– ವರದಕ್ಷಿಣೆಗಾಗಿ ನಿನ್ನನ್ನು ಮದುವೆಯಾದೆ
– ನೀನು ನೋಡಲು ಚೆನ್ನಾಗಿಲ್ಲ
– ಪತಿ ವಿರುದ್ಧ ಠಾಣೆ ಮೆಟ್ಟಿಲೇರಿದ ಪತ್ನಿ
ಬೆಂಗಳೂರು: ಅಶ್ಲೀಲ ವಿಡಿಯೋ ನೋಡುವಂತೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಪತಿ ವಿರುದ್ಧ ವೈದ್ಯೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆರೋಪಿ ಪತಿ ಲತೀರ್ ರೆಹಮಾನ್ ವಿರುದ್ಧ ವೈದ್ಯೆ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಎಫ್‍ಐಆರ್ ರಿಜಿಸ್ಟರ್ ಮಾಡಿದ್ದಾರೆ. ಅಶ್ಲೀಲ ವಿಡಿಯೋ ನೋಡುವಂತೆ ಪತಿ ಕಿರುಕುಳ ನೀಡುತ್ತಾನೆ ಎಂದು ಕಿರುಕುಳ ತಾಳಲಾರದೆ ಸಂತ್ರಸ್ತೆ ಬಸವನಗುಡಿಯ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಲತೀರ್ ರೆಹಮಾನ್ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದಾನೆ.
Advertisement
Advertisement
ಲತೀರ್ ರೆಹಮಾನ್ 2019ರ ಜೂನ್ ವೈದ್ಯೆಯನ್ನು ವಿವಾಹವಾಗಿದ್ದು, ವಿವಾಹ ಬಳಿಕ ಆರಂಭದಲ್ಲಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ. ಹೆಚ್ಚಿನ ವರದಕ್ಷಿಣೆಗಾಗಿ ಗಂಡನ ಮನೆಯವರು ನನ್ನ ಚಿನ್ನಾಭರಣ ಕಸಿದು ಹೊರದಬ್ಬಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
Advertisement
ದೂರಿನಲ್ಲಿ ಏನಿದೆ?
ಜುಲೈ 22, 2019ರಂದು ನಮ್ಮ ಮನೆಯವರು ಮುಸ್ಲಿಂ ಸಂಪ್ರದಾಯದಂತೆ ವಿವಾಹ ಮಾಡಿದ್ದು, ಈ ವೇಳೆ ಚಿನ್ನದ ಒಡವೆ, ಕಾರ್ ಹಾಗೂ ಗೃಹೋಪಯೋಗಿ ಸಾಮಗ್ರಿಗಳನ್ನು ನೀಡಿ ಅದ್ಧೂರಿಯಾಗಿ ವಿವಾಹ ಮಾಡಿ ಕೊಟ್ಟಿದ್ದಾರೆ. ವಿವಾಹವಾದ ಬಳಿಕ ನೀನು ನೋಡಲು ಚೆನ್ನಾಗಿಲ್ಲ. ನಮಗೆ ಇನ್ನೂ ಹೆಚ್ಚಿನ ವರದಕ್ಷಿಣೆ ನೀಡುವ ಶ್ರೀಮಂತ ಮನೆಯವರು ಸಿಗುತ್ತಿದ್ದರು ಎಂದು ಪ್ರತಿ ದಿನ ಬಾಯಿಗೆ ಬಂದಂತೆ ಬೈದು ಅವಮಾನ ಮಾಡುತ್ತಿದ್ದಾರೆ. ನಿನ್ನನ್ನು ಇಷ್ಟಪಟ್ಟು ವಿವಾಹವಾಗಿಲ್ಲ ಹೆಚ್ಚಿನ ವರದಕ್ಷಿಣೆ ನೀಡುತ್ತೀರೆಂದು ವಿವಾಹವಾದೆ ಎಂದು ಕಿರುಕುಳ ನೀಡುತ್ತಿದ್ದಾನೆ.
Advertisement
ಬೇರೆ ಹುಡುಗಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಲ್ಲದೆ, ಅಶ್ಲೀಲ ವಿಡಿಯೋಗಳನ್ನು ನೋಡಿ, ನನಗೂ ನೋಡುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ಒಪ್ಪದಿದ್ದಾಗ ಬಾಯಿಗೆ ಬಂದಂತೆ ಬೈದು ಹಿಂಸೆ ನೀಡುತ್ತಿದ್ದ. ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಪ್ರಶ್ನಿಸಿದ್ದಕ್ಕೆ ಜಗಳ ಮಾಡುತ್ತಿದ್ದ. ಅಲ್ಲದೆ ಬಕ್ರೀದ್ ಹಬ್ಬದ ಸಮಯದಲ್ಲಿ ಮನೆಯಿಂದ ಚಿನ್ನದ ಒಡವೆ ಹಾಗೂ ಹಣ ತರುವಂತೆ ಕಿರುಕುಳ ನೀಡುತ್ತಿದ್ದ. ಇದನ್ನು ತರದ್ದಕ್ಕೆ ನನ್ನೊಂದಿಗೆ ಮಾತನಾಡದೆ ದುಬೈಗೆ ತೆರಳಿದ್ದ. ಅಲ್ಲದೆ ನಾವು ಹೇಳಿದ ಆಸ್ಪತ್ರೆಯಲ್ಲಿ ಕೆಲಸ ಮಾಡಿ ಹಣವನ್ನು ನಮಗೆ ನೀಡಬೇಕು ಎಂದು ಪತಿ ಕುಟುಂಬಸ್ಥರು ಬೆದರಿಕೆ ಹಾಕುತ್ತಿದ್ದರು. ಬೇರೆಯವರ ಚಾಡಿ ಮಾತು ಕೇಳಿ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದರು.
ನನ್ನ ಪತಿಯು ದುಬೈನಲ್ಲಿ ಬೆಟ್ಟಿಂಗ್ ಆಡುತ್ತಿದ್ದು, ಈ ವಿಚಾರವನ್ನು ಮನೆಯವರಿಗೆ ತಿಳಿಸಿದರೆ ಈ ಕುರಿತು ಯಾರಿಗಾದರೂ ಹೇಳಿದರೆ ನಿನ್ನ ಜೀವನವನ್ನು ಹಾಳು ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಅಲ್ಲದೆ ನನ್ನ ಬಟ್ಟೆ, ದಾಖಲಾತಿಗಳ ಸಮೇತ ನನ್ನನ್ನು ರೂಮ್‍ನಿಂದ ಹೊರಗೆ ಹಾಕಿದ್ದಾರೆ. ಈ ವಿಚಾರವಾಗಿ ಮನೆಯವರು ಜಗಳ ಮಾಡಿ ಹೊಡೆದಿದ್ದಾರೆ. ಅಲ್ಲದೆ ಪತಿ ತನ್ನ ಸ್ನೇಹಿತರಿಗೆ ನನ್ನ ಫೋಟೋ ಕಳುಹಿಸಿ ಕೆಟ್ಟ ಅಭಿಪ್ರಾಯ ಬರುವ ಹಾಗೆ ಅವಮಾನಿಸಿದ್ದಾನೆ. ನನ್ನ ಒಡವೆಗಳನ್ನು ಅವರ ಬಳಿಯೇ ಇಟ್ಟುಕೊಂಡಿದ್ದು, ಮರಳಿ ಕೇಳಿದರೆ ನೀನು ಸಂಪದಿಸಿದ ಹಣವನ್ನು ನಮಗೆ ನೀಡಬೇಕು ಎಂದು ಹೇಳುತ್ತಾರೆ.
ಈ ಕುರಿತು ಮಾತನಾಡಲು ನಮ್ಮ ಮನೆಯವರು ಪತಿಯ ಮನೆಗೆ ಬಂದರೆ ಜಗಳ ಮಾಡಿ ಹೊರಗೆ ಹೋಗುವಂತೆ ಹೇಳುತ್ತಾರೆ. ಫೋನ್ ಮಾಡಿದರೂ ಸಹ ಸ್ವೀಕರಿಸುವುದಿಲ್ಲ. ನನ್ನ ಪತಿ ದುಬೈನಿಂದ ಬಂದಿದ್ದನ್ನು ತಿಳಿದು ಮನೆಗೆ ಹೋದರೆ ಅವಾಚ್ಯ ಪದಗಳಿಂದ ನಿಂದಿಸಿ ಮನೆಗೆ ಸೇರಿಸಿಕೊಂಡಿಲ್ಲ. ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದಾರೆ.