– ಸರ್ಕಾರದಿಂದ ಮಹತ್ವದ ಆದೇಶ
– ಧಾರ್ಮಿಕ ಶಿಕ್ಷಣಕ್ಕೆ ಹಣ ನೀಡಲ್ಲವೆಂದ ಸರ್ಕಾರ
ದಿಸ್ಪುರ: ರಾಜ್ಯ ಸರ್ಕಾರ ನಡೆಸುತ್ತಿರುವ ಎಲ್ಲ ಮದರಸಾ ಹಾಗೂ ಸಂಸ್ಕೃತ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಧಾರ್ಮಿಕ ಶಿಕ್ಷಣಕ್ಕೆ ಅಸ್ಸಾಂ ಸರ್ಕಾರ ಹಣ ನೀಡಲು ಸಾಧ್ಯವಿಲ್ಲ ಎಂದು ಶಿಕ್ಷಣ ಹಾಗೂ ಹಣಕಾಸು ಸಚಿವ ಹಿಮಾಂತ ಬಿಸ್ವಾ ಶರ್ಮಾ ಘೋಷಿಸಿದ್ದಾರೆ.
Advertisement
ನಮ್ಮ ಸರ್ಕಾರದ ನೀತಿಯಂತೆ ಈ ಹಿಂದೆ ವಿಧಾನಸಭೆಯಲ್ಲಿ ಘೋಷಿಸಿದ್ದು, ಸರ್ಕಾರದ ನಿಧಿಯಿಂದ ಯಾವುದೇ ಧಾರ್ಮಿಕ ಶಿಕ್ಷಣವನ್ನು ನೀಡುವುದಿಲ್ಲ. ಆದರೆ ಖಾಸಗಿ ಸಂಸ್ಕೃತ ಶಾಲೆಗಳು ಹಾಗೂ ಮದರಸಾಗಳ ಬಗ್ಗೆ ನಾವು ಏನನ್ನೂ ಹೆಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
Advertisement
ಈ ಕುರಿತು ನವೆಂಬರ್ ನಲ್ಲಿ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ. ಮದರಸಾಗಳನ್ನು ಮುಚ್ಚಿದ ಬಳಿಕ 48 ಶಿಕ್ಷಕರನ್ನು ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಶಾಲೆಗಳಿಗೆ ವರ್ಗಾಯಿಸಲಾಗುವುದು ಎಂದು ಹೇಳಿದ್ದಾರೆ.
Advertisement
Advertisement
ಸರ್ಕಾರದ ಈ ನಿರ್ಧಾರಕ್ಕೆ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್(ಎಐಯುಡಿಎಫ್) ಮುಖ್ಯಸ್ಥ ಬದ್ರುದ್ದಿನ್ ಅಜ್ಮಲ್ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರ ಮದರಸಾಗಳನ್ನು ಬಂದ್ ಮಾಡಿದರೆ 2021ರ ಚುನಾವಣೆ ಬಳಿಕ ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಮತ್ತೆ ತೆರೆಯುತ್ತೇವೆ. ಮದರಸಾಗಳನ್ನು ಮುಚ್ಚಲು ಬಿಡುವುದಿಲ್ಲ. 50-60 ವರ್ಷಗಳ ಹಳೆಯ ಮದರಸಾಗಳನ್ನು ಬಿಜೆಪಿ ಸರ್ಕಾರ ಒತ್ತಾಯಪೂರ್ವಕವಾಗಿ ಮುಚ್ಚುತ್ತಿದ್ದು, ನಾವು ಮತ್ತೆ ತೆರೆಯುತ್ತೇವೆ ಎಂದು ಹೇಳಿದ್ದಾರೆ.
ಅಸ್ಸಾಂನಲ್ಲಿ ಒಟ್ಟು 614 ಸರ್ಕಾರಿ ಹಾಗೂ ಅನುದಾನಿತ ಮದರಸಾಗಳಿದ್ದು, ಇದರಲ್ಲಿ 57 ಬಾಲಕಿಯರಿಗೆ, 3 ಬಾಲಕರಿಗೆ ಹಾಗೂ ಉಳಿದ 554 ಕೋ ಎಜುಕೇಶನ್ ಮದರಸಾಗಳಿವೆ. ಇದರಲ್ಲಿ 17 ಮದರಸಾಗಳು ಉರ್ದು ಭಾಷೆಯದ್ದಾಗಿವೆ. ಅಲ್ಲದೆ ರಾಜ್ಯದಲ್ಲಿ ಸುಮಾರು 1 ಸಾವಿರ ಸಂಸ್ಕೃತ ಶಾಲೆಗಳಿದ್ದು, ಇದರಲ್ಲಿ ಕೇವಲ 100 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಾಗಿವೆ. ಅಸ್ಸಾಂ ಸರ್ಕಾರ 3-4 ಕೋಟಿ ರೂ.ಗಳನ್ನು ಮದರಸಾಗಳಿಗೆ ಖರ್ಚು ಮಾಡುತ್ತಿದೆ. 1 ಕೋಟಿ ರೂ.ಗಳನ್ನು ಸಂಸ್ಕೃತ ಶಾಲೆಗಳಿಗೆ ಪ್ರತಿ ವರ್ಷ ವ್ಯಯಿಸುತ್ತಿದೆ.