ಆಕ್ಸಿಜನ್ ಟ್ಯಾಂಕ್ ಲೀಕ್, ಪೂರೈಕೆ ಸ್ಥಗಿತ – 22 ರೋಗಿಗಳ ಸಾವು

Public TV
1 Min Read

– ಆಕ್ಸಿಜನ್ ವೆಂಟಿಲೇಟರ್ ನಲ್ಲಿ 23 ರೋಗಿಗಳು

ಮುಂಬೈ: ದೇಶದಲ್ಲಿ ಆಕ್ಸಿಜನ್ ಸಮಸ್ಯೆ ಕ್ಷಣ ಕ್ಷಣಕ್ಕೂ ಭಯಂಕರ ರೂಪ ಪಡೆಯುತ್ತಿದೆ. ಬುಧವಾರ ಮಹಾರಾಷ್ಟ್ರದ ನಾಸಿಕ್ ಆಸ್ಪತ್ರೆಯಲ್ಲಿ ದುರಂತ ನಡೆದಿದ್ದು, ಆಕ್ಸಿಜನ್ ಟ್ಯಾಂಕ್ ಸೋರಿಕೆ ಹಿನ್ನೆಲೆ 22 ರೋಗಿಗಳು ಪ್ರಾಣ ಬಿಟ್ಟಿದ್ದಾರೆ.

ನಾಸಿಕ್ ನಗರದ ಡಾ.ಝಾಕೀರ್ ಹುಸೈನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಲೀಕ್ ಆಗಿದ್ದರಿಂದ 30 ನಿಮಿಷ ಪೂರೈಕೆ ಸ್ಥಗಿತಗೊಂಡಿತ್ತು. ಪರಿಣಾಮ ಆಕ್ಸಿಜನ್ ವ್ಯವಸ್ಥೆಯಲ್ಲಿದ್ದ 22 ರೋಗಿಗಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಒಟ್ಟು 23 ರೋಗಿಗಳು ಆಕ್ಸಿಜನ್ ವೆಂಟಿಲೇಟರ್ ನಲ್ಲಿದ್ದರು. ಇನ್ನು ಆಸ್ಪತ್ರೆಯಲ್ಲಿದ್ದ 171 ರೋಗಿಗಳನ್ನು ಮತ್ತೊಂದು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ ಆಕ್ಸಿಜನ್ ಸೋರಿಕೆಯ ನಿಯಂತ್ರಿಸಲಾಗಿದೆ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.

ನಾಸಿಕ್ ನಲ್ಲಿ ಇದುವರೆಗೂ 2,56,586 ಕೊರೊನಾ ಪ್ರಕರಣಗಳು ವರದಿಯಾಗಿವೆ. ಸದ್ಯ 44,279 ಜನ ಕೊರೊನಾಗೆ ಚಿಕಿತ್ಸೆಗೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ ನಾಸಿಕ್ ನಲ್ಲಿ ಕೊರೊನಾ 2,672 ಜನರನ್ನ ಬಲಿ ಪಡೆದುಕೊಂಡಿದೆ. ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಆಕ್ಸಿಜನ್ ಬೇಡಿಕೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಆಕ್ಸಿಜನ್ ಮತ್ತು ಬೆಡ್ ಸಮಸ್ಯೆಯುಂಟಾಗಿದೆ.

ದೆಹಲಿಯಲ್ಲಿ ಆಮ್ಲಜನಕದ ಬಿಕ್ಕಟ್ಟು ವಿಪರೀತ ಹಂತ ತಲುಪಿದ್ದು, ಕೆಲವು ಆಸ್ಪತ್ರೆಗಳಲ್ಲಿ ಕೆಲವೇ ಗಂಟೆಗಳಲ್ಲಿ ಆಮ್ಲಜನಕದ ಸಿಲಿಂಡರ್‍ಗಳು ಬರಿದಾಗಲಿವೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಆಮ್ಲಜನಕ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ ಎಂದು ಆತಂಕ ವ್ಯಕ್ತಪಡಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *