ಬೆಂಗಳೂರು: ದುಬೈನ ಬುರ್ಜ್ ಖಲೀಫಾದ 148ನೇ ಮಹಡಿಯಲ್ಲಿ ಟೈಟಲ್ ಲೋಗೋ ರಿವೀಲ್ ಮಾಡಿರುವ ಮೂಲಕ ಭಾರೀ ಸುದ್ದಿಯಾದ ವಿಕ್ರಾಂತ್ ರೋಣ ಸಿನಿಮಾದಿಂದ ಇದೀಗ ರೋಮಾಂವನಕಾರಿ ಸುದ್ದಿಯೊಂದು ಹೊರಬಿದ್ದಿದೆ.
ಹೌದು. ವಿಕ್ರಾಂತ ರೋಣ ಸಿನಿಮಾ ಆಗಸ್ಟ್ 19 ರಂದು ಭಾರತದಾದ್ಯಂತ ಬಿಡುಗಡೆಗೊಳ್ಳುತ್ತಿದೆ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವನಟ ಕಿಚ್ಚ ಸುದೀಪ್, ವಿಕ್ರಾಂತ್ ರೋಣ ಸಿನಿಮಾದ ಚಿತ್ರೀಕರಣ ಸಿದ್ಧತೆ ಮತ್ತು ಪ್ರಕ್ರಿಯೆಯ ಆನಂದವನ್ನು ಅನುಭವಿಸಿದ ನಂತರ ಈಗ ರೋಮಾಂಚನಕಾರಿ ಸುದ್ದಿಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಮಯ. ವಿಕ್ರಾಂತ ರೋಣ ಸಿನಿಮಾ ಆಗಸ್ಟ್ 19 ರಂದು ಭಾರತದಾದ್ಯಂತ ಬಿಡುಗಡೆಗೊಳ್ಳುತ್ತಿದೆ ಎಂದು ತಿಳಿಸಲು ನಮ್ಮ ವಿಕ್ರಾಂತ್ ರೋಣ ತಂಡವು ಹರ್ಷಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
https://twitter.com/KicchaSudeep/status/1382570109034635274
ಇದೇ ವರ್ಷ ಜನವರಿ 31ರಂದು ದುಬೈನ ಬುರ್ಜ್ ಖಲೀಫಾದ 148ನೇ ಮಹಡಿಯಲ್ಲಿ ಟೈಟಲ್ ಲೋಗೋ ರಿವೀಲ್ ಮಾಡಲಾಗಿತ್ತು. ಇದರ ಜೊತೆಗೆ 2 ಸಾವಿರ ಅಡಿ ಎತ್ತರದ ವರ್ಚೂವಲ್ ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ಇದೇ ವೇಳೆ ಕಿಚ್ಚನ 25 ವರ್ಷಗಳ ಸಿನಿ ಪಯಣ ಕುರಿತ 3 ನಿಮಿಷದ ವೀಡಿಯೋ ಪ್ರಸಾರವಾಗಿತ್ತು.
After enjoying the process of preparations and it's making,,, its now time for a new excitement.
We the team of #VikrantRona is all excited and happy to mark August 19th 2021 for its theatrical release.
???????? pic.twitter.com/V7Rm5bWv17
— Kichcha Sudeepa (@KicchaSudeep) April 15, 2021
ಬುರ್ಜ್ ಖಲೀಫಾ ಕಟ್ಟಡದಲ್ಲಿ 3 ನಿಮಿಷಗಳ ಕಾಲ ಇದ್ದ ಕಟೌಟ್ ನೋಡಿ ಸುದೀಪ್ ಅಭಿಮಾನಿಗಳು ಥ್ರಿಲ್ ಆಗಿದ್ದರು. ಈ ಸುಂದರ ಸಂಭ್ರಮವನ್ನು 6 ಕ್ಯಾಮೆರಾದಲ್ಲಿ ಕಿಚ್ಚನ ತಂಡ ಸೆರೆ ಹಿಡಿದಿತ್ತು. ಈ ವೀಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಅಲ್ಲದೆ ಚಿತ್ರರಂಗದಲ್ಲಿ 25 ವರ್ಷಗಳು ಪೂರೈಸಿರುವ ಕಿಚ್ಚ ಸುದೀಪ್‍ಗೆ ಸಿನಿರಂಗದ ಹಲವು ಗಣ್ಯರು ಶುಭಹಾರೈಸಿದ್ದರು.