ನವದೆಹಲಿ: ಇಲ್ಲಿನ ಬಾತ್ರಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಓರ್ವ ವೈದ್ಯ ಸೇರಿ 8 ಜನ ಕೊರೊನಾ ರೋಗಿಗಳು ಮೃತಪಟ್ಟಿರುವ ಕುರಿತು ಡೆಲ್ಲಿ ಹೈಕೋರ್ಟ್ ಆಸ್ಪತ್ರೆ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದೆ.
Advertisement
ಈ ಕುರಿತು ಹೈಕೋರ್ಟಿಗೆ ಸ್ಪಷ್ಟನೆ ನೀಡಿರುವ ಬಾತ್ರಾ ಆಸ್ಪತ್ರೆ, ನಮಗೆ ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗಲಿಲ್ಲ. ನಮಗೆ ಮಧ್ಯಾಹ್ನ 12 ಗಂಟೆಗೆ ಆಕ್ಸಿಜನ್ ಬೇಕಾಗಿತ್ತು. ಆದರೆ ನಮಗೆ ಸಿಕ್ಕಿದ್ದು ಮಧ್ಯಾಹ್ನ 1.35 ಗಂಟೆಗೆ. ಹಾಗಾಗಿ ನಮ್ಮ ಆಸ್ಪತ್ರೆಯ ವೈದ್ಯರನ್ನು ಸೇರಿ 8 ಜನರನ್ನು ಕಳೆದುಕೊಳ್ಳಬೇಕಾಯಿತು ಎಂದು ತಿಳಿಸಿದೆ.
Advertisement
ನಾವು ಹಲವು ಗಂಟೆಗಳ ಕಾಲ ಆಕ್ಸಿಜನ್ ಇಲ್ಲದೆ ಪರದಾಡುವಂತಾಯಿತು. ಹಾಗಾಗಿ ನಮ್ಮ ಆಸ್ಪತ್ರೆಯ ಒಬ್ಬ ವೈದ್ಯರು ಸೇರಿ 8 ಜನರನ್ನು ಕಳೆದುಕೊಂಡಿದ್ದೇವೆ ಎಂದು ಬಾತ್ರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಸ್.ಸಿ.ಎಲ್ ಗುಪ್ತಾ ತಿಳಿಸಿದ್ದಾರೆ.
Advertisement
ಆಕ್ಸಿಜನ್ ಮುಗಿಯಲು ಕೇವಲ 10 ನಿಮಿಷಗಳು ಬಾಕಿ ಇರುವಂತೆ ಬಾತ್ರಾ ಆಸ್ಪತ್ರೆಯಲ್ಲಿ 326 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.
Advertisement
ಈ ಕುರಿತು ದೆಹಲಿ ಸರ್ಕಾರದ ಸಚಿವರಾದ ರಾಘವ್ ಚಡ್ಡಾ ಮಾತನಾಡಿ, ನಮ್ಮ ಆಕ್ಸಿಜನ ಪೂರೈಕೆಯ ಟ್ಯಾಂಕರ್ ಬಾತ್ರಾ ಆಸ್ಪತ್ರೆಗೆ 5 ನಿಮಿಷದಲ್ಲಿ ತಲುಪಿದೆ. ಅದರೆ ಅವರಿಗೆ ಪ್ರತಿದಿನ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದವರು ಮಾಡಿದ ತಪ್ಪಿನಿಂದಾಗಿ ಈ ರೀತಿಯಾಗಿದೆ. ನಾವು ಆಕ್ಸಿಜನ್ ತಲುಪಿಸುತ್ತಿದ್ದಂತೆ ಆಸ್ಪತ್ರೆಯಲ್ಲಿ 8 ಜನ ರೋಗಿಗಳು ಮರಣ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಈ ಎಲ್ಲಾ ಘಟನೆಗಳ ಬಳಿಕ ಏಪ್ರಿಲ್ 1ರ ಬಳಿಕ ದೆಹಲಿಯ ಆಸ್ಪತ್ರೆಗಳಲ್ಲಿ ಮತ್ತು ನರ್ಸಿಂಗ್ ಹೋಂಗಳಲ್ಲಿ ದಾಖಲಾಗಿರುವ ರೋಗಿಗಳ ವಿವರ ಕೊಡುವಂತೆ ವೈದ್ಯಕೀಯ ಅಧೀಕ್ಷಕರು, ಆಸ್ಪತ್ರೆ ಮಾಲಿಕರು ಮತ್ತು ನಿರ್ದೇಶಕರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಈ ಪ್ರಕಾರ ಆಸ್ಪತ್ರೆಗಳು 4 ದಿನಗಳ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಪೂರ್ಣ ಮಾಹಿತಿಯನ್ನು ಕೋರ್ಟ್‍ಗೆ ಸಲ್ಲಿಸಬೇಕಾಗಿದೆ. ಈ ಕೊರೊನಾ ಎಂಬ ಕಷ್ಟಕಾಲದಲ್ಲಿ ಆಸ್ಪತ್ರೆಗಳು ಎದುರಿಸಿದ ಆಕ್ಸಿಜನ್ ಕೊರತೆಯಿಂದ ಆಸ್ಪತ್ರೆಗಳು ಪಾಠ ಕಲಿತು ಮುಂದೆ ಆಕ್ಸಿಜನ್ ಪ್ಲಾಂಟ್ ನಿರ್ಮಾಣದ ಗುರಿ ಇಟ್ಟುಕೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರ ನ್ಯಾಯಪೀಠ ಅಭಿಪ್ರಯಾಪಟ್ಟಿದೆ.