ಅವಧಿ ಮೀರಿದ ಮಾತ್ರೆಗಳಿಂದ ತಯಾರಾದ ದುರ್ಗಾ ದೇವಿ

Public TV
1 Min Read
MEDICINE

– ಕಲಾವಿದನ ಕಲೆಗೆ ನೆಟ್ಟಿಗರು ಫಿದಾ

ಡಿಸ್ಪುರ್: ಇಡೀ ಜಗತ್ತು ಕೊರೊನಾ ವೈರಸ್ ನಿಂದ ನಲುಗಿ ಹೋಗಿದೆ. ಈ ವೈರಸ್ ನಿಂದ ಹೋರಾಡಲು ಪ್ರತಿಯೊಬ್ಬರಿಗೂ ಶಕ್ತಿ ನೀಡಲು ಅಸ್ಸಾಂ ಮೂಲದ ವ್ಯಕ್ತಿಯೊಬ್ಬರು ಅವಧಿ ಮೀರಿದ ಮಾತ್ರೆಗಳು ಹಾಗೂ ಇಂಜೆಕ್ಷನ್ ಬಾಟ್ಲಿಗಳಿಂದ ದುರ್ಗಾ ದೇವಿಯ ವಿಗ್ರಹವನ್ನು ತಯಾರಿಸಿದ್ದಾರೆ.

MEDICINE 1

ವ್ಯಕಿಯನ್ನು ಸಂಜೀಬ್ ಬಸಾಕ್ ಎಂದು ಗುರುತಿಸಲಾಗಿದ್ದು, ಇವರು ಧುಬ್ರಿ ಜಿಲ್ಲಾಡಳಿದ ಉದ್ಯೋಗಿಯಾಗಿದ್ದಾರೆ. ಇವರು ಕಳೆದ ಕೆಲವು ವರ್ಷಗಳಿಂದ ವಿವಿಧ ರೀತಿಗಳಲ್ಲಿ ವಿಗ್ರಹಗಳನ್ನು ವಿನ್ಯಾಸಗೊಳಿಸುವುದು ಹಾಗೂ ಪರಿಸರ ಸ್ನೇಹಿ ವಿಚಾರಗಳನ್ನು ಮಂಡಿಸಿದ್ದಾರೆ. ಆದರೆ ಈ ವರ್ಷ ಕೋವಿಡ್ 19 ಬಿಕ್ಕಟ್ಟಿನ ಮಧ್ಯೆ ಹೊಸದೇನಾದರೂ ಮಾಡಬೇಕು ಎಂದು ಬಯಸಿದ್ದರು. ಸರ್ಕಾರಿ ನೌಕರ ತಯಾರಿಸಿದ ದೇವಿ ವಿಗ್ರಹ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ವ್ಯಕ್ತಿಯ ಕಲೆಗೆ ನೆಟ್ಟಿಗರು ಭೇಷ್ ಎಂದಿದ್ದಾರೆ.

MEDICINE 2

ಲಾಕ್‍ಡೌನ್ ಸಮಯದಲ್ಲಿ ಜನಸಾಮಾನ್ಯರು ಔಷಧಿಗಳನ್ನು ಕೊಂಡುಕೊಳ್ಳಲು ಮೆಡಿಕಲ್ ಗಳ ಮುಂದೆ ಜನ ಸಾಲುಗಟ್ಟಿ ನಿಂತಿರುವುದನ್ನು ಗಮನಿಸಿದ್ದೆ. ಈ ಹಿನ್ನೆಲೆಯಲ್ಲಿ ಔಷಧಿಗಳಿಂದ ದುರ್ಗಾ ದೇವಿಯ ವಿಗ್ರಹವನ್ನು ತಯಾರಿಸುವ ಆಲೋಚನೆ ಮಾಡಿದೆ ಎಂದು ಬಸಾಕ್ ತಿಳಿಸಿದ್ದಾರೆ.

ಕಳೆದ ವರ್ಷ ಇವರು ವಿದ್ಯುತ್ ವಯರ್ ಗಳಿಂದ ತಯಾರಿಸಿದ್ದರು. ಬಸಾಕ್ ಅವರು ಈ ವಿಗ್ರಹ ತಯಾರಿಸಲು ಸುಮಾರು 5 ತಿಂಗಳು ತೆಗೆದುಕೊಂಡಿದ್ದಾರೆ. ಸುಮಾರು 40 ಸಾವಿರ ಮಾತ್ರೆಗಳು ಹಾಗೂ ವಿವಿಧ ಬಣ್ಣಗಳ ಇಂಜೆಕ್ಷನ್ ಬಾಟ್ಲಿಗಳ ಮೂಲಕ ಅವರ ಕಲ್ಪನೆಗೆ ಆಕಾರ ನೀಡಿದ್ದಾರೆ.

MEDICINE 3

ಆರಂಭದಲ್ಲಿ ಕೆಲಸದ ಒತ್ತಡ ಹಾಗೂ ಕಟ್ಟುನಿಟ್ಟಾದ ಕೊರೊನಾ ನಿಯಮಗಳಿಂದ ವಿಗ್ರಹ ತಯಾರಿಸಲು ಸಾಧ್ಯವಾಗಿರಲಿಲ್ಲ. ಕೊನೆಗೆ ಅವಧಿ ಮೀರಿದ ಮಾತ್ರೆಗಳಿಂದ ದೇವಿ ವಿಗ್ರಹ ತಯಾರಿಸಲು ಪ್ಲಾನ್ ಮಾಡಿದೆ ಎಂದರು. ಮಾತ್ರೆಗಳನ್ನು ಅಂಟಿಸಲು ಪೇಪರ್ ಹಾಗೂ ಥರ್ಮೋಕಾಲ್ ಗಳನ್ನು ಬಳಸಿರುವುದಾಗಿಯೂ ಬಸಾಕ್ ವಿವರಿಸಿದ್ದಾರೆ.

MEDICINE 4

Share This Article
Leave a Comment

Leave a Reply

Your email address will not be published. Required fields are marked *