ಆಕ್ಸಿಜನ್ ಸಿಕ್ಕಿದ್ರೆ ಒಂದು ಜೀವ ಉಳಿಯುತ್ತಿತ್ತು: ಕೊರೊನಾದಿಂದ ಮೃತನ ಸಂಬಂಧಿ

Public TV
2 Min Read
corona summanahalli

– 8 ಗಂಟೆ ಅಂಬುಲೆನ್ಸ್ ನಲ್ಲಿ ಅಲೆದರೂ ಬೆಡ್ ಸಿಕ್ಕಿಲ್ಲ

ಬೆಂಗಳೂರು: ಸರ್ಕಾರ 500 ಆಸ್ಪತ್ರೆ, 5000 ಬೆಡ್ ಇದೆ ಎನ್ನುತ್ತಿದೆ, ಎಲ್ಲವೂ ಸುಳ್ಳು. ಆಕ್ಸಿಜನ್ ಸಿಕ್ಕಿದ್ರೆ ಒಂದು ಜೀವ ಉಳಿತಿತ್ತು ಎಂದು ಕೊರೊನಾದಿಂದ ಸಾವನ್ನಪ್ಪಿದ ಸಂಬಂಧಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

CORONA SUMMANAHALLI 2 3 e1618729004389

ಸುಮ್ಮನಹಳ್ಳಿ ಚಿತಾಗಾರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಮೃತ ಕೊರೊನಾ ಸೋಂಕಿತನ ಸಂಬಂಧಿ, ಸರ್ಕಾರ 500 ಆಸ್ಪತ್ರೆ, 5000 ಬಡ್ ಇದೆ ಎನ್ನುತ್ತಿದೆ. ಎಲ್ಲಿದೆ ಬೆಡ್, ಎಲ್ಲಿದೆ ಆಸ್ಪತ್ರೆ?ಸರ್ಕಾರ ಸುಮ್ಮನೆ ಸುಳ್ಳು ಹೇಳುತ್ತಿದೆ. 8 ಗಂಟೆ ಆಂಬುಲೆನ್ಸ್ ನಲ್ಲಿ ಪೇಷೆಂಟ್ ಇಟ್ಕೊಂಡು ಸುತ್ತಿದರೂ ಆಸ್ಪತ್ರೆಗಳಲ್ಲಿ ಬೆಡ್ ಸಿಕ್ಕಿಲ್ಲ. ವಿಕ್ಟೋರಿಯಾದಲ್ಲಿ ಸಹ ಬೆಡ್ ಇಲ್ಲ ಎನ್ನುತ್ತಾರೆ. ಮೃತನಿಗೆ 45 ವರ್ಷ ವಯಸ್ಸಾಗಿತ್ತು. ಸಣ್ಣ ಎರಡು ಮಕ್ಕಳಿವೆ, ಟೆಲಿಕಾಲರ್ ಆಗಿ ಕೆಲಸ ಮಾಡ್ತಿದ್ದ ಎಂದು ಮೃತ ಸೋಂಕಿತನ ಸಂಬಂಧಿ ಮಣಿಕಂಠ ಹೇಳಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಆಕ್ಸಿಜನ್ ಎಮರ್ಜೆನ್ಸಿ – ಪ್ಲೀಸ್, ಬದುಕಿಸಿ ಅಂತ ಕೈಮುಗಿದ ಐಸಿಯು ಸೋಂಕಿತರು

CORONA SUMMANAHALLI 2 1 e1618729045270

ವೆಂಟಿಲೇಟರ್ ಕೊಟ್ಟು ರೋಗಿಯನ್ನು ಅಡ್ಮಿಟ್ ಮಾಡಿಕೊಂಡಿದ್ದರೆ ಒಂದು ಜೀವ ಉಳಿಯುತ್ತಿತ್ತು. ನಮಗೆ ಖಾಸಗಿ ಆಸ್ಪತ್ರೆಗೆ ತೆರಳಲು ಆಗುತ್ತಿಲ್ಲ ಎಂದು ಎಷ್ಟೇ ಮನವಿ ಮಾಡಿಕೊಂಡರೂ ಅಡ್ಮಿಟ್ ಮಾಡಿಕೊಳ್ಳಲಿಲ್ಲ ಎಂದು ರೋಗಿಯ ಸಂಬಂಧಿ ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಕೊರೊನಾ ಇಲ್ಲ ಅಂದವರ ಕಪಾಳಕ್ಕೆ ಹೊಡೆಯಿರಿ: ನಟಿ ಸುನೇತ್ರಾ ಪಂಡಿತ್

