ಬೆಂಗಳೂರು: ಕಳೆದ ಏಳು ವರ್ಷದಿಂದ ಇದೇ ಮೊದಲ ಬಾರಿಗೆ ಆಂತರಿಕ ಭದ್ರತಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಭಾಸ್ಕರ್ ರಾವ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿರುವ ಭಾಸ್ಕರ್ ರಾವ್, 2013ರಲ್ಲಿ ಠಾಣೆ ಮಾಡಲಾಯಿತಾದರೂ ಇದೂವರೆಗೂ ಅದು ಸಕ್ರಿಯವಾಗಿರಲಿಲ್ಲ. ಆಗಸ್ಟ್ 3 ರಂದು ಮಾದಕ ವಸ್ತು ಕಾಯ್ದೆಯಡಿ ಮೊದಲ ಪ್ರಕರಣ ದಾಖಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ. ಈ ಸಂಬಂಧ ಗೃಹ ಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಡಿಜಿಪಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಬರೆದುಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
Advertisement
Internal Security Division was made a police station in 2013 but never activated. On 5 August, the first case under Narcotics Act registered and arrests made. @BSBommai and @DgpKarnataka have appreciated. It has state wide jurisdiction n augment specialized agencies.
— Bhaskar Rao (@Nimmabhaskar22) August 11, 2020
Advertisement
ಒಟ್ಟಿನಲ್ಲಿ ಠಾಣೆ ಪ್ರಾರಂಭವಾಗಿ ಏಳು ವರ್ಷವಾದರೂ ಇದುವರೆಗೂ ಯಾವೊಂದು ಪ್ರಕರಣ ಕೂಡ ದಾಖಲಾಗಿರಲಿಲ್ಲ. ಆದರೆ ಭಾಸ್ಕರ್ ರಾವ್ ಅವರು ಅಂತರಿಕ ಭದ್ರತಾ ಪಡೆಯ ಉಸ್ತುವಾರಿ ವಹಿಸಿಕೊಳ್ಳುತ್ತಿದ್ದಂತೆ ಮೊದಲ ಪ್ರಕರಣ ದಾಖಲಾಗಿದೆ. ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿರುವ ಭಾಸ್ಕರ್ ರಾವ್ ಅವರು ಮಾದಕ ವಸ್ತು ನಿಯಂತ್ರಣ ಕಾಯ್ದೆಯಡಿ ಆರೋಪಿಯನ್ನು ಬಂಧಸಿದ್ದು, ಮೊದಲ ಬಾರಿಗೆ ಪ್ರಕರಣ ದಾಖಲಾಗುವ ಮೂಲಕ ಪೊಲೀಸ್ ಠಾಣೆಗೆ ಅಧಿಕೃತ ಚಾಲನೆ ನಿಡಿದ್ದಾರೆ.