ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ವಿಶ್ವೇಶ್ವರಪುರ ಬಳಿ ಆಂಜನೇಯ ದೇಗುಲಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ತಡ ರಾತ್ರಿ ನಡೆದಿದೆ.
ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಜಾಸ್ ಟೋಲ್ ಬಳಿ ಇರುವ ಸರ್ಕಲ್ ಆಂಜನೇಯ ದೇವಾಲಯಕ್ಕೆ ಬೆಂಕಿ ಹಚ್ಚಲಾಗಿದೆ. ಅಲ್ಲದೆ ಕಿಡಿಗೇಡಿಗಳು ವಿಗ್ರಹವನ್ನು ಜಖಂ ಮಾಡಿ ಹೀನ ಕೃತ್ಯ ವೆಸಗಿದ್ದಾರೆ. ದೇವರ ವಿಗ್ರಹ ಹಾಗೂ ಸಂಪೂರ್ಣ ದೇವಾಲಯ ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ.
ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯವನ್ನು ಖಂಡಿಸಿದ ಹಲವಾರು ಮುಖಂಡರು ಮತ್ತು ಸಂಘಟನೆಗಳು, ಈ ಘಟನೆಯನ್ನು ಪೊಲಿಸರು ಮತ್ತು ತಾಲೂಕು ಆಡಳಿತ ಗಂಭೀರವಾಗಿ ತೆಗೆದುಕೊಂಡು ಕಿಡಿಗೇಡಿಗಳಿಗೆ ಶಿಕ್ಷೆಯಾಗಬೇಕು. ಕೋಮು ಸೌರ್ಹಾದತೆಯನ್ನು ಯಾರು ಕದಡಬಾರದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.