಬೈ: ಚಲಿಸುತ್ತಿರುವ ಆಟೋದಲ್ಲಿ ಸ್ಟಂಟ್ ಮಾಡುತ್ತಿದ್ದ ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು 16 ವರ್ಷದ ಹುಡುಗನನ್ನು ಬಂಧಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಚಲಿಸುತ್ತಿರುವ ಆಟೋರಿಕ್ಷಾದಲ್ಲಿ ಅಪ್ರಾಪ್ತ ಸಾಹಸ ಮಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಬೆಳಗ್ಗೆ 10ರ ಸುಮಾರಿಗೆ ವೈರಲ್ ಆಗಿದೆ. ಕಂಡಿವ್ಲಿ ಪೊಲೀಸರು ವೀಡಿಯೋ ನೋಡಿದ ಕೂಡಲೇ ಎಚ್ಚೆತ್ತುಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು ವಾಹನ ಸಂಖ್ಯೆಯ ಮೂಲಕ ಆಟೋವನ್ನು ಪತ್ತೆಹಚ್ಚಿದ್ದಾರೆ.
Advertisement
Advertisement
ಆಟೋ ಚಾಲಕನನ್ನು ಕಂಡಿವ್ಲಿ ಪಶ್ಚಿಮದಲ್ಲಿರುವ ಇಸ್ಲಾಂ ಕಾಂಪೌಂಡ್ ನಿವಾಸಿ ಜಾಸಿಮ್ ಹವಾಲ್ದಾರ್ ಎಂದು ಗುರುತಿಸಲಾಗಿದೆ. ನಿರ್ಲಕ್ಷ್ಯ ಮತ್ತು ಅತಿವೇಗದ ವಾಹನ ಚಾಲನೆ ಆರೋಪ ಸೇರಿದಂತೆ ಐಪಿಸಿಯ ವಿವಿಧ ವಿಭಾಗಗಳ ಅಡಿಯಲ್ಲಿ ಬಾಲಕ ಮತ್ತು ಆಟೋ ಚಾಲಕ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Advertisement
Advertisement
ಆಟೋ ಚಾಲಕ ಹವಾಲ್ದಾರ್‍ಗೆ ಚಾಲನಾ ಪರವಾನಗಿ ಇಲ್ಲ ಮತ್ತು ಸುಮ್ಮನೆ ನಿಲುಗಡೆ ಮಾಡಿದ ರಿಕ್ಷಾಕ್ಕೆ ಇಳಿದು ಅದನ್ನು ಜಾಲಿ ರೈಡ್‍ಗಾಗಿ ತೆಗೆದುಕೊಂಡು ಹೋಗಿದ್ದರು. ಸಾರ್ವಜಿನಿಕ ಸ್ಥಳದಲ್ಲಿ ಸಾಹಸಗಳನ್ನು ಪ್ರದರ್ಶಿಸುವುದು ಮತ್ತು ದಾರಿಹೋಕರೊಂದಿಗೆ ಕೆಟ್ಟದಾಗಿ ವರ್ತಿಸುವುದು ಕಂಡುಬಂದಿದೆ. ನಾವು ಆರೋಪಿಗಳನ್ನು ಹಿಡಿದು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಕಂಡಿವ್ಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.