ಉಡುಪಿ: ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂಗಾರು ಮಳೆ ಬಿರುಸಾಗಿ ಸುರಿಯುತ್ತಿದೆ. ಆಗುಂಬೆ ಬೆಟ್ಟ ತೇವಗೊಂಡಿರುವ ಕಾರಣ ಘನ ವಾಹನಗಳ ಸಂಚಾರಕ್ಕೆ ತಡೆ ಒಡ್ಡಲಾಗಿದೆ.
Advertisement
ಆಗುಂಬೆ ಘಾಟಿಯಲ್ಲಿ ಘನವಾಹನಗಳ ಸಂಚಾರಕ್ಕೆ ತಡೆಯೊಡ್ಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 169(ಎ)ರ ತೀರ್ಥಹಳ್ಳಿ-ಉಡುಪಿ ರಸ್ತೆಯ ಆಗುಂಬೆ ಘಾಟಿ ರಸ್ತೆಯು ಕಿರಿದಾಗಿದ್ದು, ಮಳೆಗಾಲದಲ್ಲಿ ಭಾರೀ ಸರಕು ಸಾಗಾಣೆ ವಾಹನಗಳು ಸಂಚರಿಸುವುದರಿಂದ ರಸ್ತೆ ಬದಿಯ ಮಣ್ಣು ಕುಸಿದು, ಸುಗಮ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ.
Advertisement
Advertisement
ಕೇಂದ್ರ ಮೋಟಾರು ವಾಹನ ಕಾಯ್ದೆ ಹಾಗೂ ರಾಜ್ಯ ಮೋಟಾರು ವಾಹನಗಳ ನಿಯಮ ಪ್ರಕಾರ ಆಗುಂಬೆ ಘಾಟಿಯಲ್ಲಿ ಅಕ್ಟೋಬರ್ 15ರ ವರೆಗೆ 12ಟನ್ ಗಿಂತ ಅಧಿಕ ಭಾರದ ವಾಹನಗಳ ಸಂಚಾರವನ್ನು ನಿಷೇಧಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್ ಆದೇಶಿಸಿದ್ದಾರೆ. ಭಾರೀ ವಾಹನಗಳು ಬದಲಿ ಮಾರ್ಗವಾದ ಉಡುಪಿ, ಸಿದ್ದಾಪುರ, ಹೊಸಂಗಡಿ, ಬಾಳೆಬರೇ ಘಾಟ್ ಹುಲಿಕಲ್, ಮಾಸ್ತಿಕಟ್ಟೆ, ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗಕ್ಕೆ ಸಂಚರಿಸಬಹುದು.
Advertisement
ಮಂಗಳೂರು, ಕಾರ್ಕಳ, ಹೆಬ್ರಿ, ಸಿದ್ದಾಪುರ, ಹೊಸಂಗಡಿ, ಬಾಳೆಬರೇ ಘಾಟ್, ಹುಲಿಕಲ್, ಮಾಸ್ತಿಕಟ್ಟೆ, ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗ ಸಂಪರ್ಕಿಸಬಹುದು ಎಂದು ಆದೇಶಿಸಲಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಕೆಲವು ತಿರುವುಗಳಲ್ಲಿ ಗುಡ್ಡ ಕುಸಿತ ರಸ್ತೆ ಕುಸಿತ ಆಗುತ್ತಿತ್ತು. ಅವಘಡ ಆಗುವ ಮೊದಲೇ ಮುನ್ನೆಚ್ಚರಿಕೆ ವಹಿಸಲಾಗಿದೆ. ಇದನ್ನೂ ಓದಿ:ಮಹಾಮಳೆಗೆ ಬೀದರ್‌ನ ದಾಪಕಾ ಗ್ರಾಮ ಸಂಪೂರ್ಣ ಜಲಾವೃತ