ಗದಗ: ಚಾಕುವಿನಿಂದ ವ್ಯಕ್ತಿಯ ಕುತ್ತಿಗೆಗೆ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಬೆಟಗೇರಿಯ ಕುರಹಟ್ಟಿ ಪೇಟೆನಲ್ಲಿ ನಡೆದಿದೆ.
ಮಂಜುನಾಥ್ ಗದುಗಿನ(44) ಕೊಲೆಯಾದವರಾಗಿದ್ದು, ಇವರನ್ನು ಸಂಬಂಧಿಯಾದ ಪ್ರವೀಣ್ ಗದುಗಿನ(23) ಎಂಬ ಯುವಕ ಕೊಲೆ ಮಾಡಿದ್ದಾನೆ. ಪ್ರವೀಣ್ ಮನೆ ಬಳಿಬಂದು ಮಂಜುನಾಥ್ ಅಶ್ಲೀಲವಾಗಿ ಬೈದಾಡುತ್ತಿದ್ದ. ಇದರಿಂದ ರೊಚ್ಚಿಗೆದ್ದ ಯುವಕ ಕುತ್ತಿಗೆಗೆ ಚಾಕು ಹಾಕಿ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.
ಕೊಲೆಗೆ ನಿಜವಾದ ಕಾರಣ ತಿಳಿದುಬಂದಿಲ್ಲ. ಬೆಟಗೇರಿ ನಾಡ ಕಾರ್ಯಾಲಯ ಬಳಿ ಈ ಭೀಕರ ಹತ್ಯೆ ನಡೆದಿದೆ. ಘಟನೆ ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಬೆಟಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ನಾಪತ್ತೆಯಾದ ಆರೋಪಿಗೆ ಬಲೆ ಬೀಸಿದ್ದಾರೆ.
ಈ ಕುರಿತು ಗದಗನ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.