– ಕಾಂಗ್ರೆಸ್‍ಗೆ ಚಹಾ ನೀಡದ ಅಸ್ಸಾಂ ಜನತೆ
– ರಾಹುಲ್ ಗಾಂಧಿ, ಪ್ರಿಯಾಂಕಾ ಬಿರುಸಿನ ಪ್ರಚಾರಕ್ಕೆ ಹಿನ್ನಡೆ
ನವದೆಹಲಿ: ಅಸ್ಸಾಂ ಚಹಾ ತೋಟದಲ್ಲಿ ಕಮಲ ಎರಡನೇ ಬಾರಿ ಅರಳಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ. ಅಸ್ಸಾಂನಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅಬ್ಬರದ ಪ್ರಚಾರಕ್ಕೆ ಹಿನ್ನಡೆ ಆಗಿದೆ.
ಒಟ್ಟು 126 ಕ್ಷೇತ್ರಗಳಲ್ಲಿ ಬಿಜೆಪಿ ಸರಳವಾಗಿ ಮ್ಯಾಜಿಕ್ ನಂಬರ್ ಪಡೆಯಲಿದೆ ಎಂದು ಇಂಡಿಯಾ ಟುಡೇ, ಟುಡೇಸ್ ಚಾಣಕ್ಯ ಮತ್ತು ಸಿಎನ್‍ಎಕ್ಸ್ ಸಮೀಕ್ಷೆಗಳು ಹೇಳಿವೆ. ಸಿಎಂ ಸರ್ಬಾನಂದ್ ಸೋನೊವಾಲ ಅವರೇ ಜನಪ್ರಿಯ ನಾಯಕರಾಗಿದ್ದಾರೆ. ಆದ್ರೆ ಬಿಜೆಪಿ ಈ ಬಾರಿ ಸಿಎಂ ಅಭ್ಯರ್ಥಿಯನ್ನ ಘೋಷಣೆ ಮಾಡಿಲ್ಲ. ಆದ್ರೆ ಅಸ್ಸಾಂ ಜನತೆ ಹೊಸ ನಾಯಕನ ಹುಡುಕಾಟದಲ್ಲಿ ಇಲ್ಲ ಅಂತ ಸಮೀಕ್ಷೆಗಳು ಹೇಳುತ್ತಿವೆ.
Advertisement
Advertisement
ಯಾರಿಗೆ ಎಷ್ಟು ಕ್ಷೇತ್ರ?: ಅಸ್ಸಾಂ ಒಟ್ಟು ವಿಧಾನಸಭಾ ಕ್ಷೇತ್ರಗಳು – 126
* ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಜಂಟಿ ಸಮೀಕ್ಷೆ
ಬಿಜೆಪಿ: 75-85
ಕಾಂಗ್ರೆಸ್ + ಮೈತ್ರಿ: 40-50
ಇತರೆ: 1-4
Advertisement
* ಟೈಮ್ಸ್ ನೌ – ಸಿ ವೋಟರ್
ಬಿಜೆಪಿ: 65
ಕಾಂಗ್ರೆಸ್: 59
ಇತರೆ: 2
Advertisement
* ಟುಡೇಸ್ ಚಾಣಕ್ಯ
ಬಿಜೆಪಿ: 61-79
ಕಾಂಗ್ರೆಸ್: 47-65
ಇತರೆ: 0-3
* ಸಿಎನ್‍ಎಕ್ಸ್
ಬಿಜೆಪಿ: 74-84
ಕಾಂಗ್ರೆಸ್: 40-50
ಇತರೆ: 1-3
* ಜನ್ ಕೀ ಬಾತ್
ಬಿಜೆಪಿ: 68-78
ಕಾಂಗ್ರೆಸ್: 48-58
ಇತರೆ: 0
ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ದೀದಿ ಅಧಿಕಾರಕ್ಕೆ
– 3 ಕ್ಷೇತ್ರಗಳಿಂದ 115ಕ್ಕೆ ಬಿಜೆಪಿ ಜಂಪ್
– ವರ್ಕೌಟ್ ಆಗದ ಕಾಂಗ್ರೆಸ್ ಮೈತ್ರಿ ತಂತ್ರಗಾರಿಕೆhttps://t.co/q6yqqjAiXg#WestBengalElections2021 #ExitPoll #WestBengalPolls #TMC #BJP #Congress #KannadaNews
— PublicTV (@publictvnews) April 29, 2021
ಅಸ್ಸಾಂ ವಿಧಾನಸಭೆ 2016 ಫಲಿತಾಂಶ: ಒಟ್ಟು 126 ಕ್ಷೇತ್ರಗಳಲ್ಲಿ ಬಿಜೆಪಿ 60, ಕಾಂಗ್ರೆಸ್ 26 ಮತ್ತು ಇತರರು 40 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದರು. ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಅಸ್ಸಾಂನಲ್ಲಿ ಚೇತರಿಸಿಕೊಂಡಿದೆ ಎಂದು ಹೇಳಬಹುದು. 2016ರಲ್ಲಿ ಪಕ್ಷೇತರರನ್ನ ಕೈ ಹಿಡಿದಿದ್ದ ಅಸ್ಸಾಂ ಈ ಬಾರಿ ಸಂಪೂರ್ಣ ತಿರಸ್ಕರಿಸೋದು ಸಮೀಕ್ಷೆಯ ಅಂಕಿ-ಅಂಶಗಳು ಹೇಳುತ್ತಿವೆ. ಇದನ್ನೂ ಓದಿ: ಮಸ್ಕಿ, ಬಸವ ಕಲ್ಯಾಣದಲ್ಲಿ ಕಾಂಗ್ರೆಸ್ – ಬೆಳಗಾವಿಯಲ್ಲಿ ಮತ್ತೆ ಬಿಜೆಪಿ