ಬೆಂಗಳೂರು: ನಾಡಿನಾದ್ಯಂತ ಜನ ಹೊಸ ವರ್ಷವನ್ನು ಆಚರಿಸುತ್ತಿದ್ದು, ರಾಜಕೀಯ ನಾಯಕರು, ಸೆಲೆಬ್ರಿಟಿಗಳು ಕೂಡ ತಮ್ಮ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅಂತೆಯೇ ಇದೀಗ ಸ್ಯಾಂಡಲ್‍ವುಡ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ.
ಹೊಸ ವರ್ಷ ಎಂದ ಮೇಲೆ ಏನೋ ಒಂದು ಹೊಸ ಭರವಸೆ ನಮ್ಮಲ್ಲಿ ಇರುತ್ತದೆ. ಹೊಸ ವರ್ಷ ಒಳಿತನ್ನೇ ತರಲಿ ಎಂದು ಆಶಿಸುತ್ತೇನೆ. ಆದಷ್ಟು ಬೇಗ ಈ ಕರೋನ ಮಹಾಮಾರಿ ನಮ್ಮ ಜೀವನದಿಂದ ದೂರವಾಗಲಿ. ಎಲ್ಲರ ಮನೆ ಮನಗಳಲ್ಲಿ ಹೊಸ ವರ್ಷವೂ ಸುಖ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡಲಿ.
ಎಲ್ಲರಿಗೂ ಆಂಗ್ಲೋ ಕ್ಯಾಲೆಂಡರ್ ಅನುಸಾರವಾದ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು pic.twitter.com/o2yLDzoTNM
— Darshan Thoogudeepa (@dasadarshan) January 1, 2021
ಈ ಸಂಬಂಧ ಟ್ವೀಟ್ ಮಾಡಿರುವ ದಾಸ, ಹೊಸ ವರ್ಷ ಎಂದ ಮೇಲೆ ಏನೋ ಒಂದು ಹೊಸ ಭರವಸೆ ನಮ್ಮಲ್ಲಿ ಇರುತ್ತದೆ. ಹೊಸ ವರ್ಷ ಒಳಿತನ್ನೇ ತರಲಿ ಎಂದು ಆಶಿಸುತ್ತೇನೆ. ಆದಷ್ಟು ಬೇಗ ಈ ಕರೋನ ಮಹಾಮಾರಿ ನಮ್ಮ ಜೀವನದಿಂದ ದೂರವಾಗಲಿ. ಎಲ್ಲರ ಮನೆ ಮನಗಳಲ್ಲಿ ಹೊಸ ವರ್ಷವೂ ಸುಖ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡಲಿ. ಎಲ್ಲರಿಗೂ ಆಂಗ್ಲೋ ಕ್ಯಾಲೆಂಡರ್ ಅನುಸಾರವಾದ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ಮಹಾಮಾರಿ ಕೊರೊನಾ ವೈರಸ್ ಹಾಗೂ ರೂಪಾಂತರಿ ಕೊರೊನಾದಿಂದಾಗಿ ಈ ಬಾರಿ ನಾಡಿನಾದ್ಯಂತ ಅತ್ಯಂತ ಸರಳವಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಯಿತು. ಬೆಂಗಳೂರಿನಲ್ಲಿ ಹೊಸ ವರ್ಷದ ಅದ್ದೂರಿ ಆಚರಣೆಗೆ ಬ್ರೇಕ್ ಹಾಕಲಾಗಿತ್ತು. ಸಿಲಿಕಾನ್ ಸಿಟಿಯಲ್ಲಿ ಪೊಲೀಸ್ ಬಂದೋ ಬಸ್ತ್ ಒದಗಿಸಲಾಗಿತ್ತು. ಈ ಹಿನ್ನಲೆಯಲ್ಲಿ ಈ ಬಾರಿಯ ನ್ಯೂ ಇಯರ್ ಆಚರಣೆ ಬಹಳ ಸರಳವಾಗಿಯೇ ನಡೆಯಿತು.