ಬೆಂಗಳೂರು: 16 ನೇ ಶತಮಾನದಲ್ಲಿ ನಿರ್ಮಿಸಲಾದ ಅಮಾನಿ ಕೆರೆಗೆ ದೂರದ ವಿದೇಶದಿಂದ ಪಕ್ಷಿಗಳು ಬಂದು ಮೊಟ್ಟೆ ಇಟ್ಟು ಮರಿ ಮಾಡಿಕೊಂಡು ಹೋಗುತ್ತವೆ. ರಾಜಧಾನಿ ಕೂಗಳತೆ ದೂರದಲ್ಲಿಯೇ ಅಮಾನಿ ಕೆರೆ ಇದೆ. ಆದರೂ ಅವನತಿಯ ಹಾದಿ ಹಿಡಿದಿದೆ.
Advertisement
ಹೊಸಕೋಟೆಯಲ್ಲಿರುವ ಅಮಾನಿಕೆರೆ ಬೆಂಗಳೂರಿಗೆ ಅತಿ ದೊಡ್ಡ ಕೆರೆ. ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿ ಇರೋ ಈ ಕೆರೆಗೆ ನವೆಂಬರ್ ಸಮಯದಲ್ಲಿ ವಿದೇಶದಿಂದ ಹಕ್ಕಿಗಳು ಆಗಮಿಸಿ ತಮ್ಮ ಸಂತಾನ ಬೆಳಸಿಕೊಂಡು ಹಿಂದಿರುಗುತ್ತವೆ. ಆ ಸಮಯದಲ್ಲಿ ಈ ಕೆರೆ ಹಕ್ಕಿಗಳ ಕಲರವದಿಂದ ಕೂಡಿರುತ್ತೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಈ ಕೆರೆ ಅವನತಿಯತ್ತ ಸಾಗುತ್ತಿದೆ ಎಂಬುದು ಸ್ಥಳೀಯರ ಅಳಲಾಗಿದೆ.
Advertisement
Advertisement
ಈ ಕೆರೆಗೆ ಯಾವುದೇ ರಕ್ಷಣೆ ಇಲ್ಲದಿಯುವುದು ಈ ಕೆರೆ ಹಾಳಾಗಲು ಪ್ರಮುಖ ಕಾರಣ ಎಂದು ಸ್ಥಳೀಯರು ಹೇಳುತ್ತಾರೆ. ಇನ್ನು ರಾತ್ರಿಯಾದ್ರೆ ಈ ಕೆರೆಯ ಬಯಲು ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಾಡುತ್ತೆ ಹೀಗಾಗಿ ಹಗಲು ಹೊತ್ತಿನಲ್ಲೇ ಜನ ಈ ಕೆರೆಯ ಬಳಿ ಓಡಾಡೋಕು ಭಯಪಡುತ್ತಾರೆ. ಇದನ್ನೂ ಓದಿ: ಕರ್ನಾಟಕದ ವಿರುದ್ಧ ಸಿಡಿದೆದ್ದ ಅಣ್ಣಾಮಲೈ..!
Advertisement
ಇನ್ನು ಈ ಕೆರೆ ಸುಮಾರು 16 ನೆ ಶತಮಾದಲ್ಲಿ ನಿರ್ಮಾಣವಾಗಿದ್ದು ಕೆರೆಗೆ ಹೊಂದಿಕೊಂಡಂತೆ ಗಂಗಮ್ಮ ಹಾಗೂ ಆಂಜನೇಯನ ದೇವಾಲಯವಿದೆ. ಈ ಕೆರೆಯ ಕಟ್ಟೆ ಈಗಾಗ್ಲೇ ಹಾಳಾಗಿದೇ ಇನ್ನು ಕೆರೆ ಬೆಂಗಳೂರಿಗೆ ಹೊಂದಿಕೊಂಡಂತಿದ್ದು ಸರ್ಕಾರ ಈ ಕೆರೆಯ ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಥಳೀಯರ ಪ್ರಕಾರ ಈ ಕೆರೆಯ ಸುತ್ತ ಫೆನ್ಸಿಂಗ್ ಅಳವಡಿಸಿ ಗೇಟ್ ಹಾಕಿ ಕಾವಲುಗಾರರನ್ನು ಇರಿಸಿ ಅಭಿವೃದ್ಧಿ ಮಾಡಿದ್ರೆ ಇದೊಂದು ಸುಂದರ ಪಕ್ಷಿಧಾಮ ಆಗುತ್ತೆ. ಆಗ ಪ್ರವಾಸಿ ತಾಣವಾಗಿ ಮಾರ್ಪಾಡಾಗುತ್ತೆ ಅಂತ ಪಕ್ಷಿ ಪ್ರಿಯರೊಬ್ಬರು ತಿಳಿಸುತ್ತಾರೆ. ಇದನ್ನೂ ಓದಿ: ಸಿಎಂ ಬೊಮ್ಮಾಯಿಗಿದೆ ದೊಡ್ಡ ಸವಾಲು – ಅತಿವೃಷ್ಠಿ, ಪ್ರವಾಹ, 3ನೇ ಅಲೆಯೇ ಟ್ರಬಲ್