– ಸಂಬಂಧಿಕರಿಂದ ಅವನನ್ನು ಬಿಟ್ಟು ಹೋಗುವ ಪರಿಸ್ಥಿತಿ ಬಂದಿದೆ
ಮೆಕ್ಸಿಕೋ: ಅವನನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಪತ್ರ ಬರೆದು ಮಾಲೀಕನೋರ್ವ ತಾನು ಪ್ರೀತಿಯಿಂದ ಸಾಕಿದ್ದ ಶ್ವಾನವನ್ನು ಪಾರ್ಕಿನ ಬೆಂಚಿಗೆ ಕಟ್ಟಿ ಹೋಗಿರುವ ಘಟನೆ ಮೆಕ್ಸಿಕೋ ನಗರದಲ್ಲಿ ನಡೆದಿದೆ.
ತಾನು ಪ್ರೀತಿಯಿಂದ ಸಾಕಿದ್ದ ಶ್ವಾನವನ್ನು ಸಂಬಂಧಿಕರು ನಿಂದಿಸುತ್ತಾರೆ ಎಂಬ ಕಾರಣಕ್ಕೆ ಆತ ಇದನ್ನು ಬೇರೆಯವರಿಗೆ ಕೊಡುವ ತೀರ್ಮಾನ ಮಾಡಿದ್ದಾನೆ. ಅದಕ್ಕಾಗಿ ಒಂದು ಭಾವನಾತ್ಮಕ ಪತ್ರ ಬರೆದು ಶ್ವಾನವನ್ನು ಪಾರ್ಕಿನಲ್ಲಿರುವ ಬೆಂಚ್‍ಗೆ ಕಟ್ಟಿ, ಯಾರಾದರೂ ಇವನನ್ನು ದತ್ತು ತೆಗೆದುಕೊಂಡು ಚೆನ್ನಾಗಿ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದಾನೆ.
ಪತ್ರದಲ್ಲೇನಿದೆ?
ನಾನು ಈ ಪತ್ರದ ಮೂಲಕ ಶ್ವಾನವನ್ನು ದತ್ತು ಪಡೆಯಲು ಮತ್ತು ಅವವನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮನವಿ ಮಾಡುತ್ತೇನೆ. ನಾನು ಪ್ರೀತಿಯಿಂದ ಸಾಕಿದ್ದ ನಾಯಿಯನ್ನು ಈ ರೀತಿ ಬಿಟ್ಟುಹೋಗಲು ಬಹಳ ಬೇಸರವಾಗುತ್ತಿದೆ. ಆದರೆ ನನ್ನ ಸಂಬಂಧಿಕರು ಅವನನ್ನು ದಿನ ಬೈಯುತ್ತಾರೆ. ಅವರು ನಿಂದಿಸುವುದನ್ನು ನೋಡಲಾಗದೇ ಈ ತೀರ್ಮಾನ ಮಾಡಿದ್ದೇನೆ. ಈ ಪತ್ರ ಓದಿ ದತ್ತು ಪಡೆಯಬೇಕು ಎಂದರೆ ಕೆರೆದುಕೊಂಡು ಹೋಗಿ. ಇಲ್ಲ ಈ ಪತ್ರವನ್ನು ಬೇರೆಯವರಿಗಾಗಿ ಇಲ್ಲೇ ಬಿಟ್ಟು ಹೋಗಿ ಎಂದು ಬರೆದುಕೊಂಡಿದ್ದಾರೆ.
ತನ್ನ ಮಾಲೀಕನನ್ನು ಕಳೆದುಕೊಂಡ ಶ್ವಾನ ಬೆಂಚಿನ ಮೇಲೆ ಮಲಗಿಕೊಂಡು, ಬಂದು ಪತ್ರ ಓದುವವರನ್ನು ನೋಡುತ್ತಾ ಕುಳಿತ್ತಿದೆ. ಪತ್ರ ಓದಿದ ಯಾರೂ ಶ್ವಾನವನ್ನು ದತ್ತು ಪಡೆದುಕೊಂಡಿಲ್ಲ. ಕೊನೆಗೆ ಅನಿಮಲ್ ಚಾರಿಟಿಯವರು ಬಂದು ಶ್ವಾನವನ್ನು ಕರೆದುಕೊಂಡು ಹೋಗಿದ್ದಾರೆ. ಜೊತೆಗೆ ಶ್ವಾನಕ್ಕೆ ‘ಬೋಸ್ಟನ್’ ಎಂದು ನಾಮಕರಣ ಮಾಡಿದ್ದಾರೆ.