ಲಕ್ನೋ: ಶಾಪಿಂಗ್ ಮಾಡುವ ವೇಳೆ ಆಂಟಿ ಎಂದು ಕರೆದಿದ್ದ ಹುಡುಗಿಗೆ ಮಹಿಳೆ ಹೊಡೆದಿರುವ ಘಟನೆ ಉತ್ತರ ಪ್ರದೇಶದ ಇತಾನ ಬಾಬುಗಂಜ್ ಮಾರುಕಟ್ಟೆಯಲ್ಲಿ ನಡೆದಿದೆ.
ಇತಾನ ಬಾಬುಗಂಜ್ ಮಾರುಕಟ್ಟೆಯಲ್ಲಿ 40 ವರ್ಷದ ಮಹಿಳೆ ತನ್ನ ಗೆಳತಿಯರೊಂದಿಗೆ ಶಾಪಿಂಗ್ ಮಾಡುತ್ತಿದ್ದಳು. ಈ ವೇಳೆ ಅಲ್ಲಿಯೆ ಶಾಪಿಂಗ್ ಮಾಡುತ್ತಿದ್ದ ಹುಡುಗಿ ಆಂಟಿ ಎಂದು ಕರೆದಿದ್ದಾಳೆ ಇದರಿಂದ ಕೋಪಗೊಂಡಿರುವ ಮಹಿಳೆ ಹುಡುಗಿಗೆ ಹಿಗ್ಗಾಮುಗ್ಗ ಥಳಿಸಿದ್ದಾಳೆ.
यूपी के एटा में आंटी कहने पर भड़की महिला, करवा चौथ की खरीददारी छोड़ बाल पकड़कर पीटा#UttarPradesh pic.twitter.com/yIr9werUzW
— Hindustan (@Live_Hindustan) November 3, 2020
ಹುಡುಗಿ ಆಂಟಿ ಎಂದು ಕರೆದ ನಂತರ ಮಹಿಳೆ ಮತ್ತು ಆಕೆಯ ಸ್ನೇಹಿತೆಯರು ಶಾಪಿಂಗ್ ನಿಲ್ಲಿಸಿ ಜಗಳ ಪ್ರಾರಂಭಿಸಿದ್ದಾರೆ. ಮಹಿಳೆ ಸಂಘರ್ಷದಲ್ಲಿ ಹುಡುಗಿಯ ಕೂದಲನ್ನು ಹಿಡಿದು ಎಳೆದಾಡಿದ್ದಾಳೆ.
ಲೇಡಿ ಪೊಲೀಸ್ ಮಧ್ಯಪ್ರವೇಶಿಸಿದ ನಂತರ ಇಬ್ಬರೂ ಜಗಳ ನಿಲ್ಲಿಸಿದ್ದಾರೆ. ನಂತರ ಇವರ ಸಮಸ್ಯೆಯನ್ನು ಇತ್ಯರ್ಥಪಡಿಸಿ ಅಲ್ಲಿಂದ ಕಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ. ಮಹಿಳೆ ಹುಡುಗಿಯನ್ನು ಎಳೆದು ಹೊಡೆದಿರುವ ವಿಡಿಯೋ ಟ್ವಿಟ್ಟರ್‍ನಲ್ಲಿ ವೈರಲ್ ಆಗಿದೆ.