ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಹಾಗೂ ಬಿಗ್‍ಬಾಸ್ ಸೀಸನ್-2 ರ ಸ್ಪರ್ಧಿ ಅನಿತಾ ಭಟ್‍ರವರು ಕನ್ನಡವನ್ನು ತಪ್ಪಾಗಿ ಬಳಸಿದ ನೆಟ್ಟಿಗರೊಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೊರೊನಾ ಲಾಕ್‍ಡೌನ್ ಸಂಕಷ್ಟದ ಬಳಿಕ ಸರ್ಕಾರಿ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದ ಟ್ವೀಟ್‍ವೊಂದಕ್ಕೆ ಅನಿತಾ ಭಟ್‍ರವರು ಹೌದು, ನಾನು ಕೂಡ ಓದಿದ್ದು ಸರ್ಕಾರಿ ಶಾಲೆಯಲ್ಲಿಯೇ ಎಂದು ಪ್ರತಿಕ್ರಿಯಿಸಿದ್ದರು.
ಇದಕ್ಕೆ ನೆಟ್ಟಿಗರೊಬ್ಬರು ನೀವು ಓದಿದ್ದು ಸರ್ಕಾರಿ ಶಾಲೆಯಲ್ಲಿ ಸಂತೋಷ. ನಿಮ್ಮ ಮಕ್ಕಳು? ನಾನು ಓದಿದ್ದು ಸರ್ಕಾರಿ ಶಾಲೆಯಲ್ಲಿ, ನನ್ನ ಮಕ್ಕಳನ್ನು ಸಹ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಿದ್ದೇನೆ. ಈ ಮಾತನ್ನು ಹೇಳುವ ಹೆದೆಗಾರಿಕೆ ಇರಬೇಕಲ್ಲವೇ? ನನ್ನ ರಕ್ತದ, ನನ್ನಿಂದ ಜನ್ಮ ಪಡೆದವರ ರಕ್ತದ ಕಣ ಕಣವೂ ಕನ್ನಡವೇ ಎಂದು ಹೇಳಿದ್ದಾರೆ.
ನಾನು ಓದಿದ್ದು ಸರ್ಕಾರಿ ಶಾಲೆಯಲ್ಲಿ. YTSS ಯಲ್ಲಾಪುರ.. ???? https://t.co/9ytBPYf3Jc
— Anita Bhat (@IamAnitaBhat) July 1, 2021
ಇದರಿಂದ ರೊಚ್ಚಿಗೆದ್ದ ಅನಿತಾ ಭಟ್‍ರವರು, ಹೆದಗಾರಿಕೆ ಅಲ್ಲ. ಎದೆಗಾರಿಕೆ, ಕನ್ನಡ ಶಾಲೆಯಲ್ಲಿ ಓದಿದರೆ ಸಾಕಾಗೋದಿಲ್ಲ. ಅ ಕಾರಕ್ಕೂ, ಹ ಕಾರಕ್ಕೂ ವ್ಯತ್ಯಾಸ ತಿಳಿದುಕೊಳ್ಳಿ, ಆಮೇಲೆ ಬೇರೆಯವರನ್ನ ಆಡಿಕೊಳ್ಳಬಹುದಂತೆ ನಮಸ್ಕಾರ.
ಹೆದೆಗಾರಿಕೆ ಅಲ್ಲ “ಎದೆಗಾರಿಕೆ”, ಕನ್ನಡ ಶಾಲೆಯಲ್ಲಿ ಓದಿದರೆ ಸಾಕಾಗೋದಿಲ್ಲ, ಅ ಕಾರಕ್ಕೂ,ಹ ಕಾರಕ್ಕೂ ವ್ಯತ್ಯಾಸ ತಿಳಿದುಕೊಳ್ಳಿ, ಆಮೇಲೆ ಬೇರೆಯವರನ್ನ ಆಡಿಕೊಳ್ಳಬಹುದಂತೆ.. ನಮಸ್ಕಾರ ???????? https://t.co/sK9QGYcH7z
— Anita Bhat (@IamAnitaBhat) July 2, 2021
ಅ ಕಾರಕ್ಕೆ ಅ ಕಾರವನ್ನೇ ಉಪಯೋಗಿಸೋದು ಗ್ರಾಂಥಿಕ ಕನ್ನಡ ಅಲ್ಲ. ಯಾವುದೇ ಪ್ರದೇಶಕ್ಕೆ ಹೋದರು ಸ್ಲಾಗ್ ಹಾಗೂ ಅಸೆಟ್ ಬದಲಾಗುತ್ತೆಯೇ ಹೊರತು ವ್ಯಾಕರಣವಾಗಲಿ, ಲಿಪಿಯಾಗಲಿ, ಅಕ್ಷರಗಳಾಗಲಿ ಬದಲಾಗುವುದಿಲ್ಲ. ಇದರ ಬಗ್ಗೆ ಸ್ಪೇಸ್ ಮಾಡೋಣ ಎಂದು ಮರು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ : ಬಿಗ್‍ಬಾಸ್ ಮನೆಗೆ ಪಿಕ್‍ನಿಕ್‍ಗೆ ಬಂದಂತೆ ವರ್ತನೆ- ರೊಚ್ಚಿಗೆದ್ದ ನಿಧಿ
ಅ ಕಾರಕ್ಕೆ ಅ ಕಾರವನ್ನೇ ಉಪಯೋಗಿಸೋದು ಗ್ರಾಂಥಿಕ ಕನ್ನಡ ಅಲ್ಲ. ಯಾವುದೇ ಪ್ರದೇಶಕ್ಕೆ ಹೋದರು slang ಹಾಗೂ accent ಬದಲಾಗತ್ತೆಯೇ ಹೊರತು ವ್ಯಾಕರಣವಾಗಲಿ, ಲಿಪಿಯಾಗಲಿ, ಅಕ್ಷರಗಳಾಗಲಿ ಬದಲಾಗುವುದಿಲ್ಲ. @chandusonu_ ಇದರ ಬಗ್ಗೆ ಒಂದು ಸ್ಪೇಸ್ ಮಾಡೋಣ. https://t.co/7N9JXSiQZq
— Anita Bhat (@IamAnitaBhat) July 2, 2021