ರಾಯಚೂರು: ಅಶೋಕ್ ಗಸ್ತಿ ನಿಧನದಿಂದ ಖಾಲಿಯಾಗಿರುವ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಬಿಜೆಪಿಯಿಂದ ರಾಯಚೂರಿನ ಎರಡು ಹೆಸರುಗಳು ಮುಂಚೂಣಿಯಲ್ಲಿವೆ.
ಅಶೋಕ್ ಗಸ್ತಿಯವರ ಪತ್ನಿ ಸುಮಾ ಗಸ್ತಿಯವರಿಗೆ ಟಿಕೆಟ್ ನೀಡಬೇಕು ಅಂತ ಸ್ಥಳೀಯ ಕೆಲ ಬಿಜೆಪಿ ಮುಖಂಡರು, ಅಭಿಮಾನಿಗಳು ಒತ್ತಾಯ ಮಾಡಿದ್ದರು. ಹಾಗೆಯೇ ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಶಂಕರಪ್ಪ ಹೆಸರು ಮುಂಚೂಣಿಯಲ್ಲಿದೆ. ಜೊತೆಗೆ ನಿರ್ಮಲ್ ಕುಮಾರ್ ಸುರಾನಾ ಹೆಸರು ಸಹ ರೇಸ್ ನಲ್ಲಿದ್ದು ಮೂವರಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ ಅನ್ನೊದು ಇನ್ನೂ ಕುತೂಹಲ ಮೂಡಿಸಿದೆ.
Advertisement
Advertisement
ರಾಜ್ಯಸಭಾ ಟಿಕೆಟ್ ಗೆ ನನ್ನ ಹೆಸರು ಮೂಂಚೂಣಿಯಲ್ಲಿರುವ ಬಗ್ಗೆ ನನಗೆ ಗೊತ್ತಿಲ್ಲ ಅಂತ ಮಾಜಿ ಎಂಎಲ್ ಸಿ ಎನ್ ಶಂಕರಪ್ಪ ಹೇಳಿದ್ದಾರೆ. ನಮ್ಮ ಪಕ್ಷ, ರಾಜ್ಯದ ನಾಯಕರು ಏನು ನಿರ್ಣಯ ಮಾಡುತ್ತಾರೆ ಅದಕ್ಕೆ ಬದ್ಧನಾಗಿರುತ್ತೇನೆ. ನನಗೆ ಸಾಕಷ್ಟು ರಾಜಕೀಯ ಅನುಭವ ಇರುವುದರಿಂದ ರಾಜ್ಯಸಭಾ ಸ್ಥಾನ ನಿಭಾಯಿಸುವುದು ಕಷ್ಟವಲ್ಲ. ಆದ್ರೆ ನಾನಾಗಿ ಯಾವುದೇ ಸ್ಥಾನದ ಬಗ್ಗೆ ಪಕ್ಷಕ್ಕೆ ಕೇಳಿಲ್ಲ. ನಾನು ಪಕ್ಷದಲ್ಲಿ ದುಡಿಯುತ್ತಿದ್ದೇನೆ. ನನಗೆ ಟಿಕೆಟ್ ಬೇಕು ಅಂತ ನಾನು ಅರ್ಜಿ ಹಾಕಿಲ್ಲ ಎಂದಿದ್ದಾರೆ.
Advertisement
Advertisement
ಸದಾನಂದಗೌಡ ಮುಖ್ಯಮಂತ್ರಿಯಾದ ವೇಳೆ ಎಂ.ಎಲ್.ಸಿ ಸ್ಥಾನಕ್ಕೆ ರಾಜಿನಾಮೆ ನೀಡಿ ಎನ್.ಶಂಕರಪ್ಪ ತ್ಯಾಗ ಮಾಡಿದ್ದರು. ಇನ್ನೂ ಸುಮಾ ಗಸ್ತಿ ಸಹ ಪಕ್ಷದ ವಸಿಷ್ಠರ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಹೇಳಿದ್ದಾರೆ.