CORONA SUMMANAHALLI 2 10 e1618729090809

ಸುಮ್ಮನಹಳ್ಳಿ ಚಿತಾಗಾರದಲ್ಲಿ ನಿನ್ನೆ 27 ಮೃತದೇಹಗಳ ಅಂತ್ಯಕ್ರಿಯೆ ಮಾಡಲಾಗಿದ್ದು, ಇದರಲ್ಲಿ 22 ಕೋವಿಡ್ ಹಾಗೂ 5 ನಾನ್ ಕೋವಿಡ್ ಮೃತದೇಹಗಳ ಅಂತ್ಯಕ್ರಿಯೆ ಮಾಡಲಾಗಿದೆ. ಇಂದೂ ಸಹ ಮುಂಜಾನೆಯಿಂದಲೇ ಮೃತದೇಹಗಳ ಸಾಲು ಶುರುವಾಗಿದೆ. ನಿನ್ನೆ ಸಾವಿನ ಪ್ರಮಾಣ ಹೆಚ್ಚಾಗಿದ್ದ ಕಾರಣ ಇಂದು ಚಿತಾಗಾರದಲ್ಲಿ ಮೃತದೇಹಗಳ ಸಾಲು ಸಹ ಹೆಚ್ಚಾಗೋ ಸಾಧ್ಯತೆ ಇದೆ. ಇದನ್ನೂ ಓದಿ: ಹತ್ರದಿಂದ ನೋಡಿದವ್ರಿಗೆ ಮಾತ್ರ ಗೊತ್ತು ಕೋವಿಡ್ ಭಯಂಕರತೆ: ಮೃತರ ಆಪ್ತರು

CORONA SUMMANAHALLI 2 2 e1618729149385

ಯಾರು ಕೊರೊನಾ ಇಲ್ಲವೆಂದು ಬೇಜವಾಬ್ದಾರಿಯಿಂದ ಹೇಳುತ್ತಾರೋ ಅವರ ಕಪಾಳಕ್ಕೆ ಹೊಡೆಯಿರಿ ಎಂದು ನಟಿ ಸುನೇತ್ರಾ ಪಂಡಿತ್ ಆಕ್ರೋಶ ವ್ಯಕ್ತಪಡಿಸಿದ್ದರು. ನಮ್ಮ ಅಕ್ಕ ಕೋವಿಡ್‍ನಿಂದ ತೀರಿಕೊಂಡರು. ಒಂದು ದಿನ ಕೇರ್‍ಲೆಸ್ ಮಿಸ್ ಗೈಡ್ ಆಗಿದ್ದಕ್ಕೆ ಸತ್ತಳು ಎಂದು ನಾನು ಹೇಳುವುದಿಲ್ಲ ಆದರೆ ಅದೂ ಒಂದು ಕಾರಣ ಎಂದು ಅಳಲು ತೋಡಿಕೊಂಡಿದ್ದರು.

ನಮ್ಮ ಅಕ್ಕ ಹೊರಟೋದ್ಳು. ಅವಳಿಗೆ ಮಕ್ಕಳಿದ್ದಾರೆ, ಆ ಮಕ್ಕಳು ಏನ್ ಮಾಡ್ಬೇಕು. ಈ ರೀತಿಯ ಪರಿಸ್ಥಿತಿ ಯಾರಿಗೂ ಬರಬಾರದು. ಕೊರೊನಾ ಇಲ್ಲ ಅಂತ ಹೇಳೋರಿಗೆ ಕಪಾಳಕ್ಕೆ ಹೊಡೆಯಿರಿ. ಯಾರು ಯಾರಿಗೆ ಕೊರೊನಾ ಅನುಭವ ಆಗಿದೆಯೋ ಅವರಿಗೆ ಗೊತ್ತು ಅದರ ಕಷ್ಟ. ಬೇಜವಾಬ್ದಾರಿತನವೇ ಬಹುಮುಖ್ಯ ಸಮಸ್ಯೆ ಅಂತ ಗರಂ ಆಗಿದ್ದರು.

SUNETHRA 3

ಡಯಾಬಿಟಿಸ್ ಯಾರಿಗೆ ಇಲ್ಲ ಹೇಳಿ, ಪ್ರತಿಯೊಬ್ಬರಿಗೂ ಇದೆ. ಅದು ಎಲ್ಲರಿಗೂ ಗೊತ್ತಿರುವ ಸತ್ಯ. ದಯವಿಟ್ಟು ಬಿಬಿಎಂಪಿ ಒಂದು ಬೆಡ್ ಅಲರ್ಟ್ ಮಾಡುವಾಗ ಐಸಿಯು ಇರೋ ಆಸ್ಪತ್ರೆಗೆ ಅಲರ್ಟ್ ಮಾಡಿ ಎಂದು ಕಣ್ಣೀರಾಕುತ್ತಾ ಮನವಿ ಮಾಡಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *