ಕಲಬುರಗಿ: ಬೀದಿ ನಾಯಿಗಳು ಕಚ್ಚಿದ ಪರಿಣಾಮವಾಗಿ ನಾಲ್ಕು ಮಕ್ಕಳಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ನಗರದ ಮುಸ್ಲಿಂ ಚೌಕ್ ಬಡಾವಣೆಯಲ್ಲಿ ನಿನ್ನೆ ನಡೆದಿದೆ.
ಮನೆಯ ಮುಂದೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಬೀದಿ ನಾಯಿಗಳ ಹಾವಳಿಯಿಂದಾಗಿ ಕೈ, ಕಾಲು, ತಲೆ ಸೇರಿದಂತೆ ಮೈತುಂಬ ಮಕ್ಕಳಿಗೆ ಕಚ್ಚಿ ಗಾಯಗಳಾಗಿವೆ. ಗಾಯಗೊಂಡ ಮಕ್ಕಳನ್ನು ನಗರದ ಜೀಮ್ಸ್ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ತಾಯಿಯನ್ನು ಕೊಲೆಗೈದ 15ರ ಪುತ್ರಿ
ಬೀದಿಗಳಲ್ಲಿ ಕೊರಳಿಗೆ ಬೆಲ್ಟ್ ಹಾಕದ ನಾಯಿಗಳನ್ನು ಮಹಾನಗರ ಪಾಲಿಕೆ ಹಿಡಿದು ಅವುಗಳಿಗೆ ಎನಿಮಲ್ ಬರ್ಥ ಕಂಟ್ರೋಲ್ (ಎಬಿಸಿ) ಆಪರೇಷನ್ ಮತ್ತು ಎಂಟಿ ರ್ಯಾಬಿಸ್ ಚಚ್ಚು ಮುದ್ದುಗಳನ್ನು ನೀಡಿ ಅವುಗಳನ್ನು ಮತ್ತೇ ಅದೇ ಓಣಿಯ ಜಾಗಕ್ಕೆ ತಂದು ಬಿಡುತ್ತಿದ್ದರು.
ಬೀದಿ ನಾಯಿಗಳ ಹಾವಳಿ ಹೆಚ್ಚಳವಾಗಿ ಬೀದಿ ಬದಿ ಆಟವಾಡುತ್ತಿದ್ದ ಮಕ್ಕಳ ಮೇಲೆ ನಾಯಿ ದಾಳಿ ನಡೆಸುತ್ತಿವೆ. ಈ ಬಗ್ಗೆ ನಮ್ಮ ಪ್ರತಿನಿಧಿ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ವಿಚಾರಾಸಿದಾಗ ಈ ಕಾರ್ಯಾಚರಣೆ ಮತ್ತೇ ಎರಡು ಮೂರು ದಿನಗಳಲ್ಲಿ ಆರಂಭಿಸಲಾಗುವುದು ಎಂದು ಮಹಾನಗರ ಪಾಲಿಕೆಯ ವಲಯ ಆಯುಕ್ತರು ಹಾಗೂ ಆರೋಗ್ಯ ಇಪಾಖೆ ಅಧಿಕಾರಿಗಳಾದ ಡಾ. ವಿನೋದ ಅವರು ಹೇಳಿದ್ದಾರೆ.