– ಬಾಲಕಿ ತಾಯಿ ನೋಡ್ತಿದ್ದಂತೆ ಎಸ್ಕೇಪ್
ನವದೆಹಲಿ: ಮನೆಗೆ ವಿದ್ಯುತ್ ಮೀಟರ್ ಅಳವಡಿಸಲು ಬಂದಿದ್ದ ವ್ಯಕ್ತಿಗೆ ಬಾಲಕಿಗೆ ಮರ್ಮಾಂಗ ತೋರಿಸಿರುವ ಘಟನೆ ದೆಹಲಿಯ ಮಾಳವೀಯಾ ನಗರದಲ್ಲಿ ನಡೆದಿದೆ. ಬಾಲಕಿ ತಾಯಿ ನೀಡಿದ ದೂರಿನ ಹಿನ್ನೆಲೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಶನಿವಾರ ಸಂಜೆ ಈ ಘಟನೆ ನಡೆದಿದೆ. ಮಾಳವೀಯಾ ನಗರದಲ್ಲಿರುವ ಮನೆಗೆ ವಿದ್ಯುತ್ ಮೀಟರ್ ಅಳವಡಿಸಲು ಬಂದಿದ್ದನು. ಈ ವೇಳೆ ಬಾಗಿಲ ಬಳಿಯೇ ಕುಳಿತಿದ್ದ ಬಾಲಕಿಗೆ ಮೊದಲಿಗೆ ಮೊಬೈಲಿನಲ್ಲಿ ಅಶ್ಲೀಲ ವೀಡಿಯೋ ತೋರಿಸಿದ್ದಾನೆ. ನಂತರ ತನ್ನ ಪ್ಯಾಂಟ್ ಬಿಚ್ಚಿ ಮರ್ಮಾಂಗ ತೋರಿಸುವ ವೇಳೆ ಹೊರಗೆ ಬಾಲಕಿ ತಾಯಿ ಬಂದಿದ್ದಾರೆ. ಬಾಲಕಿ ತಾಯಿ ಬರುತ್ತಿದ್ದಂತೆ ಕಾಮುಕ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಮಹಿಳೆ ಕೂಡಲೇ ಪತಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಪತಿಯ ಸಲಹೆ ಮೆರೆಗೆ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು 32 ವರ್ಷದ ವ್ಯಕ್ತಿಯನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಕುಟುಂಬದ ಜೊತೆ ಮಾಳವೀಯಾ ನಗರದಲ್ಲಿ ವಾಸವಾಗಿದ್ದೇನೆ. ಶನಿವಾರ ಸಂಜೆ ಬಿಎಸ್‍ಇಎಸ್ ಸಿಬ್ಬಂದಿ ಮನೆಗೆ ವಿದ್ಯುತ್ ಮೀಟರ್ ಅಳವಡಿಸಲು ಬಂದಿದ್ದ ನು. ಮಗನಿಗೆ ಅಶ್ಲೀಲ ವೀಡಿಯೋ ತೋರಿಸಿದ್ದಾನೆ. ನಂತರ ಮಗಳಿಗೆ ತನ್ನ ಪ್ರೈವೇಟ್ ಪಾರ್ಟ್ ತೋರಿಸಿದ್ದಾನೆ ಎಂದು ಬಾಲಕಿ ತಾಯಿ ಹೇಳಿದ್ದಾರೆ.