– ಕಥೆ ಕಟ್ಟಿ ಚಿನ್ನಾಭರಣ ತೊಗೊಂಡ್ಳು
– ಸುಳ್ಳನ್ನ ಸ್ಪಷ್ಟತೆಯಿಂದ ಹೇಳೋದು ಆ ಮಹಿಳೆಯ ಕೆಲಸ
ಬೆಂಗಳೂರು: ಅಂದು ನನಗೆ ನಂದಿನಿ ಹೆಸರಿನಲ್ಲಿ ಪರಿಚಯವಾಗಿದ್ದ ಮಹಿಳೆಯೇ ಇವತ್ತಿನ ಅರುಣಾ ಕುಮಾರಿ. ಹೀಗೆ ಸುಮ್ಮನಾದ್ರೆ ಈ ಮಹಿಳೆ ಮತ್ತೆ ಇನ್ನಷ್ಟು ಜನರದಲ್ಲಿ ಜೀವನದಲ್ಲಿ ಆಟ ಆಡುವ ಸಾಧ್ಯತೆಗಳಿವೆ. ಮುಂದೆ ಯಾರಿಗೂ ಮೋಸ ಆಗಬಾರದು ಎಂದು ಮಾಧ್ಯಮಗಳ ಮುಂದೆ ಬಂದಿದ್ದೇನೆ.
ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಜೊತೆಯಲ್ಲಿ ನಾಗವರ್ಧನ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಅರುಣಾ ಕುಮಾರಿ ಅಲಿಯಾಸ್ ನಂದಿತಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ನಾಗೇಂದ್ರ ಪ್ರಸಾದ್ ಮತ್ತು ನನ್ನ ಗೆಳೆತನ ಕೊನೆಯಾಗಲು ಕಾರಣ ಈ ಮಹಿಳೆ. ಕಳೆದ ನಾಲ್ಕೈದು ವರ್ಷಗಳಿಂದ ನಾಗೇಂದ್ರ ಪ್ರಸಾದ್ ಜೊತೆ ಮಾತಾಡಿರಲಿಲ್ಲ. ನಿನ್ನೆಯಿಂದ ಸುದ್ದಿಗಳನ್ನು ನೋಡಿ, ನಮಗಾದ ಸ್ಥಿತಿ ಬೇರೆಯವರಿಗೆ ಬರೋದು ಬೇಡ. ಆ ಒಂದು ಕಾರಣಕ್ಕೆ ನಾಗೇಂದ್ರ ಅವರಿಗೆ ನಾನೇ ಫೋನ್ ಮಾಡಿ ಸುದ್ದಿಗೋಷ್ಠಿ ಮಾಡುತ್ತಿದ್ದೇನೆ ಎಂದು ಹೇಳಿದರು.
Advertisement
Advertisement
ನಾಗವರ್ಧನ್ ಹೇಳಿದ್ದೇನು?:
2015 ಸೆಪ್ಟಂಬರ್ ವೇಳೆ ಫೇಸ್ಬುಕ್ನಲ್ಲಿ ನಂದಿತಾ ಹೆಸರಿನಲ್ಲಿ ಈ ಮಹಿಳೆಯ ಪರಿಚಯವಾಯ್ತು. ಸದ್ಯ ದರ್ಶನ್ ಪ್ರಕರಣದಲ್ಲಿ ನಂದಿತಾ ಹೆಸರು ಬದಲಾಗಿ ಅರುಣಾ ಕುಮಾರಿ ಆಗಿದೆ. ತಂದೆ ಡೈರಿಯಲ್ಲಿ ಕೆಲಸ ಮಾಡುತ್ತಿದ್ದು, ತೆಲಗು ರಿಮೇಕ್ ಚಿತ್ರ ಮಾಡುತ್ತಿದ್ದೇನೆ. ಆ ಚಿತ್ರಕ್ಕೆ ನಿಮ್ಮನ್ನೇ ಹೀರೋ ಮಾಡ್ತೀನಿ. ಕನಕಪುರ ಬಳಿಯಲ್ಲಿರುವ 10-12 ಕೋಟಿ ಕಾಮಗಾರಿಯ ಪ್ರೊಜೆಕ್ಟ್ ಕೊಡಿಸುತ್ತೇನೆ ಎಂದು ಹಲವು ಆಫರ್ ನೀಡಿ ನನ್ನ ಸ್ನೇಹ ಸಂಪಾದಿಸಿಕೊಂಡಳು. ಇದನ್ನೂ ಓದಿ: ಸೆಪ್ಟೆಂಬರ್ 11ಕ್ಕೆ NEET ಪರೀಕ್ಷೆ
Advertisement
Advertisement
ಸ್ನೇಹ ಬೆಳೆಯುತ್ತಿದ್ದಂತೆ 6 ಲಕ್ಷ ರೂಪಾಯಿ ಸೇರಿದಂತೆ, ಚಿನ್ನಾಭರಣ ಪಡೆದುಕೊಂಡಳು. ಸುಳ್ಳನ್ನು ನಂಬುವಂತೆ ಸ್ಪಷ್ಟವಾಗಿ ಹೇಳೋದು ಈ ಮಹಿಳೆಯ ಕಲೆ. ನಂತರ ಹಂತ ಹಂತವಾಗಿ ನನ್ನ ಸ್ನೇಹಿತರನ್ನು ನನ್ನಿಂದ ದೂರ ಮಾಡಿದಳು. ಈಗ ಉಮಾಪತಿ ಮತ್ತು ದರ್ಶನ್ ಪ್ರಕರಣದಲ್ಲಿಯೂ ಸ್ನೇಹಿತರ ಮಧ್ಯೆಯೇ ಜಗಳ ಆಗುತ್ತಿದೆ. ನನ್ನ ಸ್ನೇಹಿತರು ಮಹಿಳೆಗೆ ಹಣ ನೀಡಿ ಮೋಸಕ್ಕೆ ಒಳಗಾಗಿದ್ದಾರೆ. ಈ ಸಂಬಂಧ 2015ರಲ್ಲಿಯೇ ಅರುಣಾ ಕುಮಾರಿ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ನಾಗವರ್ಧನ್ ಹೇಳಿದ್ದಾರೆ. ಇದನ್ನೂ ಓದಿ: ಅರುಣಾ ಕುಮಾರಿ ತುಂಬಾ ಫ್ರಾಡ್: ಉದ್ಯಮಿ ನಾಗವರ್ಧನ್