ಮುಂಬೈ: ಕೊರೊನಾ ಸಂಕಷ್ಟಕಾಲದಲ್ಲಿ ತಾವೇ ಖುದ್ದಾಗಿ ನಿಂತು ನೆರವು ನೀಡುತ್ತಿರುವ ಸೋನು ಸೂದ್ ಅವರು ಊಟ ನೀಡಿ, ವಲಸಿಗರು ತಮ್ಮ ಮನೆ ಸೇರಿಕೊಳ್ಳುವುದಕ್ಕೂ ಸೋನು ಸೂದ್ ಮಾಡಿರುವ ಸಹಾಯ ಮೆಚ್ಚುವಂತದ್ದು, ಇದೀಗ ಮತ್ತೆ ತಮ್ಮ ಸಹಾಯ ಹಸ್ತ ಚಾಚಿರುವ ಸೋನು ಅವರು ಭಾರತಕ್ಕೆ ಆಕ್ಸಿಜನ್ ಪೂರೈಸುವಲ್ಲಿ ಮುಖ್ಯಪಾತ್ರ ವಹಿಸುತ್ತಿದ್ದಾರೆ.
ಎಲ್ಲರೂ ಧೈರ್ಯವಾಗಿರಿ. ನಿಮ್ಮೆಲ್ಲರಿಗೂ ನಾನು ಆಕ್ಸಿಜನ್ ತರುತ್ತಿದ್ದೇನೆ ಎಂದು ಟ್ವೀಟ್ ಮಾಡಿ ಆಕ್ಸಿಜನ್ ಹೊತ್ತು ಬರುತ್ತಿರುವ ಟ್ರಕ್‍ಗಳ ವೀಡಿಯೋವನ್ನು ಶೇರ್ ಮಾಡಿದ್ದಾರೆ.
Stay strong India ????????
Oxygen from my side on your way❤️@SoodFoundation pic.twitter.com/72prrjtw7v
— sonu sood (@SonuSood) May 6, 2021
ಕೊರೊನಾ ಶುರುವಾಗಿನಿಂದಲೂ ಸೋನು ಸಹಾಯವನ್ನು ಮಾಡುತ್ತಲೇ ಬಂದಿದ್ದಾರೆ. ಪ್ರತ್ಯೇಕ ಫೋನ್ ನಂಬರ್ ಇಟ್ಟುಕೊಂಡು ಸೋನು ಸೂದ್ ತಂಡ ಸಹಾಯಕ್ಕಾಗಿ ಈ ನಂಬರ್ ಸಂಪರ್ಕಿಸುವಂತೆ ತಿಳಿಸಿದೆ. ಇದೀಗ ಭಾರತದಲ್ಲಿ ಆಕ್ಸಿಜನ್ ಅಭಾವ ಎದುರಾಗಿದ್ದು, ಈ ವಿವಾರದಲ್ಲೂ ನಟ ಸೋನು ಅವರು ಎಲ್ಲಾ ಭಾರತೀಯರಿಗೂ ಹೀರೋ ಆಗಿದ್ದಾರೆ.
Stay strong India ????????
Oxygen from my side is on your way❤️@SonuSood pic.twitter.com/vglCFxBZwu
— Sood Charity Foundation (@SoodFoundation) May 6, 2021
ಮುಂಬೈ, ದೆಹಲಿ ಎನ್ನದೇ ರಾಜ್ಯದ ಮೂಲೆ ಮೂಲೆಗೂ ಸೋನು ನೆರವಿನ ಹಸ್ತ ಚಾಚುತ್ತಿದ್ದಾರೆ. ಸೋನು ಸೂದ್ ಮಾಡುತ್ತಿರುವ ಸಹಾಯಕ್ಕೆ ಮೆಚ್ಚಿದ ತೆಲಂಗಾಣದ ಜನರು ಸೋನು ಅವರ ದೇವಸ್ಥಾನವನ್ನೇ ನಿರ್ಮಿಸಿದ್ದಾರೆ.