ಹುಬ್ಬಳ್ಳಿ: ಕೇಂದ್ರ ಸರ್ಕಾರದ ಸಂಸದೀಯ ಹಾಗೂ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾದ ಆಕ್ಸಿಜನ್ ಘಟಕಕ್ಕೆ ಇಂದು ಚಾಲನೆ ನೀಡಿದ್ದಾರೆ.
Advertisement
L&T ಕಂಪನಿ CSR ಅಡಿ ಪ್ರತಿ ನಿಮಿಷಕ್ಕೆ 1000 ಲೀಟರ್ ದ್ರವ ಆಕ್ಸಿಜನ್ ಉತ್ಪಾದನಾ ಸಾಮಥ್ರ್ಯ ವಿರುವ ಆಕ್ಸಿಜನ್ ಉತ್ಪಾದನಾ ಘಟಕಗಳ ಸ್ಥಾಪನೆ ಮಾಡಿದ್ದು, ನೂತನ ಆಕ್ಸಿಜನ್ ಘಟಕಕ್ಕೆ ಸ್ವತಃ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದರು.
Advertisement
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಇಂದು ನನ್ನ ಪ್ರಸ್ತಾವನೆಯ ಮೇರೆಗೆ ವೇದಾಂತ ಕಂಪನಿಯ CSR ಅಡಿ 100 ಹಾಸಿಗೆ (80 ಆಕ್ಸಿಜನ್ ಬೆಡ್ + 20 ICU ಬೆಡ್) ಸಾಮರ್ಥ್ಯದ ಅತ್ಯಾಧುನಿಕ “ವೇದಾಂತ ಕೇರ್ಸ್ ಕೋವಿಡ್ ಫೀಲ್ಡ್ ಆಸ್ಪತ್ರೆ” ಲೋಕಾರ್ಪಣೆ ಮಾಡಲಾಯಿತು. pic.twitter.com/s9QBIAUZKR
— Pralhad Joshi (@JoshiPralhad) June 12, 2021
Advertisement
ಆಕ್ಸಿಜನ್ ಘಟಕ ಉತ್ಪಾದನೆಗೆ ಈಗಾಗಲೇ ಕಟ್ಟಡ ಕಾಮಗಾರಿ ಮುಕ್ತಾಯಗೊಂಡಿದ್ದು, ಇನ್ನು ಈ ಘಟಕಗಳು ಕಾರ್ಯನಿರ್ವಹಿಸಲಿವೆ. ಪ್ರತಿ ನಿಮಿಷಕ್ಕೆ 1000 ಲೀಟರ ದ್ರವ ಆಕ್ಸಿಜನ್ ಉತ್ಪಾದನಾ ಸಾಮಥ್ರ್ಯ ಹೊಂದಿದ್ದು ತುರ್ತು ಪರಿಸ್ಥಿತಿಯಲ್ಲಿ ಸೋಂಕಿತರು ಹಾಗೂ ರೋಗಿಗಳ ಚಿಕಿತ್ಸೆಗೆ ಅನುಕೂಲವಾಗಲಿದೆ. ಕೋವಿಡ್ ನಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿ ತಮ್ಮ ಮನವಿಗೆ ಸ್ಪಂದಿಸಿದ L&T ಕಂಪನಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧನ್ಯವಾದ ತಿಳಿಸಿದರು. ಇದನ್ನೂ ಓದಿ: ಆಭರಣ ಧರಿಸಿ ಮಿಯಾ ಖಲೀಫಾ ಹಾಟ್ ಫೋಟೋಶೂಟ್
Advertisement
ಇಲ್ಲಿ
ವೆಂಟಿಲೇಟರ್
ABG
ECG
Defibrillator
Patient monitoring system
Bpap
Mobile Xray
RO plant
Hot & cold water dispensers
Effluent Treatment/normalizing system
Toilets & bathrooms with hot water
CCTV
Ups & power supply
Rest rooms
Food supply
ಹಾಗು ಇನ್ನಿತರ ಆಧುನಿಕ ಸೌಲಭ್ಯಗಳಿವೆ.
— Pralhad Joshi (@JoshiPralhad) June 12, 2021
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜಗದೀಶ ಶೆಟ್ಟರ್, ಶ್ರೀ ಪ್ರದೀಪ್ ಶೆಟ್ಟರ್, ಶ್ರೀ ನಾಗೇಶ್ ಕಲಬುರ್ಗಿ, ಜಿಲ್ಲಾಧಿಕಾರಿ ಶ್ರೀ ನಿತೇಶ್ ಪಾಟೀಲ್, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಉಪಸ್ಥಿತರಿದ್ದರು.
ಇದರಿಂದ 7-8 ಜಿಲ್ಲೆಗಳಿಂದ ಕಿಮ್ಸಗೆ ಬೇರೆ ಬೇರೆ ಖಾಯಿಲೆಗಳಿಗೆ ಸಂಬಂಧಪಟ್ಟಂತೆ ಬರುವ ಜನರಿಗೆ ಅನಕೂಲವಾಗಲಿದೆ. ಅದಲ್ಲದೇ ಮೂರನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತಕ್ಕೆ ಈ ಆಸ್ಪತ್ರೆ ಅತ್ಯಂತ ಅನಕೂಲವಾಗಲಿದೆ.
— Pralhad Joshi (@JoshiPralhad) June 12, 2021