ಸಿಡ್ನಿ: ಇಂದು ನಡೆಯುತ್ತಿರುವ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ನಡುವಿನ ಎರಡನೇ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಇಂಡಿಯಾಗೆ 195ರನ್‍ಗಳ ಟಾರ್ಗೆಟ್ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ನಾಯಕ ಮ್ಯಾಥ್ಯೂ ವೇಡ್ ಮತ್ತು ಡಿ ಆರ್ಸಿ ಶಾರ್ಟ್ ಉತ್ತಮ ಆರಂಭ ನೀಡಿದರು. ಆದರೆ 9 ರನ್ ಗಳಸಿದ್ದ ಡಿ ಆರ್ಸಿ ಶಾರ್ಟ್ ಟಿ ನಟರಾಜನ್ ಅವರ ಬೌಲಿಂಗ್‍ನಲ್ಲಿ ಐಯ್ಯರ್ ಗೆ ಕ್ಯಾಚ್ ನೀಡಿ ಹೊರನಡೆದರು. ಇದಾದ ನಂತರ ಭರ್ಜರಿಯಾಗಿ ಬ್ಯಾಟ್ ಬೀಸಿದ ವೇಡ್ 25 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ನಂತರ ಕ್ಯಾಚ್ ಬಿಟ್ಟು ಕೊಹ್ಲಿ ಹೊಡೆದ ರನ್ ಔಟ್‍ಗೆ ವೇಡ್ 58 ರನ್ ಗಳಸಿ ಔಟ್ ಆದರು.
ನಂತರ ಜೊತೆಯಾದ ಸ್ಟೀವನ್ ಸ್ಮಿತ್ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ಅಬ್ಬರ ಆಟಕ್ಕೆ ಮುಂದಾದರು. ಫೋರ್ ಸಿಕ್ಸರ್ ಗಳ ಸುರಿಮಳೆಗೈಯುತ್ತಿದ್ದ ಈ ಜೋಡಿಗೆ 12ನೇ ಓವರ್ ನಾಲ್ಕನೇ ಬಾಲಿನಲ್ಲಿ ಶಾರ್ದೂಲ್ ಠಾಕೂರ್ ಶಾಕ್ ನೀಡಿದರು. 13 ಬಾಲಿಗೆ 22 ರನ್ ಗಳಸಿದ್ದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಮ್ಯಾಕ್ಸ್ ವೆಲ್ ಅವರನ್ನು ಔಟ್ ಮಾಡಿದರು. ಈ ನಂತರ 38 ಬಾಲಿಗೆ 46 ರನ್ ಸಿಡಿಸಿದ್ದ ಸ್ಟೀವನ್ ಸ್ಮಿತ್ ಚಹಲ್ ಅವರ ಬೌಲಿಂಗ್‍ನಲ್ಲಿ ಪಾಂಡ್ಯಗೆ ಕ್ಯಾಚ್ ಕೊಟ್ಟು ಹೊರನಡೆದರು.
18ನೇ ಓವರಿನಲ್ಲಿ ದಾಳಿಗೆ ಬಂದ ನಟರಾಜನ್ ಅವರು ಮೂರನೇ ಬಾಲಿನಲ್ಲಿ 18 ಬಾಲಿಗೆ 26 ರನ್ ಗಳಿಸಿದ್ದ ಮೊಯಿಸಸ್ ಹೆನ್ರಿಕ್ಸ್ ಅವರನ್ನು ಬಲಿ ಪಡೆದುಕೊಂಡರು. ಆ ನಂತರ ಬಂದ ಯಾವುದೇ ಬ್ಯಾಟ್ಸ್ ಮ್ಯಾನ್ ಅಕ್ರಮಣಕಾರಿಯಾಗಿ ಬ್ಯಾಟ್ ಬೀಸಲಿಲ್ಲ. ಹೀಗಾಗಿ ಒಂದು ಹಂತದಲ್ಲಿ 200 ರನ್ ಗಡಿ ದಾಟುವ ಸನಿಹದಲ್ಲಿದ್ದ ಆಸೀಸ್ ಭಾರತ ಬಿಗಿ ಬೌಲಿಂಗ್ ದಾಳಿಯಿಂದ 194 ರನ್ ಗಳಸಿತು.