ನವದೆಹಲಿ: ಮನೆಯೊಂದ್ರಲ್ಲಿ 48 ಆಕ್ಸಿಜನ್ ಸಿಲಿಂಡರ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ವ್ಯಕ್ತಿಯ ಮನೆ ಮೇಲೆ ದೆಹಲಿ ಪೊಲೀಸರು ದಾಳಿ ಮಾಡಿ ಅರೆಸ್ಟ್ ಮಾಡಿದ್ದಾರೆ.
ಅನಿಲ್ ಕುಮಾರ್(51) ಬಂಧಿತ ಆರೋಪಿ. ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ಮಾಡಿದ್ದು, ಆಕ್ಸಿಜನ್ ಸಿಲಿಂಡರ್‌ಗಳನ್ನು ವಶಕ್ಕೆ ಪಡೆದು ಮನೆ ಮಾಲೀಕನನ್ನು ಬಂಧಿಸಿದ್ದಾರೆ.
Advertisement
During patrolling in PS Sagarpur, secret informer informed the beat staff that oxygen cylinders are kept illegally. Immediately a raid was conducted under the supervision of ACP/UT Sh Rohit Gupta and total number of 32 Big cylinder(67 lt each) and 16 small cylinder(10 lt each) pic.twitter.com/YKEjB25obi
— DCP South West Delhi (@dcp_southwest) April 23, 2021
Advertisement
32 ದೊಡ್ಡ ಆಕ್ಸಿಜನ್ ಸಿಲಿಂಡರ್, 16 ಚಿಕ್ಕ ಸಿಲಿಂಡರ್‌ಗಳನ್ನು ಶೇಖರಿಸಿಡಲಾಗಿತ್ತು. ಒಟ್ಟು 48 ಆಕ್ಸಿಜನ್ ಸಿಲಿಂಡರ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದನು. ಅನಿಲ್ ಕುಮಾರ್ ತಾನು ಕೈಗಾರಿಕೆ ಆಕ್ಸಿಜನ್ ಉದ್ಯಮ ನಡೆಸುತ್ತಿರುವುದಾಗಿ ಪೊಲೀಸರಿಗೆ ಹೇಳಿದ್ದಾನೆ. ಲೈಸೆನ್ಸ್ ತೋರಿಸು ಎಂದು ಕೇಳಿದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
Advertisement
were found and seized. Accused person was arrested.
The seized cylinders will be got released by the court to an authorized gas vendor or needy hospital in times of this pandemic tomorrow itself which shall save many lives.@LtGovDelhi @CPDelhi @DelhiPolice #Unite2FightCorona
— DCP South West Delhi (@dcp_southwest) April 23, 2021
Advertisement
ದೊಡ್ಡಸಿಲಿಂಡರ್‌ಗಳಿಂದ ಸಣ್ಣ ಸಿಲಿಂಡರ್‌ಗೆ ಆಕ್ಸಿಜನ್ ವರ್ಗಾಯಿಸುತ್ತಿದ್ದನು. ನಂತರ ಸಣ್ಣ ಸಿಲಿಂಡರ್‌ಗಳನ್ನು 12,500 ರೂಪಾಯಿಗೆ ಮಾರಾಟ ಮಾಡುತ್ತಿದ್ದನು. ಇದೀಗ ವಶಪಡಿಸಿಕೊಂಡು ಆಕ್ಸಿಜನ್ ಸಿಲಿಂಡರ್‌ಗಳನ್ನು ಅವಶ್ಯಕತೆ ಇರುವವರಿಗೆ ನೀಡುವುದಾಗಿ ಪೊಲೀಸರು ಹೇಳಿದ್ದಾರೆ.