– ಜೀವನ ನಡೆಸಲು ಚಹಾ ಮಾರಾಟ
ಭೂಪಾಲ್: ರಾಷ್ಟ್ರೀಯ ಚೆಸ್ ಆಟಗಾರ ಕುಲದೀಪ್ ಚೌಹಾನ್ ಅವಕಾಶಗಳ ಕೊರತೆ ಹಾಗೂ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕಾಲೇಜಿನ ಎದುರು ಚಹಾ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ನನಗೆ ಕ್ರೀಡೆಯಲ್ಲಿ ಮುಂದುವರಿಯಲು ಅವಕಾಶ ಸಿಗುತ್ತಿಲ್ಲ. ಮನೆಯಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲ, ಹಾಗಾಗಿ ನಾನು ಕೆಲಸ ಮಾಡುತ್ತಿದ್ದೇನೆ. ನನ್ನ ಆರ್ಥಿಕ ಪರಿಸ್ಥಿತಿಯಿಂದಾಗಿ ಇಡೀ ಜೀವನವನ್ನು ಆಟಕ್ಕಾಗಿ ಮುಡಿಪಾಗಿಡಲು ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದು ಕುಲದೀಪ್ ಚೌಹಾನ್ ಬೇಸರ ವ್ಯಕ್ತಪಡಿಸಿದ್ದಾರೆ.
Advertisement
मध्य प्रदेश: राष्ट्रीय शतरंज खिलाड़ी कुलदीप चौहान धार में एक पी.जी. कॉलेज के बाहर चाय बेचने का काम कर रहे हैं।
उन्होंने बताया, “मुझे आगे बढ़ने का मौका नहीं मिल रहा है। घर की स्थिति अच्छी नहीं है इसलिए काम कर रहा हूं। सारा जीवन मैं खेल में नहीं निकाल सकता हूं।” pic.twitter.com/DBAK9BREPW
— ANI_HindiNews (@AHindinews) March 7, 2021
Advertisement
ಕುಲದೀಪ್ ಚೌಹಾನ್ ಮಧ್ಯಪ್ರದೇಶದ ಕಾಲೇಜ್‍ವೊಂದರ ಎದುರು ಟೀ ಮಾರಾಟ ಮಾಡುತ್ತಿರುವ ಫೆÇೀಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅವಕಾಶ ಸಿಗದ ಕಾರಣ ಇಂತಹ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
Advertisement
ಭಾರತದಲ್ಲಿ ಅಸಂಖ್ಯಾತ ಪ್ರತಿಭೆಗಳು ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಅವಕಾಶದಿಂದ ವಂಚಿತರಾಗುತ್ತಿದ್ದವರ ಸಾಲಿಗೆ ಮಧ್ಯಪ್ರದೇಶದ ರಾಷ್ಟ್ರೀಯ ಚೆಸ್ ಆಟಗಾರ ಕುಲದೀಪ್ ಚೌಹಾನ್ ಅವರ ಹೆಸರು ಕೇಳಿ ಬಂದಿದೆ.
Advertisement
ಟ್ವಿಟ್ಟರ್‌ನಲ್ಲಿ ಟೀ ಮಾರುತ್ತಿರುವ ಫೋಟೋಗಳು ಹರಿದಾಡುತ್ತಿದ್ದಂತೆ ಅನೇಕರು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಅವರನ್ನು ಟ್ಯಾಗ್ ಮಾಡಿ ಆಟಗಾರನ ಬಗ್ಗೆ ಗಮನ ಹರಿಸಿ ಸಹಾಯ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.