ಹುಬ್ಬಳ್ಳಿ: ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಬೆಡ್ ಸಿಗ್ತಿಲ್ಲ. ಬೆಡ್ ಸಿಕ್ಕರೂ ಸಾವನ್ನಪ್ಪುವವರ ಸಂಖ್ಯೆ ಹೆಚ್ಚು. ಆದರೆ ದೇಹದಲ್ಲಿ ಆಕ್ಸಿಜನ್ ಲೆವೆಲ್ ಕಡಿಮೆ ಇದೆ, ಆಸ್ಪತ್ರೆಗೆ ದಾಖಲಾಗಿ ಅಂದರೂ ಸೊಂಕಿತನೊಬ್ಬ ವೈದ್ಯರ ಸಲಹೆಯನ್ನೇ ಧಿಕ್ಕರಿಸಿ ಮನೆಗೆ ತೆರಳಿದ ವಿಚಿತ್ರ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
Advertisement
ಹುಬ್ಬಳ್ಳಿ ಮೂಲದ ನಿವಾಸಿಯೊಬ್ಬರಿಗೆ ಕೊರೊನಾ ದೃಢಪಟ್ಟ ಪರಿಣಾಮ ಸೊಂಕಿತ ಶುಕ್ರವಾರ ಮತ್ತೊಮ್ಮೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚೆಕ್ ಮಾಡಿಸಿಕೊಳ್ಳಲು ಆಗಮಿಸಿದ್ದ. ಆಗ ವೈದ್ಯರು ದೇಹದಲ್ಲಿ ಆಕ್ಸಿಜನ್ ಲೆವೆಲ್ ಕಡಿಮೆಯಿದೆ. ಆಸ್ಪತ್ರೆಗೆ ದಾಖಲಾಗಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಆದರೆ ಸೋಂಕಿತ ಮಾತ್ರ ಆಡ್ಮಿಟ್ ಆಗಲ್ಲ ಎಂದು ವಾಪಸ್ ತೆರಳಿದ್ದಾನೆ.
Advertisement
Advertisement
ಸೋಂಕಿತನಿಗೆ ವೈದ್ಯರು ಪರಿಪರಿಯಾಗಿ ಮನವರಿಕೆ ಮಾಡಿದ್ರು ವೈದ್ಯರ ಸಲಹೆಯನ್ನ ನಯವಾಗಿ ತಿರಸ್ಕರಿದ ಆತ ಅಡ್ಮಿಟ್ ಆಗಲು ನಾ ಒಲ್ಲೆ ಎಂದು ಪಟ್ಟು ಹಿಡಿದು ವೈದ್ಯರ ಮಾತನ್ನ ತಿರಸ್ಕರಿಸಿದ್ದಾನೆ. ಹೀಗಾಗಿ ವೈದ್ಯರು ಲಿಖಿತವಾಗಿ ಬರೆದು ಸಹಿ ಮಾಡಿ ಎಂದಾಗ ವೈದ್ಯರ ಸಲಹೆಯನ್ನ ಧಿಕ್ಕರಿಸಿ, ಲಿಖಿತವಾಗಿ ಬರೆದುಕೊಟ್ಟು ಸಹಿ ಮಾಡಿ ಆಸ್ಪತ್ರೆಗೆ ದಾಖಲಾಗದೇ ಮರಳಿ ಹೋಗಿದ್ದಾನೆ.
Advertisement
ಧಾರವಾಡ ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್ ಸಮಸ್ಯೆ ತೀವ್ರವಾಗಿದ್ದರೂ ವೈದ್ಯರು ಬೆಡ್ ವ್ಯವಸ್ಥೆ ಮಾಡುತ್ತೇವೆ ಎಂದು ಸಲಹೆ ನೀಡಿ ಪರಿಪರಿಯಾಗಿ ತಿಳಿ ಹೇಳಿದ್ರು. ಆದರೆ ಸೋಂಕಿತ ಮಾತ್ರ ಆಡ್ಮಿಟ್ ಆಗಲು ನಾ ಒಲ್ಲೆ ಎಂದು ಅಸಡ್ಡೆ ತೋರಿಸಿರುವುದು ವಿಚಿತ್ರ ಹಾಗೂ ವಿಶೇಷ ಪ್ರಕರಣವಾಗಿದೆ.