ಮುಂಬೈ: ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಮನೆಯಂಗಳವನ್ನ ಎನ್‍ಸಿಬಿ ನೋಟಿಸ್ ತಲುಪಿದ್ದು, ನಾಳೆ (ಡಿಸೆಂಬರ್ 16)ರಂದು ಬೆಳಗ್ಗೆ 11 ಗಂಟೆಗೆ ಮುಂಬೈನಲ್ಲಿರುವ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
Advertisement
ಇದಕ್ಕೂ ಮೊದಲು ನವೆಂಬರ್ 13ರಂದು ಅರ್ಜುನ್ ರಾಂಪಾಲ್ ಅವರನ್ನ ಎನ್‍ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ನವೆಂಬರ್ 13ರಂದು ಏಳು ಗಂಟೆಗಳ ಕಾಲ ಅರ್ಜುನ್ ವಿಚಾರಣೆ ನಡೆದಿತ್ತು. ಕೆಲ ದಿನಗಳ ಹಿಂದೆ ಅರೆಸ್ಟ್ ಆಗಿರೋ ಡ್ರಗ್ಸ್ ಪೆಡ್ಲರ್ ಗಳು ಅರ್ಜುನ್ ಹೆಸರು ಹೇಳಿದ ಹಿನ್ನೆಲೆ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ.
Advertisement
Advertisement
ನವೆಂಬರ್ 9ರಂದು ಅರ್ಜುನ್ ರಾಂಪಾಲ್ ನಿವಾಸದ ಮೇಲೆ ದಾಳಿ ನಡೆಸಿದ್ದ ಎನ್‍ಸಿಬಿ ಅಧಿಕಾರಿಗಳಿಗೆ ಕೆಲ ನಿಷೇಧಿತ ಮಾತ್ರೆಗಳು ಸಿಕ್ಕಿದ್ದವು ಎನ್ನಲಾಗಿದೆ. ದಾಳಿ ಬಳಿಕ ನವೆಂಬರ್ 11 ಮತ್ತು 12 ಎರಡೂ ದಿನ ಅರ್ಜುನ್ ಗೆಳತಿ ಗ್ಯಾಬ್ರಿಯೆಲಾರನ್ನ ವಿಚಾರಣೆ ನಡೆಸಿತ್ತು. ನವೆಂಬರ್ 13ರಂದು ಎನ್‍ಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದ ರಾಂಪಾಲ್ ತನಿಖೆಗೆ ಸಂಪೂರ್ಣ ಸಹಕರಿಸಿದ್ದಾರೆ ಎಂದು ಹೇಳಲಾಗಿತ್ತು.
Advertisement
ದಾಳಿ ವೇಳೆ ಅರ್ಜುನ್ ರಾಂಪಾಲ್ ಮತ್ತು ಗ್ಯಾಬ್ರಿಯಾಲರ ಮೊಬೈಲ್ ಫೋನ್, ಲ್ಯಾಪ್‍ಟಾಪ್ ವಶಕ್ಕೆ ಪಡೆದುಕೊಂಡಿದ್ದರು. ದಾಳಿ ದಿನವೇ ಅರ್ಜುನ್ ರಾಂಪಾಲ್ ಚಾಲಕನನ್ನ ಹಲವು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು.
ಅಕ್ಟೋಬರ್ 19ರಂದು ಗೆಬ್ರಿಯೆಲಾ ಸೋದರ ಅಗಿಸಿಲಾಓಸ್ ನನ್ನು ಪುಣೆಯ ಲೋನಾವಾಲಾ ಬಳಿ ಬಂಧಿಸಿದ್ದರು. ಬಂಧಿತ ಅಗಿಸಿಲಾಓಸ್ ಬಾಲಿವುಡ್ ಅಂಗಳದ ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗ್ತಿದೆ. ಅಗಿಸಿಲಾಓಸ್ ಪೆಡ್ಲರ್ ಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿರುವ ಆರೋಪ ಸಹ ಕೇಳಿ ಬಂದಿದೆ. ಮೃತ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿ ಮತ್ತು ಶೌವಿಕ್ ಜೊತೆ ಅಗಿಸಿಲಾಓಸ್ ನಿರಂತರ ಸಂಪರ್ಕದಲ್ಲಿದ್ದನು.