ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ದಿನಾಂಕ ಬಹಿರಂಗಪಡಿಸಿದ ಸುದೀಪ್

Public TV
2 Min Read
bigg booss sudeep

ಬಿಗ್ ಬಾಸ್ ಕನ್ನಡ 8ನೇ ಸೀಸನ್ ಕೊನೆಗೂ ಅಂತಿಮ ಹಂತ ತಲುಪಿದ್ದು, ಯಾರು ವಿನ್ನರ್ ಎಂಬ ಕಾತರ, ಕೌತುಕ ಎಲ್ಲರಲ್ಲೂ ಮನೆ ಮಾಡಿದೆ. ಆದರೆ ಇದಕ್ಕೆ ಹೆಚ್ಚು ದಿನ ಬಾಕಿ ಉಳಿದಿಲ್ಲ, ಇನ್ನು ಕೇವಲ 15 ದಿನಗಳಲ್ಲಿ ಬಿಗ್ ಬಾಸ್ ವಿನ್ನರ್ ಯಾರೆಂದು ತಿಳಿಯಬಹುದು.

bb contestents 1

ಹೌದು ಬಿಗ್ ಬಾಸ್ ಗ್ರಾಂಡ್ ಫಿನಾಲೆ ದಿನಾಂಕ ಪಕ್ಕಾ ಆಗಿದ್ದು, ಈ ಕುರಿತು ಸ್ವತಃ ಕಿಚ್ಚ ಸುದೀಪ್ ಅವರು ಖಚಿತಪಡಿಸಿದ್ದಾರೆ. ಇಂದು ವಾರದ ಕತೆ ಕಿಚ್ಚ ಜೊತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಫಿನಾಲೆ ದಿನಾಂಕವನ್ನು ಬಹಿರಂಗಪಡಿಸಿದ್ದು, ಇವತ್ತಿಗೆ ಅಂದರೆ ಶನಿವಾರದಿಂದ 15ನೇ ದಿನಕ್ಕೆ ಗ್ರ್ಯಾಂಡ್ ಫಿನಾಲೆ ನಡೆಯಲಿದೆ ಎಂದು ಹೇಳಿದ್ದಾರೆ. ಅಂದರೆ ಪರೋಕ್ಷವಾಗಿ ಆಗಸ್ಟ್ 8ರಂದು ಫಿನಾಲೆ ನಡೆಯಲಿದೆ ಎಂದು ಹೇಳಿದ್ದಾರೆ.

bb sudeep 2 4

ಇವತ್ತಿನಿಂದ 15ನೇ ದಿನಕ್ಕೆ ಫಿನಾಲೆ ನಡೆಯಲಿದೆ, 9 ಜನ ಕಂಟೆಸ್ಟೆಂಟ್ಸ್ ಇನ್ನೂ ಮನೆಯಲ್ಲಿ ಇದ್ದಾರೆ. ಅದರಲ್ಲಿ 5 ಜನ ನಾಮಿನೇಟ್ ಆಗಿದ್ದಾರೆ. ಇವತ್ತು ಉಳಿದುಕೊಂಡವರು ಫಿನಾಲೆ ವೇದಿಕೆಯ ಮೆಟ್ಟಿಲಿನವೆರೆಗೆ ಆಲ್‍ಮೋಸ್ಟ್ ಹೋದ ಹಾಗೆ ಎಂದು ಹೇಳಿದ್ದಾರೆ. ಈ ಮೂಲಕ ಫಿನಾಲೆ ಮುಹೂರ್ತವನ್ನು ಬಹಿರಂಗಪಡಿಸಿದ್ದಾರೆ. ಫಿನಾಲೆ ಸುಳಿವು ನೀಡಿ ಮತ್ತಷ್ಟು ಕಾತರತೆಯನ್ನು ಹೆಚ್ಚಿಸಿದ್ದಾರೆ.

bb contestents 2

ಕಿಚ್ಚ ಸುದೀಪ್ ಹೀಗೆ ಹೇಳುತ್ತಿದ್ದಂತೆ ಬಿಗ್ ಬಾಸ್ ಫಿನಾಲೆ ಹೇಗೆ ನಡೆಯಲಿದೆ, ಸ್ವರೂಪ ಹೇಗಿರಲಿದೆ? ಯಾರ್ಯಾರು ಭಾಗವಹಿಸುತ್ತಾರೆ. ಎನ್ನೆಲ್ಲ ವಿಶೇಷತೆ ಇರುತ್ತೆ. ವಿನ್ನರ್ ಯಾರು, ರನ್ನರ್ ಯಾರು ಎಂಬೆಲ್ಲ ಕುತೂಹಲ ಅಭಿಮಾನಿಗಳಲ್ಲಿ ಮೂಡುತ್ತಿದೆ. ಆದರೆ ಕಾರ್ಯಕ್ರಮದ ಕುರಿತು ಸಂಪೂರ್ಣ ಚಿತ್ರಣ ಸಿಗಲು ಇನ್ನೂ ಕೆಲ ದಿನಗಳ ಕಾಲ ಕಾಯಲೇ ಬೇಕಿದೆ. ಆಗ ಮಾತ್ರ ಪಕ್ಕಾ ಮಾಹಿತಿ ಸಿಗಲಿದೆ.

bb sudeep 1

ಬಿಗ್ ಬಾಸ್ ಕನ್ನಡ 8ರ ಈ ಸೀಸನ್‍ನಲ್ಲಿ ತುಂಬಾ ವಿಶೇಷಗಳಿವೆ. ಇದರಲ್ಲಿ ಮೊದಲೆಯದು ಇದೇ ಮೊದಲ ಬಾರಿಗೆ ಸ್ಪರ್ಧಿಳು ಎರಡು ಇನ್ನಿಂಗ್ಸ್ ಆಡಿದ್ದಾರೆ. ಆರಂಭದಲ್ಲಿ ಕೊರೊನಾ ಕಾರಣದಿಂದ ಬಿಗ್ ಬಾಸ್ ಮೊಟಕುಗೊಂಡಿತ್ತು, ಬಳಿಕ ಮನೆಗೆ ತೆರಳಿದ್ದರು. ಮತ್ತೆ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಮೂಲಕ ಕಿಕ್ಕೇರಿಸುತ್ತಿದೆ. ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ಸ್ಪರ್ಧಿಗಳು ಫುಲ್ ರೊಚ್ಚಿಗೆದ್ದು ಆಟವಾಡಿದ್ದಾರೆ. ಹೀಗಾಗಿ ಗೆಲ್ಲುವರ್ಯಾರು, ಟ್ರೋಫಿ ಯಾರ ಕೈ ಸೇರಲಿದೆ ಎಂಬ ಕುತೂಹಲ ಹೆಚ್ಚಿದೆ. ಇದು ತಿಳಿಯಬೇಕಾದಲ್ಲಿ ಇನ್ನೂ ಕೆಲ ದಿನಗಳ ಕಾಲ ಕಾಯಲೇಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *